ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ತೇಜಸ್ವಿ ಸೂರ್ಯ 
ರಾಜ್ಯ

ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ: ಮಧ್ಯಸ್ಥಿಕೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ತೇಜಸ್ವಿ ಸೂರ್ಯ ಮನವಿ

ಬೆಂಗಳೂರು ನಗರದಲ್ಲಿ ಹೆಚ್ಚಿನ ಸಾರಿಗೆ ಆಧಾರಿತ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಕಾರುಗಳು, ಇತರ ವೈಯಕ್ತಿಕ ವಾಹನಗಳಿಂದ ಜನರನ್ನು ಸಾರ್ವಜನಿಕ ಸಾರಿಗೆಗೆ ವರ್ಗಾಯಿಸಬೇಕಿದೆ.

ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದ ಕಾರ್ಯಾರಂಭವನ್ನು ತ್ವರಿತಗೊಳಿಸಲು ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ತೇಜಸ್ವಿ ಸೂರ್ಯ ಅವರು ಶುಕ್ರವಾರ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ತೇಜಸ್ವಿ ಸೂರ್ಯ ಅವರು ಶುಕ್ರವಾರ ಭೇಟಿ ಮಾಡಿದ್ದು, ಈ ವೇಳೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಅವರಿಂದ ಶೀಘ್ರವೇ ಹಳದಿ ಮಾರ್ಗಕ್ಕೆ ಅನುಮೋದನೆ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಹೆಚ್ಚಿನ ಸಾರಿಗೆ ಆಧಾರಿತ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಕಾರುಗಳು, ಇತರ ವೈಯಕ್ತಿಕ ವಾಹನಗಳಿಂದ ಜನರನ್ನು ಸಾರ್ವಜನಿಕ ಸಾರಿಗೆಗೆ ವರ್ಗಾಯಿಸಬೇಕಿದೆ. ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲು ಸಹಕರಿಸುವಂತೆ ಆಗ್ರಹಿಸಿದ್ದಾರೆ.

ಮುಂದಿನ ಒಂದು ದಶಕದಲ್ಲಿ ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳಲ್ಲಿ ಕನಿಷ್ಠ 5 ಭಾರತೀಯ ನಗರಗಳನ್ನು ಹೊಂದುವ ಗುರಿ ನಮ್ಮದಾಗಬೇಕು ಎಂದು ಹೇಳಿದ್ದಾರೆ.

ಜಾಗತಿಕ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು. ನಗರಗಳಿಗೆ ರೈಲುಗಳ ತ್ವರಿತ ವಿತರಣೆಯನ್ನು ಸುಗಮಗೊಳಿಸಬೇಕಿದೆ. ದೇಶಾದ್ಯಂತ ಎಲ್ಲಾ ಮೆಟ್ರೋ ರೈಲುಗಳನ್ನು ಪ್ರಮಾಣೀಕರಿಸುವಂತೆ ಸಂದರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.

ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೂರನೇ ರೈಲು ಬಂದ ಬಳಿಕ ಸಿಎಂಆರ್‌ಎಸ್ ತಂಡ ಪ್ರೋಟೊಟೈಪ್ ಡ್ರವೈರ್‌ಲೆಸ್ ರೈಲನ್ನು ಪರೀಶಿಲಿಸಿದ್ದಾರೆ. ಇನ್ನೊಂದಿಷ್ಟು ಪ್ರಕ್ರಿಯೆಗಳು ಬಾಕಿ ಇವೆ. ಐಟಿ ಕಾರಿಡಾರ್‌ ಸಂಪರ್ಕಿಸುವ ಈ ಹಳದಿ ಮಾರ್ಗದ ಎಲ್ಲ ರೈಲು ನಿಲ್ದಾಣಗಳ ತಪಾಸಣೆ ಮಾಡಲಿದ್ದಾರೆ. ಇದಾದ ಬಳಿಕ ಹಳದಿ ಮಾರ್ಗಕ್ಕೆ ಅನುಮೋದನೆ ನೀಡುವುದು ಬಾಕಿ ಇದೆ.

ಪಶ್ಚಿಮ ಬಂಗಾಳದ ಟಿಟಾಗರ್ ಕಂಪನಿಯಿಂದ ಈ ಮೊದಲೇ ಮಾತು ಕೊಟ್ಟಂತೆ ಡ್ರೈವರ್‌ಲೆಸ್ ರೈಲು ಪೂರೈಕೆ ವಿಳಂಬವಾಗಿದೆ. ಇದರಿಂದ ಹಳದಿ ಮೆಟ್ರೋ ಮಾರ್ಗ ಕಾರ್ಯಾರಚಣೆ ವಿಳಂಬವಾಗುತ್ತಿದೆ. ಈ ಮಾರ್ಗ ಆರಂಭಕ್ಕೆ ಕನಿಷ್ಠ ಎಂಟು ರೈಲುಗಳಾದರೂ ಬೇಕು. ಸದ್ಯ BMRCL ಬಳಿ ಕೇವಲ ಮೂರು ರೈಲುಗಳಿವೆ. ಮುಂದಿನ ದಿನಗಳಲ್ಲಿ ತಿಂಗಳಿಗೆ ಎರಡರಂತೆ ರೈಲು ಪೂರೈಕೆಗೆ ಕಂಪನಿ ಬದ್ಧವಾಗಿರುವುದಾಗಿ ಇತ್ತೀಚೆಗೆ ತಿಳಿಸಿದೆ. ಈ ಸಂಬಂಧ ಸಿಎಂಆರ್‌ಎಸ್ ತಡಮಾಡದೇ ಹಳದಿ ಮಾರ್ಗಕ್ಕೆ ಅನುಮೋದನೆ ನೀಡುವಂತೆ, ಕೇಂದ್ರ ಸಚಿವರ ಮಧ್ಯ ಪ್ರವೇಶಿಸುವಂತೆ ಮನವಿ ಪತ್ರ ಮೂಲಕ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT