ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಕಿರುಕುಳ; ಬುದ್ಧಿ ಹೇಳಿದವನ ಕತ್ತು ಸೀಳಿದ ಪಾಗಲ್‌ ಪ್ರೇಮಿ!

ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಸೆಲ್ವ ಕಾರ್ತಿಕ್ ಎಂದು ಗುರುತಿಸಲಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ.

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಕಿರುಕುಳ ನೀಡಿದ ಆರೋಪದ ಮೇಲೆ 26 ವರ್ಷದ ಯುವಕನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಸೆಲ್ವ ಕಾರ್ತಿಕ್ ಎಂದು ಗುರುತಿಸಲಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಮಹಿಳೆಯು ಈ ವಿಷಯವನ್ನು ತನ್ನ ತಂದೆ ಮತ್ತು ಚಿಕ್ಕಪ್ಪನ ಮಗನಿಗೆ ತಿಳಿಸಿದ್ದು, ಅವರು ಸೆಲ್ವ ಕಾರ್ತಿಕ್‌ನನ್ನು ಮಾತನಾಡಲು ಕರೆಸಿಕೊಂಡಿದ್ದರು. ಈ ವೇಳೆ ಸೆಲ್ವ ಕಾರ್ತಿಕ್, ಪ್ರಶಾಂತ್‌ನ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ವಿವಾಹಿತ ಮಹಿಳೆ ಸೆಲ್ವ ಕಾರ್ತಿಕ್ ಹೊಸೂರಿನ ಖಾಸಗಿ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಕಾರ್ತಿಕ್ ಕಗ್ಗದಾಸಪುರದ ವಿವಾಹಿತ ಮಹಿಳೆಯೊಂದಿಗೆ ಸ್ನೇಹ ಬೆಳೆಸಿಕೊಂಡು ಚಾಟ್ ಮಾಡಲು ಪ್ರಾರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಆತ ಮಹಿಳೆಯನ್ನು ಪ್ರೀತಿಸುತ್ತಿದ್ದ. ಆದರೆ ಆ ಮಹಿಳೆ ಆತನ ಸಂಪರ್ಕ ಕಡಿದುಕೊಂಡಿದ್ದಾರೆ. ಜೂನ್‌ನಲ್ಲಿ, ಕಾರ್ತಿಕ್ ಆಕೆಯ ಮನೆಗೆ ಭೇಟಿ ನೀಡಿ, ಆಕೆ ತನ್ನೊಂದಿಗೆ ಮಾತನಾಡದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ. ಆಕೆಯ ಪತಿ ಮತ್ತು ಇತರ ಕುಟುಂಬ ಸದಸ್ಯರು ಆತನ ಮನವೊಲಿಸಿ ವಾಪಸ್ ಕಳುಹಿಸಿದ್ದಾರೆ. ಆಕೆ ತನ್ನ ಗಂಡನನ್ನು ಬಿಡದಿದ್ದರೆ ಆಕೆಯ ತಂದೆ ಮತ್ತು ಸಂಬಂಧಿಯನ್ನು ಕೊಲ್ಲುವುದಾಗಿ ಫೋನ್ ಮೂಲಕ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಜುಲೈ 17ರಂದು ಬೆಂಗಳೂರಿಗೆ ಬಂದಿದ್ದ ಸೆಲ್ವ ಕಾರ್ತಿಕ್‌ನನ್ನು ಶೇಖರ್‌ ಮತ್ತು ಪ್ರಶಾಂತ್‌ ಅವರು ಬೈಕ್‌ನಲ್ಲಿ ಮುರುಗೇಶ್‌ಪಾಳ್ಯದತ್ತ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸೆಲ್ವ ಕಾರ್ತಿಕ್‌, ಬೈಕ್‌ನ ಮಧ್ಯ ಭಾಗದಲ್ಲಿ ಕುಳಿತಿದ್ದ ಪ್ರಶಾಂತ್‌ರ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾನೆ. ಬೈಕ್‌ ಚಾಲನೆ ಮಾಡುತ್ತಿದ್ದ ಶೇಖರ್‌ ಅವರು ಪ್ರಶಾಂತ್‌ರ ಚೀರಾಟ ಕೇಳಿ ವಾಹನ ನಿಲ್ಲಿಸುತ್ತಿದ್ದಂತೆ ಆರೋಪಿ ಸೆಲ್ವ ಕಾರ್ತಿಕ್‌ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಶಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಎಚ್‌ಎಎಲ್ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮೋದಿ ಜೊತೆ ಮಾತನಾಡಿದ್ದೇನೆ, ಭಾರತ ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿದೆ: Donald Trump

ಕೆನಡಾದಲ್ಲಿ ಪಂಜಾಬಿ ಗಾಯಕ ತೇಜಿ ಕಹ್ಲೋನ್ ಮೇಲೆ ಗುಂಡಿನ ದಾಳಿ: ಬುದ್ದಿ ಕಲಿಯದಿದ್ದರೆ ಸಾವು ನಿಶ್ಚಿತ; ಗೋದಾರಾ ಗ್ಯಾಂಗ್ ಎಚ್ಚರಿಕೆ

ICC Womens World Cup 2025: ಟೂರ್ನಿಯಿಂದ ಪಾಕಿಸ್ತಾನ ಔಟ್, ಭಾರತದಲ್ಲೇ ಸೆಮಿಫೈನಲ್, ಫೈನಲ್ ಪಂದ್ಯ

ಮಹಿಳೆಯರಿಗೆ ಆನ್‌ಲೈನ್ 'ಜಿಹಾದಿ ಕೋರ್ಸ್' ಆರಂಭಿಸಿದ ಜೈಶ್ ಉಗ್ರ ಸಂಘಟನೆ, ಶುಲ್ಕ ಕೇವಲ 500 ರೂ!

Karnataka Weather-ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ವರ್ಷಧಾರೆ, ಅ.29ರವರೆಗೆ ಮಳೆ ಸೂಚನೆ, 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

SCROLL FOR NEXT