ಬೆಂಗಳೂರು: ಕಳೆದ ವೇಳೆ ವಿಚಾರಣೆ ಸಂದರ್ಭದಲ್ಲಿ ವೈಯಕ್ತಿಕ ಆದಾಯ ಹಾಗೂ ಆಸ್ತಿಯ ಬಗ್ಗೆ ಇಡಿಯವರು ವಿವರ ಕೇಳಿದ್ದರು. ಅದೆಲ್ಲದಕ್ಕೂ ನಾನು ಸಂಪೂರ್ಣ ಮಾಹಿತಿ ನೀಡಿದ್ದೇನೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಹೇಳಿದರು.
ಇಡಿ ವಿಚಾರಣೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಪ್ರಕರಣಗಳು ಏನಾದರೂ ಇದೆಯೇ ಎಂದು ಕೇಳಿದರು. ನಾನು ಅವರ ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ. ನಾನು ನೀಡಿದ ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದರು.
ಯಾವ ದಾಖಲೆಗಳನ್ನು ಕೇಳಿದ್ದಾರೆ ಎಂದಾಗ, ಅದೆಲ್ಲವನ್ನು ಬಹಿರಂಗಪಡಿಸಲು ಆಗುವುದಿಲ್ಲ. ನಾನು ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದರು. ಐಶ್ವರ್ಯಗೌಡ ವಂಚನೆ ಪ್ರಕರಣದಲ್ಲಿ ನಿಮ್ಮನ್ನು ತಳುಕು ಹಾಕಲು ಪ್ರಯತ್ನಿಸಲಾಗುತ್ತಿದೆಯೇ ಎಂದು ಕೇಳಿದಾಗ, ಇದರ ಬಗ್ಗೆ ನನಗೆ ಗೊತ್ತಿಲ್ಲ.
ಅನ್ಯಾಯಕ್ಕೆ ಒಳಗಾದವರು ಹೇಳಿಕೆ ಆಧಾರದ ಮೇಲೆ ತನಿಖೆ ನಡೆಯುತ್ತಿದೆ. ಈ ತನಿಖೆಗೆ ಏನೇನು ಸಹಕಾರ ನೀಡಬೇಕೋ ಅದೆಲ್ಲವನ್ನು ನೀಡಿದ್ದೇನೆ. ಮುಂದಕ್ಕೆ ನೋಡೋಣ ಎಂದರು.