ಬೆಂಗಳೂರು: ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದೂರು ಕೊಟ್ಟಿದ್ದಾರೆ. ನಮಗೆ ಶವಗಳನ್ನು ಹೂತ್ತಿದ್ದೇನೆಂದು ಹೇಳುತ್ತಿರುವ ಕಾರ್ಮಿಕರನ ಹೇಳಿಗೆ ಮುಖ್ಯವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರ್ಮಿಕನ ಪರವಾಗಿ ವಕೀಲರು ದೂರು ನೀಡಿದ್ದಾರೆ. ಆದರೆ, ಕಾರ್ಮಿಕನ ಹೇಳಿಕೆ ನಮಗೆ ಮುಖ್ಯವಾಗಿದೆ. ಅವರು ಮುಂದೆ ಬಂದು ಹೇಳಿಕೆ ನೀಡಬೇಕೆಂದು ಹೇಳಿದರು.
ನಮಗೆ ಆತನ ಹೇಳಿಕೆ ಮುಖ್ಯವಾಗುತ್ತದೆ. ಔಪಚಾರಿಕವಾಗಿ ದೂರು ನೀಡದಿದ್ದರೆ, ಪ್ರಕರಣ ನೆಲಕಚ್ಚಲಿದೆ. ಮುಂದೆ ಏನು ಮಾಡಬಹುದು ಎಂಬುದನ್ನು ನೋಡುತ್ತೇವೆಂದು ತಿಳಿಸಿದರು.
ಇದೇ ವೇಳೆ ಕರಾವಳಿ ಪ್ರದೇಶದಲ್ಲಿ ಹೊಸದಾಗಿ ರಚಿಸಲಾದ ಕೋಮು ವಿರೋಧಿ ಪಡೆಯ ಬಗ್ಗೆ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಕೋಮು ಸೌಹಾರ್ದತೆಯ ಕೆಲವು ಪ್ರಕರಣಗಳು ವರದಿಯಾಗಿದ್ದು, ಕೊಲೆಗಳು ಸಹ ನಡೆದಿವೆ. ಆದ್ದರಿಂದ,ಈ ವಿಶೇಷ ಕ್ರಿಯಾ ಪಡೆ ಅಗತ್ಯವಾಗಿತ್ತು. ಶಾಂತಿ ಕಾಪಾಡುವ ಸಲುವಾಗಿ, ಈ ಪಡೆಯನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಹೇಳಿದರು.
ವಿವಿಧ ಸಮುದಾಯಗಳ ನಡುವೆ ಶಾಂತಿ ಸಭೆ ನಡೆಸುವ ಬಗ್ಗೆ ಸಲಹೆಗಳಿವೆ. ಬುಧವಾರ ಶಾಂತಿ ಸಭೆ ನಡೆಸಲಾಯಿತು. ನಮಗೆ ಹಲವಾರು ಸಲಹೆಗಳು ಬಂದಿದ್ದು, ಪಕ್ಷಾತೀತವಾಗಿ ರಾಜಕೀಯ ನಾಯಕರು, ಶಿಕ್ಷಣ ಸಂಸ್ಥೆಗಳು ಮತ್ತು ಎನ್‌ಜಿಒಗಳ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಇತ್ಯಾದಿ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು,
ಸಂಬಂಧಪಟ್ಟ ಅಧಿಕಾರಿಗಳು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತಿದ್ದಾರೆ. "ಯಾವುದೇ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಕಾರಣವಾಗುವ ಯಾವುದೇ ಪೋಸ್ಟ್ ಮಾಡಿದರೆ, ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಕಲಿ ಸುದ್ದಿಗಳನ್ನು ನಿಗ್ರಹಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದ್ದು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ನಿಟ್ಟಿನಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು