ಬೆಂಗಳೂರು: ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳು ತಮ್ಮದೇ ಪ್ರತ್ಯೇಕ ಲಾಂಛನ ಹೊಂದಲು ಹಾಗೂ ಅಧಿಕೃತ ಕಚೇರಿಗೆ ಬಳಕೆಗೆ ಅವಕಾಶ ನೀಡಲಾಗಿದೆ.
ಇಡೀ ದೇಶದಲ್ಲಿ ಪಂಚಾಯತ್‌ಗಳಿಗೆ ಪ್ರತ್ಯೇಕ ಲಾಂಛನ ನಿಗದಿಪಡಿಸಿ ರುವುದು ನಮ್ಮ ರಾಜ್ಯದಲ್ಲೇ ಮೊದಲು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ಲಾಂಛನ ನಿಗದಿ, ಬಳಕೆಯ ಬಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಈ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆಯವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ- 1993ರ ಪ್ರಕರಣ 6ರಲ್ಲಿ ಪ್ರತಿಯೊಂದು ಗ್ರಾಪಂ ಸ್ವಾಯತ್ತ ಅಧಿಕಾರ ಹೊಂದಿದೆ. ಪಂಚಾಯಿತಿಯು ಶಾಶ್ವತ ಉತ್ತರಾಧಿಕಾರವನ್ನು ಹೊಂದಿರುವುದರಿಂದ ಪ್ರತ್ಯೇಕ ಲಾಂಛನ ಹಾಗೂ ಮೊಹರನ್ನು ಹೊಂದಲು ಅವಕಾಶ ನೀಡಿದೆ. ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.
ಗ್ರಾಪಂ, ತಾಪಂ ಮತ್ತು ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ತಮ್ಮ ಅಧಿಕೃತ ವಿಸಿಟಿಂಗ್ ಕಾರ್ಡ್ ಮೇಲೆ ತಮ್ಮ ಅಧಿಕಾರದ ಅವಧಿಯಲ್ಲಿ ಮಾತ್ರ ಬಳಸಬಹುದು. ಮಾಜಿ ಜನಪ್ರತಿನಿ ಧಿಗಳು, ನಿವೃತ್ತ ಅಧಿಕಾರಿಗಳು, ನೌಕರರಿಗೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಬಳಕೆ ಕೆಲ ನಿರ್ಬಂಧ ಹೇರಲಾಗಿದೆ. ಈ ಹಿಂದೆ ಗ್ರಾಪಂ ಸದಸ್ಯರ ಮಹಾ ಒಕ್ಕೂಟದೊಂಗಿನ ಸಭೆಯಲ್ಲಿ ಲಾಂಛನ ಬಳಕೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದೆ. ಈಗ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.