ಬೆಂಗಳೂರು: ಕರ್ನಾಟಕ ಕುಬೇರ ರಾಜಕಾರಣಿ, ಉದ್ಯಮಿ ಕೆಜಿಎಫ್ ಬಾಬು ಮನೆ ಜಗಳ ಇದೀಗ ಬೀದಿರಂಪವಾಗಿದ್ದು ಮುಗಿಯುವ ಲಕ್ಷಣಗಳನ್ನು ಕಾಣುತ್ತಿಲ್ಲ. ಆಸ್ತಿ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ಸಂಬಂಧ ಹಳಸಿದೆ. ನನ್ನ ಬಳಿ ಸುಮಾರು ನಾಲ್ಕೈದು ಸಾವಿರ ಕೋಟಿ ರೂಪಾಯಿ ಆಸ್ತಿ ಇದೆ. ಅದರಲ್ಲಿ ಅರ್ಧ ಆಸ್ತಿಯನ್ನು ನನ್ನ ಹೆಂಡ್ತೀರು ಮತ್ತು ಮಕ್ಕಳಿಗೆ ಕೊಡುತ್ತೇನೆ. ಉಳಿದ ಅರ್ಧ ಆಸ್ತಿಯನ್ನು ಚಿಕ್ಕಪೇಟೆ ಜನರಿಗೆ ಹಂಚುತ್ತೇನೆ ಹೊರತು ಮಾವನ ಜೊತೆ ಸೇರಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿರುವ ಮಗನಿಗೆ ಕೊಡುವುದಿಲ್ಲ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ. ನನ್ನ ಮಗನ ಮಾವ ಎಸ್ಬಿಐನಲ್ಲಿ ರೂ. 60 ಕೋಟಿ ಸಾಲ ಮಾಡಿದ್ದರು. ಅದರೆ ಅದರಲ್ಲಿ ಕೇವಲ ಕೇವಲ 15 ಕೋಟಿ ಮರುಪಾವತಿ ಮಾಡಿ 45 ಕೋಟಿ ಬಾಕಿ ಉಳಿಸಿಕೊಂಡಿದ್ದರು. ಆಗ ನಾನು 200 ಕೋಟಿಯ ಆಸ್ತಿಯನ್ನು ಅಡಮಾನ ಇಟ್ಟು ಮುಸ್ತಾಫಾರನ್ನು ಸಂಕಷ್ಟದಿಂದ ಪಾರು ಮಾಡಿದೆ. ಆದರೆ ಸಾಲ ತೀರಿಸದೆ ಸುಮ್ಮನಾಗಿದ್ದಾರೆ ಎಂದು ಕೆಜಿಎಫ್ ಬಾಬು ಆರೋಪಿಸಿದ್ದಾರೆ.