ಅಮಾನತು (ಸಾಂಕೇತಿಕ ಚಿತ್ರ) 
ರಾಜ್ಯ

ಜಾತಿ ಗಣತಿ ವೇಳೆ ಕರ್ತವ್ಯ ಲೋಪ: ನಿರ್ಲಕ್ಷ್ಯ ವಹಿಸಿದ್ದ ಮತ್ತೋರ್ವ ಸಿಬ್ಬಂದಿ ಅಮಾನತು

ವಸಂತನಗರ ಉಪವಿಭಾಗದಲ್ಲಿ ಕಂದಾಯ ಪರಿವೀಕ್ಷಕಿಯಾಗಿರುವ ಕವಿತಾ ಅವರನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಸಮೀಕ್ಷೆ ವೇಳೆ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿದ್ದ ಮತ್ತೋರ್ವ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ವಸಂತನಗರ ಉಪವಿಭಾಗದಲ್ಲಿ ಕಂದಾಯ ಪರಿವೀಕ್ಷಕಿಯಾಗಿರುವ ಕವಿತಾ ಅವರನ್ನು ಅಮಾನತುಗೊಳಿಸಲಾಗಿದೆ.

ಕವಿತಾ ಅವರನ್ನು ಸರ್ವೆ ಸಮೀಕ್ಷೆ ಕಾರ್ಯಕ್ಕೆ ವಾರ್ಡಿನ ಮೇಲ್ವಿಚಾರಕರಾಗಿ ನಿಯೋಜಿಸಲಾಗಿತ್ತು. ವಾರ್ಡಿನ ವ್ಯಾಪ್ತಿಯಲ್ಲಿ ಈಗಾಗಲೇ ಸಮೀಕ್ಷೆ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮನೆಯ ಮಾಲೀಕರು, ನಿವಾಸಿಗಳನ್ನು ಸಂಪರ್ಕಿಸಿದಾಗ ತಮಿಳುನಾಡು ಹಾಗೂ ಇತರೆ ರಾಜ್ಯದ ಪರಿಶಿಷ್ಟ ಜಾತಿ ಎಂಬುದಾಗಿ ಮಾಹಿತಿ ನೀಡಿದ ಸಂದರ್ಭದಲ್ಲಿ ಅಂತಹ ಕುಟುಂಬಗಳನ್ನು ಹಳೆ ಆ್ಯಪ್ ನಲ್ಲಿ ನಾನ್ ಎಸ್‍ಸಿ ಹೌಸ್ ಹೋಲ್ಡ್ ಎಂದು ಪರಿಗಣಿಸಲಾಗಿದೆ.

ಆದರೆ ಹೊಸ ಆಪ್ ನಲ್ಲಿ ಗಣತಿದಾರರು ಅಂತಹ ಕುಟುಂಬಗಳನ್ನು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಕುಟುಂಬಗಳೆಂದು ಪರಿಗಣಿಸಿ, ಹೊಸ ಆ್ಯಪ್ ನಲ್ಲಿ ಫೊಟೋ ತೆಗೆದು ಅಪ್ ಲೋಡ್ ಮಾಡಿ ಅನಾವಶ್ಯಕವಾಗಿ ಹಳೆ ಆ್ಯಪ್ ನಲ್ಲಿ ಸಮೀಕ್ಷೆ ಮಾಡಿರುವ ಕುಟುಂಬಗಳಿಗೂ ಹೊಸ ಆ್ಯಪ್ ನಲ್ಲಿ ಅಪ್‍ಲೋಡ್ ಮಾಡಿರುವ ಕುಟುಂಬಗಳಿಗೂ ಅಜಗಜಾಂತರ ವ್ಯತ್ಯಾಸ ಮಾಡಿದ್ದಾರೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ