ಸಾಂದರ್ಭಿಕ ಚಿತ್ರ 
ರಾಜ್ಯ

ತುಮಕೂರು: ಮಧುಗಿರಿ ಬಳಿ ಕರಡಿಗಳ ದಾಳಿಯಲ್ಲಿ ಮಹಿಳೆಗೆ ಗಂಭೀರ ಗಾಯ

ಮಧ್ಯಾಹ್ನ ಹೊಲದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ ಎಲ್ಲಿಂದಲೋ ಮೂರು ಕರಡಿಗಳು ಕಾಣಿಸಿಕೊಂಡವು, ಅದರಲ್ಲಿ ಒಂದು ಕರಡಿ ಮೇಲೆ ದಾಳಿ ಮಾಡಿತು. ಅವರು ಕಿರುಚಿದಾಗ, ಅವರ ಪತಿ ನಾಗರಾಜು ಹಾಗೂ ಹತ್ತಿರದಲ್ಲಿದ್ದ ಇತರರು ಬಂದು ಕರಡಿಯನ್ನು ಓಡಿಸಿದ್ದಾರೆ.

ಮಧುಗಿರಿ: ಗದ್ದೆಯಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ಮಹಿಳೆಯ ಮೇಲೆ ಹಗಲು ಹೊತ್ತಿನಲ್ಲಿ ಕರಡಿಯೊಂದು ದಾಳಿ ಮಾಡಿದೆ. ಪುರವರ ಹೋಬಳಿಯ ಭಾಗ್ಯಮ್ಮ ತಲೆಗೆ ತೀವ್ರ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧ್ಯಾಹ್ನ ಹೊಲದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ ಎಲ್ಲಿಂದಲೋ ಮೂರು ಕರಡಿಗಳು ಕಾಣಿಸಿಕೊಂಡವು, ಅದರಲ್ಲಿ ಒಂದು ಕರಡಿ ಮೇಲೆ ದಾಳಿ ಮಾಡಿತು. ಅವರು ಕಿರುಚಿದಾಗ, ಅವರ ಪತಿ ನಾಗರಾಜು ಹಾಗೂ ಹತ್ತಿರದಲ್ಲಿದ್ದ ಇತರರು ಧಾವಿಸಿ ಬಂದು ಕಾಡು ಪ್ರಾಣಿಯನ್ನು ಓಡಿಸಿದರು.

ದಾಳಿಯಲ್ಲಿ ಮಹಿಳೆಯ ತಲೆ ಬಹುತೇಕ ಗಾಯವಾಗಿದೆ ಮತ್ತು ಅವರ ಕೈಗಳು ಸಹ ತೀವ್ರವಾಗಿ ಗಾಯಗೊಂಡಿದ್ದವು.

ರೇಂಜ್ ಫಾರೆಸ್ಟ್ ಆಫೀಸರ್ ಮುತ್ತುರಾಜು ಸ್ಥಳಕ್ಕೆ ಭೇಟಿ ನೀಡಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಮಹಿಳೆಯ ಚಿಕಿತ್ಸೆಗೆ ಸಹಾಯ ಮಾಡಲಾಗುವುದು ಎಂದು ಅರಣ್ಯ ಅಧಿಕಾರಿ ಸುರೇಶ್ ತಿಳಿಸಿದ್ದಾರೆ. ಸ್ಥಳದಲ್ಲಿ ಬೋನ್ ಇರಿಸಿ ಕರಡಿಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT