ಸಾಂದರ್ಭಿಕ ಚಿತ್ರ 
ರಾಜ್ಯ

ಕ್ಷುಲ್ಲಕ ವಿಚಾರಕ್ಕೆ ಜಗಳ: ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ

ಅಂಚೆಪಾಳ್ಯದ ನಿವಾಸಿ ತೇಜಸ್ ಹಲ್ಲೆಗೊಳಗಾದ ವ್ಯಕ್ತಿ. ಆಟೋ ಚಾಲಕನಾಗಿರುವ ತೇಜಸ್ ಕೆಲಸ ಮುಗಿಸಿ, ಶುಕ್ರವಾರ ರುದ್ರಪ್ಪ ಗಾರ್ಡನ್ ನಲ್ಲಿರುವ ಬಾರ್'ಗೆ ಸ್ನೇಹಿತ ಸಂತೋಷ್ ಜೊತೆ ಹೋಗಿದ್ದ.

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದ ದುಷ್ಕರ್ಮಿಗಳು ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಚಾಮರಾಜಪೇಟೆಯಲ್ಲಿ ನಡೆದಿದೆ.

ಅಂಚೆಪಾಳ್ಯದ ನಿವಾಸಿ ತೇಜಸ್ ಹಲ್ಲೆಗೊಳಗಾದ ವ್ಯಕ್ತಿ. ಆಟೋ ಚಾಲಕನಾಗಿರುವ ತೇಜಸ್ ಕೆಲಸ ಮುಗಿಸಿ, ಶುಕ್ರವಾರ ರುದ್ರಪ್ಪ ಗಾರ್ಡನ್ ನಲ್ಲಿರುವ ಬಾರ್'ಗೆ ಸ್ನೇಹಿತ ಸಂತೋಷ್ ಜೊತೆ ಹೋಗಿದ್ದ. ಇಬ್ಬರೂ ಮದ್ಯಪಾನ ಮಾಡುತ್ತಿದ್ದಾಗ ರಾಹುಲ್, ಪ್ರಜ್ವಲ್, ಅಭಿಷೇಕ್ ಎಂಬುವವರು ಬಾರ್'ಗ ಬಂದಿದ್ದಾರೆ.

ಮೂವರು ಕ್ಷುಲ್ಲಕ ವಿಚಾರಕ್ಕೆ ಸಂತೋಷ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ತೇಜಸ್ ಸಂತೋಷ್ ಬೆಂಬಲಕ್ಕೆ ನಿಂದಿದ್ದಾರೆ. ಬಳಿಕ ಬಾರ್ ನಿಂದ ಹೊರಹೋದ ಮೂವರು ಆರೋಪಿಗಳು ಮಾರಕಾಸ್ತ್ರಗಳಿಂದ ವಾಪಸ್ಸಾಗಿದ್ದಾರೆ. ಈ ವೇಳೆ ಆಟೋ ಹತ್ತಲು ಸಿದ್ಧನಾಗಿದ್ದ ತೇಜಸ್ ನನ್ನು ಹೊರಗೆಳೆದು ಹಲ್ಲೆ ನಡಸಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತೇಜಸ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ತೇಜಸ್ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ವೇಳೆ ಸಂತೋಷ್, ತೇಜಸ್ ಜೊತೆಗಿದ್ದನೋ, ಅಥವಾ ದಾಳಿಗೂ ಮುನ್ನ ಆತ ಹೊರಟು ಹೋಗಿದ್ದನೋ ಎಂಬುದು ಸ್ಪಷ್ಟವಾಗಿಲ್ಲ. ಆರೋಪಿಗಳ ಪತ್ತೆಗೆ ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ