ಸಂಗ್ರಹ ಚಿತ್ರ 
ರಾಜ್ಯ

Kebab ಗೆ ನಿಷೇಧಿತ ಕೃತಕ ಬಣ್ಣ ಬಳಕೆ: Empire Restaurant Group ಗೆ ನೋಟಿಸ್ ಜಾರಿ

ನಗರದಾದ್ಯಂತ ಇರುವ ರೆಸ್ಟೋರೆಂಟ್‌ನ ಆರು ಮಳಿಗೆಗಳಿಂದ ಸಂಗ್ರಹಿಸಲಾದ ಮಾದರಿಗಳ ಫಲಿತಾಂಶಗಳು ಕಬಾಬ್‌ಗಳಲ್ಲಿ ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್ ಮತ್ತು ಟಾರ್ಟ್ರಾಜಿನ್ ಇರುವುದು ಕಂಡುಬಂದಿದೆ.

ಬೆಂಗಳೂರು: ಆಹಾರ-ತಿನಿಸುಗಳಿಗೆ ಕೃತಕ ಬಣ್ಣ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು, ನಂತರವೂ, ಬೆಂಗಳೂರಿನಲ್ಲಿ ಇತರೆ ಮಳಿಗೆಗಳಲ್ಲಿ ಸಂಗ್ರಹಿಸಲಾದ ಚಿಕನ್ ಕಬಾಬ್‌ನ ಮಾದರಿಗಳಲ್ಲಿ ನಿಷೇಧಿತ ಕೃತಕ ಬಣ್ಣ ಬಳಕೆ ಮಾಡಿರುವುದು ಕಂಡುಬಂದಿದೆ. ಈ ಬೆಳವಣಿಗೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.

ನಗರದಾದ್ಯಂತ ಇರುವ ರೆಸ್ಟೋರೆಂಟ್‌ನ ಆರು ಮಳಿಗೆಗಳಿಂದ ಸಂಗ್ರಹಿಸಲಾದ ಮಾದರಿಗಳ ಫಲಿತಾಂಶಗಳು ಕಬಾಬ್‌ಗಳಲ್ಲಿ ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್ ಮತ್ತು ಟಾರ್ಟ್ರಾಜಿನ್ ಇರುವುದು ಕಂಡುಬಂದಿದೆ,

ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಆಹಾರ ಉತ್ಪನ್ನಗಳು ಮತ್ತು ವ್ಯಸನಕಾರಿ) ನಿಯಮಗಳು 2011 ರ ಪ್ರಕಾರ ಇವುಗಳನ್ನು ಬಳಸಬಾರದು ಎಂದು ತಿಳಿಸಿದೆ. ಇದು ಮಾನವ ಸೇವನೆಗೆ ಅಸುರಕ್ಷಿತ ಎಂದು ತಿಳಿಸಲಾಗಿದೆ. ಆದರೂ ನಿಷೇಧಿತ ಕೃತಕ ಬಣ್ಣಗಳನ್ನು ಬಳಕೆ ಮಾಡುತ್ತಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಜೂನ್ 27 ರಂದು ಮಾದರಿಗಳನ್ನು ಸಂಗ್ರಹಿಸಿ. ರಾಜ್ಯ ಆಹಾರ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದರು. ಈ ಮಾದರಿಗಳಲ್ಲಿ ನಿಷೇಧಿತ ಕೃತಕ ಬಣ್ಣ ಬಳಕೆಯಾಗಿರುವುದು ಪತ್ತೆಯಾಗಿದೆ.

ಚಿಕನ್ ಕಬಾಬ್‌ಗಳು ಮತ್ತು ಶವರ್ಮಾಗಳಿಗೆ ಹೆಸರುವಾಸಿಯಾದ ಪ್ರಮುಖ ಎಂಪೈರ್ ರೆಸ್ಟೋರೆಂಟ್‌ನಿಂದ ಸಂಗ್ರಹಿಸಲಾದ ತಿನಿಸಿನಲ್ಲೂ ಕೃತಕ ಬಣ್ಣ ಬಳಕೆ ಪತ್ತೆಯಾಗಿದೆ. ನಿಯಮ ಉಲ್ಲಂಘನೆ ಎರಡನೇ ಬಾರಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಎಂಪೈರ್ ರೆಸ್ಟೋರೆಂಟ್ ಗ್ರೂಪ್‌ಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ ಮತ್ತು ಚೀನಾ 'ಸ್ನೇಹಿತರಾಗಿರುವುದೇ' ಸರಿಯಾದ ಆಯ್ಕೆ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಉಡುಪಿ: ನಾಪತ್ತೆಯಾಗಿದ್ದ ಬೆಂಗಳೂರು ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

'HAL ನಿರ್ಮಿತ ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ ಗಳು ಹಸ್ತಾಂತರಕ್ಕೆ ಸಿದ್ಧ': ರಕ್ಷಣಾ ಕಾರ್ಯದರ್ಶಿ

Dharmasthala Case: NIA ತನಿಖೆ ಅಗತ್ಯವಿಲ್ಲ, SITಗೆ ಸ್ವಾತಂತ್ರ್ಯ ನೀಡಲಾಗಿದೆ; ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್‌ನಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಮಳೆ; ಪ್ರವಾಹ, ಭೂಕುಸಿತದ ಬಗ್ಗೆ IMD ಎಚ್ಚರಿಕೆ

SCROLL FOR NEXT