ಕಣ್ಣಿನ ತಪಾಸಣೆ (ಸಾಂಕೇತಿಕ ಚಿತ್ರ) TNIE
ರಾಜ್ಯ

ರಾಜ್ಯದ ಆಶಾಕಿರಣ ಯೋಜನೆಗೆ WHO ಮೆಚ್ಚುಗೆ; ಜಾಗತಿಕ ಮಾದರಿಯಾಗಿ ದಾಖಲಿಸಲು ಪ್ರಸ್ತಾಪ

ಈ ಸಂಬಂಧ WHOನ ಭಾರತದ ಪ್ರತಿನಿಧಿ ಡಾ. ರೊಡೆರಿಕೊ ಎಚ್ ಆಫ್ರಿನ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರ ಆರಂಭಿಸಿದ ಕಣ್ಣಿನ ಆರೈಕೆಗೆ ಸಂಬಂಧಿಸಿದ ಆಶಾ ಕಿರಣ ಯೋಜನೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಮೆಚ್ಚುಗೆ ವ್ಯಕ್ತಪಡಿಸಿದ್ದು, ಯೋಜನೆಯ ಸಮಗ್ರ ಮೌಲ್ಯಮಾಪನ ಮತ್ತು ಜನ-ಕೇಂದ್ರಿತ ಕಣ್ಣಿನ ಆರೋಗ್ಯಕ್ಕಾಗಿ ಜಾಗತಿಕ ಮಾದರಿಯಾಗಿ ದಾಖಲಿಸುವ ಪ್ರಸ್ತಾಪ ಮಾಡಿದೆ.

ಈ ಸಂಬಂಧ WHOನ ಭಾರತದ ಪ್ರತಿನಿಧಿ ಡಾ. ರೊಡೆರಿಕೊ ಎಚ್ ಆಫ್ರಿನ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ ಅವರಿಗೆ ಪತ್ರ ಬರೆದಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಪ್ರಮಾಣಿತ ಸಾಧನಗಳಾದ ಕಣ್ಣಿನ ಆರೈಕೆ ಪರಿಸ್ಥಿತಿ ವಿಶ್ಲೇಷಣೆ ಪರಿಕರ(ECSAT) ಮತ್ತು ಕಣ್ಣಿನ ಆರೈಕೆ ಸೂಚಕ ಮೆನು(ECIM) ಬಳಸಿಕೊಂಡು ಕಾರ್ಯಕ್ರಮದ ಸಮಗ್ರ ಮೌಲ್ಯಮಾಪನ ಮಾಡುತ್ತದೆ ಎಂದು ಹೇಳಿದ್ದಾರೆ.

ಯೋಜನೆಯ ಪ್ರಕ್ರಿಯೆಗಳು, ಫಲಿತಾಂಶಗಳು ಮತ್ತು ಉತ್ತಮ ಅಭ್ಯಾಸಗಳನ್ನು ನಿರ್ಣಯಿಸುವುದು ಮತ್ತು ಕಣ್ಣಿನ ಆರೈಕೆಯಲ್ಲಿ ಜಾಗತಿಕ ಜ್ಞಾನ ಹಂಚಿಕೆಗೆ ಕೊಡುಗೆ ನೀಡುವುದು ಇದರ ಉದ್ದೇಶವಾಗಿದೆ. ಈ ಮೌಲ್ಯಮಾಪನವನ್ನು WHO ರಾಜ್ಯಕ್ಕೆ ಯಾವುದೇ ವೆಚ್ಚವಿಲ್ಲದೆ ಸ್ವತಂತ್ರವಾಗಿ ನಡೆಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮೌಲ್ಯಮಾಪನ ಪ್ರಕ್ರಿಯೆ ನಡೆಸಲು ನೋಡಲ್ ಅಧಿಕಾರಿಯನ್ನು ನಾಮನಿರ್ದೇಶನ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆ ರಾಜ್ಯ ಸರ್ಕಾರವನ್ನು ಕೇಳಿಕೊಂಡಿದೆ.

ಸಮಗ್ರ ಕಣ್ಣಿನ ಆರೈಕೆಗಾಗಿ ಆಶಾ ಕಿರಣ ಮಾದರಿ ಯೋಜನೆಯಾಗಿದ್ದು, ಮನೆ ಬಾಗಿಲಿನಲ್ಲಿ ಕಣ್ಣಿನ ಆರೈಕೆ ಎಂಬ ಆಶಾ ಕಿರಣ ಪರಿಕಲ್ಪನೆ ಅನುಕರಣೀಯವಾಗಿದೆ. ಈ ನವೀನ ಮಾದರಿಯು, ಕುರುಡುತನವನ್ನು ತೊಡೆದುಹಾಕುವ ಮತ್ತು ರಾಜ್ಯಾದ್ಯಂತ ಸಮಗ್ರ ಕಣ್ಣಿನ ಆರೈಕೆ ಸೇವೆಗಳಿಗೆ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT