ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 3 ವರ್ಷದ ಕಾವ್ಯಾ ಎಂಬ ಹೆಸರಿನ ಗರ್ಭಿಣಿ ಜೀಬ್ರಾ ಮೃತಪಟ್ಟಿದೆ.
8 ತಿಂಗಳ ಗರ್ಭಿಣಿಯಾಗಿದ್ದ ಜೀಬ್ರಾ ಇನ್ನೂ ಕೆಲವೇ ದಿನಗಳಲ್ಲಿ ಮರಿ ಜೀಬ್ರಾಗೆ ಜನ್ಮ ನೀಡಬೇಕಿತ್ತು. ಗಂಡು ಜಿರಾಫೆಗಳು ಬೆನ್ನಟ್ಟುವಾಗ ಅಥವಾ ಚಿರತೆಗಳ ಭಯದಿಂದ ಓಡುವಾಗ ತಡೆ ಬೇಲಿಗೆ ಡಿಕ್ಕಿಯಾಗಿ ಜೀಬ್ರಾ ಮೃತಪಟ್ಟಿದೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಜೀಬ್ರಾಗಳು ಬಹಳ ಸೂಕ್ಷ್ಮಯುತ ಪ್ರಾಣಿಯಾಗಿದ್ದು, ತಪ್ಪಿಸಿಕೊಳ್ಳಲು ಓಡುವುದು ಅವುಗಳ ನೈಸರ್ಗಿಕ ಪ್ರವೃತ್ತಿಯಾಗಿದೆ ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಎವಿ ಸೂರ್ಯ ಸೇನ್ ಅವರು ಹೇಳಿದ್ದಾರೆ.
ಮೃತಪಟ್ಟ ಜೀಬ್ರಾ ಒತ್ತಡ, ಆಘಾತ ಮತ್ತು ಮಯೋಪತಿಯಿಂದ ಬಳಲುತ್ತಿದ್ದರು. ಓಡುವಾಗ ತಡೆ ಬೇಲಿಗೆ ಡಿಕ್ಕಿ ಹೊಡೆದು ತನ್ನನ್ನು ತಾನೇ ಗಾಯಗೊಳಿಸಿಕೊಂಡು, ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಬನ್ನೇರುಘಟ್ಟ ಸುತ್ತ ಮುತ್ತ ಚಿರತೆಗ ಹಾವಳಿ ಹೆಚ್ಚಾಗುತ್ತಿದೆ. ಹಲವು ಗ್ರಾಮಗಳಿಗೂ ಚಿರತೆಗಳುು ಬೇಟಿ ನೀಡುತ್ತಿದೆ. ಪ್ರಮುಖವಾಗಿ ಬನ್ನೇರುಘಟ್ಟ ಮೃಗಾಲಯದಲ್ಲಿ ಹಲವು ಸಂರಕ್ಷಿತ ವನ್ಯ ಪ್ರಾಣಿಗಳು ಇರುವ ಕಾರಣ ಕಾಡಿನ ಚಿರತೆಗಳು ಇದೇ ಸ್ಥಳದಲ್ಲಿ ಹೆಚ್ಚು ಓಡಾಡುತ್ತಿದೆ. ಚಿರತೆ ಆಗಮನದಿಂದ ತಡೆಗೋಡೆ ಒಳಗಿರುವ ವನ್ಯ ಮೃಗಗಳು ಭಯಗೊಳ್ಳುತ್ತಿದೆ. ದಿಕ್ಕುಪಾಲಾಗಿ ಓಡುತ್ತಿದೆ. ಇದು ಗರ್ಭಿಣಿ ಮೃಗಗಳಿಗೆ ಅಪಾಯ ಹೆಚ್ಚಿಸುತ್ತಿದೆ.
ಈ ಬೆಳವಣಿಗೆ ಕುರಿತು ಮಾತನಾಡಿರುವ ಅಧಿಕಾರಿಯೊಬ್ಬರು, ಮೃಗಾಲದಲ್ಲಿ ಎರಡು ಗಂಡು ಮತ್ತು ಆರು ಹೆಣ್ಣು ಜೀಬ್ರಾಗಳಿವೆ. 2019ರಲ್ಲಿಯೂ ಇದೇ ರೀತಿಯ ಸಾವು ವರದಿಯಾಗಿತ್ತು. ಮಿಲನಕ್ಕೂ ಮುನ್ನ ಗಂಡು ಪ್ರಾಣಿಗಳು ಹೆಣ್ಣು ಪ್ರಾಣಿಗಳನ್ನು ಓಡುವಂತೆ ಮಾಡಿ ದಣಿಯುವಂತೆ ಮಾಡುತ್ತವೆ. ಇದು ಪ್ರಾಣಿಗಳ ಪ್ರವೃತ್ತಿ. ಪ್ರಸ್ತುತ ಮೃಗಾಲಯದಲ್ಲಿರುವ ಎಲ್ಲಾ ಹೆಣ್ಣು ಚಿರತೆಗಳು ಗರ್ಭಿಣಿಯಾಗಿವೆ. ರಕ್ಷಿಸಲ್ಪಟ್ಟ, ಸೆರೆಹಿಡಿಯಲ್ಪಟ್ಟ ಮತ್ತು ಸೆರೆಯಲ್ಲಿ ಜನಿಸಿದ ಚಿರತೆಗಳನ್ನು ಮೃಗಾಲಯದಲ್ಲಿ ಇರಿಸಲಾಗಿದ್ದು, ಚಿರತೆಗಳ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ಮೃಗಾಲಯದ ಹೊರಗೂ ಚಿರತೆಗಳು ಓಡಾಡುತ್ತಿದ್ದು, ಅವುಗಳನ್ನು ನಿರಂತವಾಗಿ ಓಡಿಸಿ ಸ್ಥಳಾಂತರಿಸಲಾಗುತ್ತಿದೆ. ಇದೇ ರೀತಿ ಚಿರತೆದೊಂಡು ಮೃಗಾಲಯ ಪ್ರದೇಶಕ್ಕೆ ನಡೆದು ಬಂದಿರಬುದು. ಜೀಬ್ರಾವನ್ನು ಹೆದರಿಸಿರಬಹುದು ಎಂದು ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಜೀಬ್ರಾ ಸಾವಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅಸಹಜ ಪರಿಸ್ಥಿತಿಗಳಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟಲು ಎಲ್ಲಾ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆಯೂ ಸಚಿವರು ಸೂಚನೆ ನೀಡಿದ್ದಾರೆ.