ಸಾಂದರ್ಭಿಕ ಚಿತ್ರ  
ರಾಜ್ಯ

ದ್ವಿಭಾಷಾ ನೀತಿ: ಕರ್ನಾಟಕದಲ್ಲಿ ಪರ-ವಿರೋಧ ಅಭಿಪ್ರಾಯ

ಕರ್ನಾಟದಲ್ಲಿ ಈಗಿರುವ ತ್ರಿಭಾಷಾ ಸೂತ್ರವು ಭಾಷಾ ಪ್ರಾವೀಣ್ಯತೆ ಮತ್ತು ಅರಿವಿನ ಪ್ರಗತಿಯನ್ನು ಹೆಚ್ಚಿಸಬಹುದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದನ್ನು ಹೆಚ್ಚುವರಿ ಶೈಕ್ಷಣಿಕ ಹೊರೆ ಅಥವಾ ಸ್ಥಳೀಯ ಭಾಷೆಗಳಿಗೆ ಸಂಭಾವ್ಯ ಬೆದರಿಕೆ ಒಡ್ಡಬಹುದು ಎನ್ನುತ್ತಾರೆ.

ಬೆಂಗಳೂರು: ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರವನ್ನು ಬೆಂಬಲಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ಕರ್ನಾಟದಲ್ಲಿ ಈಗಿರುವ ತ್ರಿಭಾಷಾ ಸೂತ್ರವು ಭಾಷಾ ಪ್ರಾವೀಣ್ಯತೆ ಮತ್ತು ಅರಿವಿನ ಪ್ರಗತಿಯನ್ನು ಹೆಚ್ಚಿಸಬಹುದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದನ್ನು ಹೆಚ್ಚುವರಿ ಶೈಕ್ಷಣಿಕ ಹೊರೆ ಅಥವಾ ಸ್ಥಳೀಯ ಭಾಷೆಗಳಿಗೆ ಸಂಭಾವ್ಯ ಬೆದರಿಕೆ ಒಡ್ಡಬಹುದು ಎನ್ನುತ್ತಾರೆ.

ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷೆಗಳ ಮಂಡಳಿಯಲ್ಲಿ (CISCE), ನಾವು ತ್ರಿಭಾಷಾ ಸೂತ್ರವನ್ನು ಪ್ರೋತ್ಸಾಹಿಸುತ್ತೇವೆ. ತ್ರಿಭಾಷಾ ನೀತಿಯು ಅತ್ಯಂತ ಯಶಸ್ವಿಯಾಗಿದೆ. ಇಂದು, ಬೆಂಗಳೂರಿನಲ್ಲಿ, ಯಾವುದೇ ಮಗುವಿನೊಂದಿಗೆ ಮಾತನಾಡಿದರೂ ಬಹು ಭಾಷೆಗಳನ್ನು ಬಲ್ಲವರಾಗಿದ್ದು, ಸುಲಭವಾಗಿ ಮಾತನಾಡುತ್ತಾರೆ.

ಮಕ್ಕಳು ಸ್ವಾಭಾವಿಕವಾಗಿ ವಿವಿಧ ಭಾಷೆಗಳಲ್ಲಿ ಕಲಿಯುವ ಮತ್ತು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವಾಗ, ಅವರನ್ನು ತಡೆಹಿಡಿಯಲು ನಾವು ಯಾರು ಎಂದು ಲಿಟಲ್ ಫ್ಲವರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಗಾಯತ್ರಿ ದೇವಿ ಹೇಳುತ್ತಾರೆ.

ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳ (KAMS) ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್ ಡಿ, ಅರಿವಿನ ಪ್ರಯೋಜನಗಳನ್ನು ಉಲ್ಲೇಖಿಸಿ ಅಸ್ತಿತ್ವದಲ್ಲಿರುವ ತ್ರಿಭಾಷಾ ನೀತಿಯನ್ನು ಬೆಂಬಲಿಸುತ್ತಾರೆ. ಅರಿವಿನ ದೃಷ್ಟಿಕೋನದಿಂದ, ಬಹು ಭಾಷೆಗಳನ್ನು ಕಲಿಯುವುದರಿಂದಾಗುವ ಪ್ರಯೋಜನಗಳು ಅಪಾರ. ಇದು ಮಕ್ಕಳಲ್ಲಿ ತಾರ್ಕಿಕತೆ, ವಿಮರ್ಶಾತ್ಮಕ ಚಿಂತನೆಯನ್ನು ಹೆಚ್ಚಿಸುತ್ತದೆ ಮತ್ತು ಮಕ್ಕಳಲ್ಲಿ ಮಾನಸಿಕ ಬೌದ್ಧಿಕ ಮಟ್ಟವನ್ನು ಹೆಚ್ಚಿಸುತ್ತದೆ.ಮಕ್ಕಳು 8 ರಿಂದ 10 ವರ್ಷದೊಳಗೆ ಭಾಷೆಗಳನ್ನು ಬೇಗನೆ ಕಲಿಯುತ್ತಾರೆ ಎನ್ನುತ್ತಾರೆ.

ಸಾಕಷ್ಟು ಆಸಕ್ತಿ, ಏಕಾಗ್ರತೆ ಮತ್ತು ಸಂಪನ್ಮೂಲಗಳೊಂದಿಗೆ ಮನುಷ್ಯನ ಮೆದುಳು 40 ಭಾಷೆಗಳನ್ನು ಕಲಿಯಬಹುದು ಎಂದು ಸಂಶೋಧನೆ ತೋರಿಸುತ್ತದೆ, ಹೆಚ್ಚೆಚ್ಚು ಭಾಷೆ ಕಲಿಕೆ ನಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಮೂರರಿಂದ ಐದು ಭಾಷೆಗಳನ್ನು ಸಾಮಾನ್ಯವಾಗಿ ವ್ಯಕ್ತಿಗಳು ಬೇಗನೆ ಕಲಿಯಬಹುದು ಎಂದು ಹೇಳಿದರು.

ಶಿಕ್ಷಣ ತಜ್ಞ ವಿ.ಪಿ. ನಿರಂಜನರಾಧ್ಯ ತ್ರಿಭಾಷಾ ನೀತಿಯನ್ನು ತೀವ್ರವಾಗಿ ವಿರೋಧಿಸುತ್ತಾರೆ, ಇದು ಮಕ್ಕಳಿಗೆ ಹೊರೆಯಾಗುತ್ತದೆ ಎಂದು ವಾದಿಸುತ್ತಾರೆ. ಭಾಷಾ ಕಲಿಕೆಯನ್ನು ಶೈಕ್ಷಣಿಕ ವ್ಯವಹಾರದ ದೃಷ್ಟಿಕೋನದಿಂದ ಅಲ್ಲ, ಬದಲಾಗಿ ಜ್ಞಾನಶಾಸ್ತ್ರ ಮತ್ತು ಜ್ಞಾನ ಸಂಪಾದನೆಯ ದೃಷ್ಟಿಕೋನದಿಂದ ಚರ್ಚಿಸಬೇಕು. ವೃತ್ತಿಜೀವನಕ್ಕಾಗಿ ಭಾಷೆಯನ್ನು ನಂತರ ಕಲಿಯಬಹುದು, ಆದರೆ ಮಕ್ಕಳಿಗೆ ಕೇಂದ್ರೀಕೃತ, ಹೊರೆಯಿಲ್ಲದ ಆರಂಭಿಕ ಶಿಕ್ಷಣದ ಅಗತ್ಯವಿದೆ ಎನ್ನುತ್ತಾರೆ.

ಒಂದೆರಡು ಭಾಷೆಗಳ ಕಲಿಕೆಯ ಮೇಲೆಯೇ ಗಮನ ಹರಿಸಿದರೆ ಮಕ್ಕಳಲ್ಲಿ ಆ ಭಾಷೆಯ ತಿಳುವಳಿಕೆಯನ್ನು ಆಳಗೊಳಿಸಲು ಬಳಸಬಹುದಾದ ಸಮಯ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದರು. ಕರ್ನಾಟಕದ ಮಕ್ಕಳು ಭಾಷೆ ಕಲಿಕೆ ಶಿಕ್ಷಣ ವಿಚಾರದಲ್ಲಿ ಹಿಂದುಳಿಯಬಾರದು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಹಿಂದಿಯನ್ನು ಮೂರನೇ ಭಾಷೆಯಾಗಿ ಹೊಂದಿರುವ ನಮ್ಮ ಅನುಭವವು ಮಕ್ಕಳ ಮಾತೃಭಾಷೆ ಮತ್ತು ಇಂಗ್ಲಿಷ್‌ನಲ್ಲಿ ಅವರ ಕಲಿಕಾ ಸಾಮರ್ಥ್ಯಕ್ಕೆ ಹಾನಿ ಮಾಡಿದೆ ಎಂದು ಅವರು ಹೇಳುತ್ತಾರೆ.

ಕೆಲವು ಶಿಕ್ಷಣ ತಜ್ಞರು ತ್ರಿಭಾಷಾ ನೀತಿಯನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ, ಆದರೆ ದಕ್ಷಿಣ ಭಾರತದ ವಿದ್ಯಾರ್ಥಿಗಳ ಮೇಲೆ ನಿರ್ದಿಷ್ಟ ಭಾಷೆಯನ್ನು, ವಿಶೇಷವಾಗಿ ಹಿಂದಿಯನ್ನು ಹೇರುವುದನ್ನು ವಿರೋಧಿಸುತ್ತಾರೆ.

ಭಾಷಾ ಕಲಿಕೆಯಲ್ಲಿ ತೆರೆದುಕೊಳ್ಳುವಿಕೆ ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಅವರ ಪರಿಸರದ ಭಾಗವಲ್ಲದ ಹಿಂದಿಯನ್ನು ಕಲಿಸುವುದು ನಿರಾಸಕ್ತಿಗೆ ಕಾರಣವಾಗಬಹುದು ಮತ್ತು ಅವರ ಒಟ್ಟಾರೆ ಕಲಿಕೆಯ ಅನುಭವದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ವಿದ್ಯಾರ್ಥಿಗಳೇ ತಮ್ಮ ಆಸಕ್ತಿಯ ಅರ್ಥಪೂರ್ಣವಾದ ಭಾಷೆಯನ್ನು ಆಯ್ಕೆ ಮಾಡುವುದು ಉತ್ತಮ ವಿಧಾನವಾಗಿದೆ, ಭಾಷಾ ಕಲಿಕೆಯು ಮಕ್ಕಳನ್ನು ಸಂಪರ್ಕದಲ್ಲಿರಿಸಿಕೊಳ್ಳುವಂತೆ ಮಾಡಬೇಕೆ ಹೊರತು ದೂರವಿಡಬಾರದು ಎಂದು ಶಿಕ್ಷಣ ಆಧಾರಿತ ಲಾಭರಹಿತ ಸಂಸ್ಥೆಯಾದ ವೆಟಾಸ್ ಎಜುಕೇಷನಲ್ ಫೌಂಡೇಶನ್‌ನ ಸಹ-ಸಂಸ್ಥಾಪಕಿ ಕೀರ್ತಿ ಕೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT