ಗಂಗರ ಶಿಲಾ ಶಾಸನ  
ರಾಜ್ಯ

ಬೆಂಗಳೂರು ಗ್ರಾಮಾಂತರ: ದೇವಾಲಯ ಜಾಗದಲ್ಲಿದ್ದ 5ನೇ ಶತಮಾನದ ಗಂಗರ ಶಿಲಾ ಶಾಸನ ನಾಪತ್ತೆ!

ಶಾಸನದಲ್ಲಿ ಸಂಸ್ಕೃತವನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿತ್ತು. ಅದರಲ್ಲಿ 20 ಸಾಲುಗಳ ಶ್ಲೋಕಗಳಿದ್ದವು. ಈ ಶಾಸನದಲ್ಲಿ ಅತ್ಯಂತ ಮಹತ್ವ ಪೂರ್ಣ ವಿಷಯ ದಾಖಲಿಸಲಾಗಿತ್ತು. ಇದನ್ನು ಕಳೆದ ವರ್ಷ ಪ್ರಕಟಿಸಲಾಗಿತ್ತು. ಇದನ್ನು ಮಿಥಿಕ್ ಸೊಸೈಟಿ ನವರು ಸ್ಕ್ಯಾನಿಂಗ್ ಮಾಡಿಕೊಂಡಿದ್ದಾರೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಗ್ರಾಮದ ದೇವಸ್ಥಾನದ ಜಾಗದಲ್ಲಿದ್ದ 5ನೇ ಶತಮಾನದ ಗಂಗ ರಾಜವಂಶದ ಶಿಲಾ ಶಾಸನವೊಂದು ನಾಪತ್ತೆಯಾಗಿರುವ ಬಗ್ಗೆ ಇತಿಹಾಸಕಾರರು, ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಗಂಗ ಅರಸರು ನೀಡಿದ ದೇಣಿಗೆಯ ಬಗ್ಗೆ ಹೇಳುವ ಶಿಲಾ ಶಾಸನ ನಾಪತ್ತೆಯಾಗಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರು, ಶಿಲಾ ಶಾಸನ ಮತ್ತು ವೀರಗಲ್ಲುಗಳನ್ನು ಅಧ್ಯಯನ ಮಾಡುವ ಸಂಶೋಧಕರು ಹೇಳಿದ್ದಾರೆ. ಶಿಲಾ ಶಾಸನವನ್ನು ನಾಶಪಡಿಸಿ, ದೇವಾಲಯಕ್ಕೆ ಹೊಂದಿಕೊಂಡಂತೆ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಸಂಶೋಧಕ ಹಾಗೂ ಅಕಾಡೆಮಿ ಸದಸ್ಯ ಮಧುಸೂಧನ್ ಕೆ.ಆರ್. ಅಧ್ಯಯನದ ಸಮಯದಲ್ಲಿ ಗ್ರಾಮದಲ್ಲಿ ಕಲ್ಲಿನ ಶಾಸನ ಇರುವುದನ್ನು ತಿಳಿದುಬಂದಿತ್ತು. ನಂತರ ಗ್ರಾಮಸ್ಥರ ಅದರ ಮಹತ್ವವನ್ನು ತಿಳಿಸಿ, ಅದನ್ನು ರಕ್ಷಿಸಬೇಕಾದ ಅಗತ್ಯತೆಯನ್ನು ಹೇಳಿದ್ದೆ. ಅದನ್ನು ಮ್ಯೂಸಿಯಂಗೆ ಸ್ಥಳಾಂತರಿಸುವಂತೆಯೂ ಸೂಚಿಸಿದ್ದೆ. ಗ್ರಾಮಸ್ಥರು ಕೂಡಾ ಅದನ್ನು ರಕ್ಷಿಸುವುದಾಗಿ ಭರವಸೆ ನೀಡಿದ್ದರು. ಮೂರು ದಿನಗಳ ಹಿಂದೆ ಹೆಚ್ಚಿನ ಅಧ್ಯಯನಕ್ಕಾಗಿ ಮತ್ತೊಮ್ಮೆ ಶಾಸನದ ಛಾಯಾಚಿತ್ರ ತೆಗೆಯಲು ಸ್ಥಳಕ್ಕೆ ಹೋದಾಗ ಅದು ಕಾಣೆಯಾಗಿತ್ತು ತಿಳಿಸಿದರು.

ಶಾಸನದಲ್ಲಿ ಸಂಸ್ಕೃತವನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿತ್ತು. ಅದರಲ್ಲಿ 20 ಸಾಲುಗಳ ಶ್ಲೋಕಗಳಿದ್ದವು. ಈ ಶಾಸನದಲ್ಲಿ ಅತ್ಯಂತ ಮಹತ್ವ ಪೂರ್ಣ ವಿಷಯ ದಾಖಲಿಸಲಾಗಿತ್ತು. ಇದನ್ನು ಕಳೆದ ವರ್ಷ ಪ್ರಕಟಿಸಲಾಗಿತ್ತು. ಇದನ್ನು ಮಿಥಿಕ್ ಸೊಸೈಟಿ ನವರು ಸ್ಕ್ಯಾನಿಂಗ್ ಮಾಡಿಕೊಂಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಶೋಧನೆ ಆಗಿರಲಿಲ್ಲ. ಅದಾಗಲೇ ನಾಶ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಕಾಡೆಮಿ ಅಧ್ಯಕ್ಷ ದೇವರ ಕುಂದ ರೆಡ್ಡಿ ಮಾತನಾಡಿ, ‘ರಾಜ್ಯ ಪುರಾತತ್ವ ಇಲಾಖೆ ಇಂತಹ ಮಹತ್ವದ ಶಾಸನ ಮತ್ತು ನಿವೇಶನದತ್ತ ಗಮನ ಹರಿಸದಿರುವುದು ವಿಷಾದನೀಯ. ಇದು ರಾಜ್ಯ ಮತ್ತು ದೇಶದ ಇತಿಹಾಸದ ಒಂದು ಭಾಗವಾಗಿದೆ, ಅದು ಈಗ ಕಳೆದುಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲಾ ಸ್ಥಳಗಳು ಮತ್ತು ಶಾಸನಗಳ ರಕ್ಷಣೆ ರಾಜ್ಯ ಮತ್ತು ಜನರ ನೈತಿಕ ಜವಾಬ್ದಾರಿಯಾಗಿದೆ ಎಂದು ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು ಎ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಈ ಬಗ್ಗೆ ವಿಸ್ತೃತ ವರದಿ ಪಡೆದು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT