ಸಂಗ್ರಹ ಚಿತ್ರ 
ರಾಜ್ಯ

IRCTC Package: ಬೆಂಗಳೂರಿನಿಂದ ದೇಶಿಯ-ಅಂತರರಾಷ್ಟ್ರೀಯ ವಿಮಾನ ಪ್ರವಾಸ ಪ್ರಾರಂಭ

ಪ್ಯಾಕೇಜ್ ನಲ್ಲಿ ಪ್ರವಾಸ ವಿಮೆ, ಪ್ರಯಾಣದ ವೆಚ್ಚ, ಆಹಾರ, ವಾಸ್ತವ್ಯ, ದೃಶ್ಯವೀಕ್ಷಣೆ ಸೇರಿದಂತೆ ಅನೇಕ ವೆಚ್ಚಗಳನ್ನು ಕೂಡ ಸೇರ್ಪಡೆಯಾಗಿದೆ.

ಬೆಂಗಳೂರು: ರೈಲ್ವೆ ಸಚಿವಾಲಯದ ಅಡಿಯಲ್ಲಿ ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಯಾದ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ಬೆಂಗಳೂರಿನಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರವಾಸದ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ.

ಈ ಮೂಲಕ ಐಆರ್‌ಸಿಟಿಸಿ, ದೇಶ ಮತ್ತು ವಿದೇಶದ ಅನೇಕ ಪ್ರವಾಸಿ ಸ್ಥಳಗಳಿಗೆ ಕೈಗೆಟುಕುವ ಬೆಲೆಯಲ್ಲಿ ಜನರು ತಮ್ಮ ಕನಸಿನ ಸ್ಥಳಕ್ಕೆ ಪ್ರವಾಸ ಮಾಡುವ ಅವಕಾಶ ಮಾಡಿಕೊಟ್ಟಿದೆ.

ಪ್ಯಾಕೇಜ್ ನಲ್ಲಿ ಪ್ರವಾಸ ವಿಮೆ, ಪ್ರಯಾಣದ ವೆಚ್ಚ, ಆಹಾರ, ವಾಸ್ತವ್ಯ, ದೃಶ್ಯವೀಕ್ಷಣೆ ಸೇರಿದಂತೆ ಅನೇಕ ವೆಚ್ಚಗಳನ್ನು ಕೂಡ ಸೇರ್ಪಡೆಯಾಗಿದೆ.

ದೇಶೀಯ ವಿಮಾನ ಪ್ಯಾಕೇಜ್‌ಗಳು ಇಂತಿವೆ...

  • ಲಡಾಖ್‌ಗೆ 7 ದಿನಗಳ ಪ್ರವಾಸ ಆ.13ಕ್ಕೆ ಆರಂಭವಾಗಲಿದೆ. ಲೇಹ್, ಶಾಮ್ ವ್ಯಾಲಿ , ನುಬ್ರಾ, ತುರ್ತುಕ್ ಮತ್ತು ಪಾಂಗಾಂಗ್‌ಗಳನ್ನು ಒಳಗೊಂಡ ಈ ಪ್ರವಾಸಕ್ಕೆ ಒಬ್ಬರಿಗೆ 57,950 ರೂ. ದರ ಇರಲಿದೆ.

  • ಮಧ್ಯಪ್ರದೇಶದ ಜ್ಯೋತಿರ್ಲಿಂಗಗಳು 4 ದಿನಗಳ ಪ್ರವಾಸ ಆ.21ಕ್ಕೆ ಆರಂಭವಾಗಲಿದ್ದು, ಓಂಕಾರೇಶ್ವರ, ಮಹಾಕಾಲೇಶ್ವರ ಮತ್ತು ಇಂದೋರ್‌ಗಳಿಗೆ ಭೇಟಿ ಇರಲಿದೆ. ರೂ.24,600 ಪ್ರವಾಸ ದರ ನಿಗದಿಯಾಗಿದೆ.

  • ಅಯೋಧ್ಯೆ, ಗಯಾ, ಕಾಶಿ ಮತ್ತು ಪ್ರಯಾಗ್‌ರಾಜ್ 6 ದಿನಗಳ ಪ್ರವಾಸ ಆ.29ಕ್ಕೆ ಆರಂಭಗೊಳ್ಳಲಿದ್ದು, ರೂ. 34,200 ದರ ಇರಲಿದೆ.

  • ಸೆಪ್ಟೆಂಬರ್‌ 3ಕ್ಕೆ ಆರಂಭವಾಗುವ 13 ದಿನಗಳ ಚಾರ್ ಧಾಮ್ ಯಾತ್ರೆಯಲ್ಲಿ ಹರಿದ್ವಾರ, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದ್ರಿನಾಥ, ದೇವಪ್ರಯಾಗ ಮತ್ತು ರಿಷಿಕೇಶಕ್ಕೆ ಭೇಟಿ ಇರಲಿದ್ದು, ರೂ.60,950 ದರ ನಿಗದಿ ಮಾಡಲಾಗಿದೆ.

  • ಈ ಪ್ರವಾಸಗಳು ವಿಮಾನ ಟಿಕೆಟ್‌, ವಸತಿ, ಅಗತ್ಯ ಇರುವಲ್ಲಿ ವಾಹನ, ಅಲ್ಲದೇ ಆಹಾರ, ಪ್ರಯಾಣ ವಿಮೆ ಮತ್ತು ಅನ್ವಯವಾಗುವ ತೆರಿಗೆಗಳು ಒಳಗೊಂಡಿವೆ ಎಂದು ಐಆರ್‌ಸಿಟಿಸಿ ಮಾಹಿತಿ ನೀಡಿದೆ.

ಅಂತರರಾಷ್ಟ್ರೀಯ ವಿಮಾನ ಪ್ರವಾಸ ಪ್ಯಾಕೇಜ್‌ಗಳು ಇಂತಿವೆ...

  • ಅಕ್ಟೋಬರ್‌ 29ರಿಂದ 9 ದಿನಗಳ ದಕ್ಷಿಣ ಕೊರಿಯಾ ಪ್ರವಾಸ (ರೂ.2,68,900), ನವೆಂಬರ್‌ 6ರಿಂದ 6 ದಿನ ಭೂತಾನ್ ಪ್ರವಾಸ (ರೂ.83,500), ನವೆಂಬರ್‌ 17ರಿಂದ 5 ದಿನ ದುಬೈ-ಅಬುಧಾಬಿ ಪ್ರವಾಸ (ರೂ, 93,750) ಇರಲಿದೆ.

  • ಮಾಹಿತಿ ಮತ್ತು ಬುಕಿಂಗ್‌ಗಾಗಿ www.irctctourism.com ಗೆ ಭೇಟಿ ನೀಡಬಹುದು. ಇಲ್ಲವೇ ಮೊಬೈಲ್‌: 8595931294 /94 ಸಂಪರ್ಕಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

ಮತದಾರರ ಅಧಿಕಾರ ಯಾತ್ರೆಗೆ ಪ್ರತ್ಯೇಕ ತಂಡವಾಗಿ ತೆರಳಿದ CM-DCM: ಕಾಂಗ್ರೆಸ್ ನಲ್ಲಿ ಬದಲಾದ ಸಮೀಕರಣ; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ!

ಟ್ರಂಪ್ ಸುಂಕಾಸ್ತ್ರಕ್ಕೆ ಸೆಡ್ಡು: ಇಂದು ಚೀನಾ ಅಧ್ಯಕ್ಷ ಕ್ಸಿ ಜೊತೆಗೆ ಪ್ರಧಾನಿ ಮೋದಿಯ ಮಹತ್ವದ ಭೇಟಿ!

Israeli Strike: ಯೆಮೆನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ, ಇರಾನ್ ಬೆಂಬಲಿತ ಹೌತಿ ಪ್ರಧಾನಿ, ಹಲವು ಸಚಿವರ ಹತ್ಯೆ!

SCROLL FOR NEXT