ಧಾರವಾಡ ಜಿಲ್ಲೆಯ ಮಡಕಿಕೊಪ್ಪ ನಿವಾಸಿಗಳೊಂದಿಗೆ ಡಾ.ರಾಜನ್ ದೇಶಪಾಂಡೆ Photo | Express
ರಾಜ್ಯ

ಧಾರವಾಡ: 100 ನಿವಾಸಿಗಳಿರುವ ಗ್ರಾಮ ದತ್ತು ಪಡೆದ ವೈದ್ಯ; ಇತರರಿಗೆ ಮಾದರಿ

ಹೈನುಗಾರಿಕೆ ಮುಖ್ಯ ಉದ್ಯೋಗವಾಗಿರುವುದರಿಂದ, ಈ ಹಳ್ಳಿಯಲ್ಲಿ ಜನರಿಗಿಂತ ಹೆಚ್ಚಾಗಿ ಜಾನುವಾರುಗಳೇ ಇವೆ.

ಧಾರವಾಡ: ಅತೀವ್ರ ಬಡತನದಿಂದ ನಲುಗಿರುವ ಧಾರವಾಡ ಜಿಲ್ಲೆಯ ಗ್ರಾಮವೊಂದನ್ನು ಡಾ. ರಾಜನ್ ದೇಶಪಾಂಡೆ ನೇತೃತ್ವದ ವಿಟ್ಟಲ್ ಮಕ್ಕಳ ಆರೋಗ್ಯ ಸಂಸ್ಥೆಯು ದತ್ತು ಪಡೆದುಕೊಂಡಿದ್ದು, ಸಂಸ್ಥೆಯು ಗ್ರಾಮ ಹಾಗೂ ಗ್ರಾಮದ ನಿವಾಸಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ.

ಮಡಕಿಕೊಪ್ಪ ಎಂಬ ಪುಟ್ಟ ಗ್ರಾಮವು ಜಿಲ್ಲಾ ಕೇಂದ್ರದಿಂದ 33 ಕಿ.ಮೀ ದೂರದಲ್ಲಿದ್ದು, ಸುಮಾರು 100 ಜನಸಂಖ್ಯೆಯನ್ನು ಹೊಂದಿರುವ ಗ್ರಾಮದಲ್ಲಿ ಕೇವಲ 14-15 ಮನೆಗಳಿವೆ. ಹೈನುಗಾರಿಕೆ ಮುಖ್ಯ ಉದ್ಯೋಗವಾಗಿರುವುದರಿಂದ, ಈ ಹಳ್ಳಿಯಲ್ಲಿ ಜನರಿಗಿಂತ ಹೆಚ್ಚಾಗಿ ಜಾನುವಾರುಗಳೇ ಇವೆ.

ಹಿರಿಯ ಮಕ್ಕಳ ವೈದ್ಯರು ಮತ್ತು ವಿಟ್ಟಲ್ ಸಂಸ್ಥೆಯ ಸಂಸ್ಥಾಪಕ ಡಾ. ದೇಶಪಾಂಡೆ ಅವರು 2010 ರಲ್ಲಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿತ್ತು. ಈ ವೇಳೆ ಸಂಪರ್ಕ ಕೊರತೆ ಸೇರಿದಂತೆ ಇತರ ಸಮಸ್ಯೆಗಳು ಎದುರಾಗಿತ್ತು. ಬಳಿಕ ಗ್ರಾಮಕ್ಕೆ ಏನಾದರೂ ಮಾಡಬೇಕೆಂದು ಬಯಸಿದ್ದೆ. ಸಂಸ್ಥೆಯು ಬೆಳ್ಳಿ ಮಹೋತ್ಸವವನ್ನು ಆಚರಿಸುತ್ತಿರುವ ಸಮಯ ಬಂದಿದ್ದು, ಗ್ರಾಮವನ್ನು ದತ್ತು ಪಡೆಯಲು ನಿರ್ಧರಿಸಲಾಗಿದೆ.

"ಸನ್‌ಶೈನ್ ಎಂಬ ಟ್ಯಾಗ್‌ಲೈನ್ ನೊಂದಿಗೆ ಯೋಜನೆಯನ್ನು ಆರಂಭಿಸಲಾಗುತ್ತಿದ್ದು, ಈ ಯೋಜನೆಯು ಸಮಗ್ರ ಅಭಿವೃದ್ಧಿ, ಸುಸ್ಥಿರ ಬೆಳವಣಿಗೆ, ಆರ್ಥಿಕ ಉನ್ನತಿ, ಗುಣಮಟ್ಟದ ಶಿಕ್ಷಣ, ಆರೋಗ್ಯ, ಸಾಮಾಜಿಕ ಪರಿವರ್ತನೆ ಮತ್ತು ಇತರೆ ಸೌಲಭ್ಯಗಳ ಗುರಿಯನ್ನು ಹೊಂದಿದೆ.

ಇತ್ತೀಚೆಗೆ, ಗ್ರಾಮದಲ್ಲಿ ಆರೋಗ್ಯ ಶಿಬಿರ ನಡೆಸಿದಾಗ ಗ್ರಾಮಸ್ಥರ ಅಗತ್ಯತೆಗಳ ಬಗ್ಗೆ ತಿಳಿದುಕೊಂಡೆ ಮತ್ತು ಅವರ ಜೀವನಶೈಲಿಯನ್ನು ಅಧ್ಯಯನ ಮಾಡಿದೆ. ಆರೋಗ್ಯ ರಕ್ಷಣೆಯೊಂದಿಗೆ ನಮ್ಮ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಮಹಿಳೆಯರು ಮತ್ತು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಶಿಕ್ಷಣದ ಜೊತೆಗೆ ಜನರ ಬಾಂಧವ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ವಸತಿ ಒದಗಿಸುವ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತೇವೆ. ಗ್ರಾಮದಲ್ಲಿ ಜೋರ್, ಬಿಚುಗ್ಲೆ ಮತ್ತು ಗರಾಡೆ ಕುಟುಂಬಗಳ ಮೂರು ಪ್ರಮುಖ ವಂಶಾವಳಿಗಳಿವೆ ಎಂದು ವಿಟ್ಟಲ್ ಸಂಸ್ಥೆಯ ಸಂಸ್ಥಾಪಕ ಡಾ. ದೇಶಪಾಂಡೆ ಅವರು ಹೇಳಿದ್ದಾರೆ.

ಗ್ರಾಮಸ್ಥರನಾಗಿರುವ ರಾಜು ಜೋರ್ ಎಂಬುವವರು ಮಾತನಾಡಿ, ನಮ್ಮ ಸಮಸ್ಯೆಗಳನ್ನು ಕೇಳಲು ಮತ್ತು ಪರಿಹಾರಗಳನ್ನು ಒದಗಿಸಲು ಯಾರೂ ಬರುವುದಿಲ್ಲ ಎಂದು ಭಾವಿಸಿದ್ದೆವು. ಆದರೆ, ಇದೀಗ ನಮ್ಮ ನೆರವಿಗೆ ವೈದ್ಯರು ಬಂದಿರುವುದು ಸಂತೋಷ ತಂದಿದೆ.

ಗ್ರಾಮವು ಒಂದು ಶಾಲೆಯನ್ನು ಹೊಂದಿದ್ದರೂ, ಅದು ಕೇವಲ ಹೆಸರಿಗೆ ಮಾತ್ರ. ಇದೀಗ ವೈದ್ಯ ಸಂಸ್ಥೆಯು ನಮಗೆ ಒದಗಿಸುವ ಸೌಲಭ್ಯಗಳನ್ನು ನಾವು ಎದುರು ನೋಡುತ್ತಿದ್ದೇವೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ajit Pawar: ಇಂದು ಮಧ್ಯಾಹ್ನ ಬಾರಾಮತಿಯಲ್ಲಿ ಅಂತ್ಯಕ್ರಿಯೆ: ಪ್ರಧಾನಿ ಮೋದಿ, ಅಮಿತ್ ಶಾ ಭಾಗವಹಿಸುವ ನಿರೀಕ್ಷೆ

'ಅಂಬರೀಷ್ ನ ಕಾಂಗ್ರೆಸ್‌ಗೆ ಕರ್ಕೊಂಡು ಬಂದೆ, ಅವನು ತೊಳೆದುಬಿಟ್ಟು ಹೋದ: ಲೋಕಸಭೆ ಚುನಾವಣೆಯಲ್ಲಿ 36 ಕೋಟಿ ಖರ್ಚು ಮಾಡಿಸಿ HDK ಮೋಸ ಮಾಡಿದ'

ಅಜಿತ್ ಪವಾರ್ ದುರ್ಮರಣದಲ್ಲಿ 'ಪಿತೂರಿ' ನಡೆದಿದೆಯೇ? ಶರದ್ ಪವಾರ್ ಮೊದಲ ಪ್ರತಿಕ್ರಿಯೆ...

4ನೇ ಟಿ20: ದುಬೆ ಅರ್ಧಶತಕ ವ್ಯರ್ಥ; ನ್ಯೂಜಿಲ್ಯಾಂಡ್ ವಿರುದ್ಧ 50 ರನ್‌ನಿಂದ ಸೋತ ಭಾರತ!

ಸರ್... ಹಾವಾಡಿಗರಿಗೆ ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಇಲ್ಲ: ನಟ ಕಿಶೋರ್

SCROLL FOR NEXT