ಬೆಳಗಾವಿ: ಉತ್ತರ ಕರ್ನಾಟಕದ ಶೈಲಿಯ ಗಾಯಕ ಮಾರುತಿ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೂದಿಹಾಳದಲ್ಲಿ ನಡೆದಿದೆ.
22 ವರ್ಷದ ಮಾರುತಿ ಅಡಿವೆಪ್ಪ ಲಟ್ಟೇ ಈರಪ್ಪ ಎಂಬಾತನಿಂದ 50 ಸಾವಿರ ರೂಪಾಯಿ ಸಾಲ ಪಡೆದಿದ್ದನು. 45 ಸಾವಿರ ವಾಪಸ್ ಕೊಟ್ಟಿದ್ದು 5 ಸಾವಿರ ರೂಪಾಯಿ ಬಾಕಿ ಉಳಿಸಿಕೊಂಡಿದ್ದನು. ಈ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಈರಪ್ಪ ಅಕ್ಕಿವಾಟೆ ಗುಂಪು ಕಟ್ಟಿಕೊಂಡು ಮಾರುತಿ ಮೇಲೆ ದಾಳಿ ನಡೆಸಿದ್ದಾರೆ. ಕಳೆದ ರಾತ್ರಿ ಬೈಕ್ ನಲ್ಲಿ ಮಾರುತಿ ಬರುವಾಗ ಈರಪ್ಪ ತಂಡ ಅಡ್ಡಗಟ್ಟಿದ್ದು ಮೊದಲಿಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ನೆಲದ ಮೇಲೆ ಬಿದ್ದದ್ದ ಮಾರುತಿ ಮೇಲೆ ಕಾರು ಹತ್ತಿಸಿದ್ದು ಮಾರುತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಾರುತಿ ಮೇಲೆ ಕಾರನ್ನು ಹತ್ತಿಸುವಾಗ ಕಾರ್ ಪಲ್ಟಿಯಾಗಿ ಆರೋಪಿಗಳು ಗಾಯಗೊಂಡಿದ್ದು ಈರಪ್ಪನಿಗೆ ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ರಾಯಭಾಗ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು ಸಿದ್ದರಾಮ ಒಡೆಯರ್, ಆಕಾಶ್ ಪೂಜಾರಿಯನ್ನು ಬಂಧಿಸಿದ್ದಾರೆ.