ಸಂಗ್ರಹ ಚಿತ್ರ 
ರಾಜ್ಯ

ಆರೋಗ್ಯ ಇಲಾಖೆಯಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೆ ಸರ್ಕಾರ ಮುಂದು: ಜುಲೈ 1ರಿಂದ ಮೊಬೈಲ್ ಹಾಜರಾತಿ ಕಡ್ಡಾಯ!

ಮೊಬೈಲ್ ಆಧಾರಿತ ಪರಿಹಾರವು ಹಾರ್ಡ್‌ವೇರ್‌ನ ಅಗತ್ಯವನ್ನು ತೆಗೆದುಹಾಕುತ್ತದೆ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಕಡಿಮೆ ಮಾಡಲಿದೆ.

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗಳಿಗೆ ಮೊಬೈಲ್ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ.

ಈ ಸಂಬಂಧ ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ರಸ್ತುತ ಬಳಸಲ್ಪಡುತ್ತಿರುವ ಹಾಜರಾತಿ ನಿರ್ವಹಣಾ ವ್ಯವಸ್ಥೆಯು ಮೀಸಲಾದ ಹಾರ್ಡ್‌ವೇ‌ರ್ ಸಾಧನಗಳ ಮೂಲಕ ಆಧಾರ್ ಆಧಾರಿತ ಬಯೋಮೆಟ್ರಿಕ್ ಪ್ರಮಾಣೀಕರಣವನ್ನು ಅವಲಂಭಿಸಿದೆ. ಹಾರ್ಡ್‌ವೇರ್‌ ಸಾಧನಗಳಿಗೆ ಆಗಾಗ್ಗೆ ನಿರ್ವಹಣೆ, ದುರಸ್ತಿ ಮತ್ತು ಆವರ್ತಕ ಬದಲಾವಣೆಗಳ ಅಗತ್ಯವಿದ್ದು, ಇದು ಇಲಾಖೆಗೆ ಗಣನೀಯ ಪುನರಾವರ್ತಿತ ವೆಚ್ಚಗಳಿಗೆ ಕಾರಣವಾಗಿದೆ.

ಬಯೋಮೆಟ್ರಿಕ್ ಸಾಧನಗಳ ಸ್ಥಿರ ಸ್ವರೂಪದಿಂದಾಗಿ ಹಾಜರಾತಿ ಗುರುತಿಸುವಿಕೆಯನ್ನು ನಿರ್ದಿಷ್ಟ ಸ್ಥಳಗಳಿಗೆ ಸೀಮಿತಗೊಳಿಸಿದೆ. ಕ್ಷೇತ್ರ ಸಿಬ್ಬಂದಿ ಮತ್ತು ದೂರದ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಅಸಮರ್ಥತೆಗಳನ್ನು ಸೃಷ್ಟಿಸುತ್ತದೆ. ಈ ವ್ಯವಸ್ಥೆಯ ಸೀಮಿತ ವಿಸ್ತರಣೆ, ಅಂದರೆ ಹೊಸ ಸೌಲಭ್ಯಗಳಿಗೆ ವಿಸ್ತರಿಸಲು ಹಾರ್ಡ್‌ವೇರ್‌ ಹೂಡಿಕೆಗಳು ಮತ್ತು ಭೌತಿಕ ಸ್ಥಾಪನಾ ಪ್ರಕ್ರಿಯೆಗಳ ಅಗತ್ಯವಿದೆ. ಇದಲ್ಲದೆ, ಹಾರ್ಡವೇರ್ ವೈಫಲ್ಯಗಳು ಮತ್ತು ಸಂಪರ್ಕ ಸಮಸ್ಯೆಗಳು ಆಗಾಗ್ಗೆ ವ್ಯವಸ್ಥೆಯ ಡೌನ್‌ಟೈಮ್‌ಗೆ ಕಾರಣವಾಗುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ, 2025-26ನೇ ಸಾಲಿನ ಬಜೆಟ್ ಭಾಷಣದ ಕಂಡಿಕೆ-152(ii)ರಲ್ಲಿ "ಮೊಬೈಲ್ ತಂತ್ರಾಂಶದ ಮೂಲಕ ಹಾಜರಾತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು” ಎಂದು ಘೋಷಿಸಲಾಗಿದೆ. ಅದರಂತೆ ಕರ್ನಾಟಕದ ಎಲ್ಲಾ 12000 ಆರೋಗ್ಯ ಸಂಸ್ಥೆಗಳನ್ನು ಒಳಗೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAMS) ಅನುಷ್ಠಾನಗೊಳಿಸುವುದನ್ನು ಪ್ರಸ್ತಾಪಿಸಲಾಗಿದ್ದು, ವ್ಯವಸ್ಥೆಯು ಆಧಾರ್ ಆಧಾರಿತ ಮುಖ ಪಮಾಣೀಕರಣ, ಭೌಗೋಳಿಕ ನಿರ್ದಿಷ್ಕಾಂಕಗಳೊಳಗೆ ಕ್ಷೇತ್ರದಲ್ಲಿ ಹಾಜರಾತಿ ಗುರುತಿಸಲು ಸೌಲಭ್ಯವನ್ನು ನೀಡುತ್ತದೆ.

ಮೊಬೈಲ್ ಆಧಾರಿತ ಪರಿಹಾರವು ಹಾರ್ಡ್‌ವೇರ್‌ನ ಅಗತ್ಯವನ್ನು ತೆಗೆದುಹಾಕುತ್ತದೆ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಕಡಿಮೆ ಮಾಡಲಿದೆ. ಹಾಜರಾತಿ ಮೇಲ್ವಿಚಾರಣೆ ಮತ್ತು ಕಾರ್ಯಬಲ ನಿರ್ವಹಣೆಯನ್ನು ಸುಧಾರಿಸಲಿದೆ, ಆದ್ದರಿಂದ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಈ ಯೋಜನೆಯು ಸ್ವತಂತ್ರವಾಗಿ ಇ-ಆಡಳಿತ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಲಿದ್ದು, ಕರ್ನಾಟಕದ ಎಲ್ಲಾ ಆರೋಗ್ಯ ಸಂಸ್ಥೆಗಳನ್ನೊಳಗೊಂಡಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಂತೆ ಆದೇಶಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಪಾರದರ್ಶಕ ವ್ಯವಸ್ಥೆ ತರುವತ್ತು ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗಳಿಗೆ ಮೊಬೈಲ್ ಹಾಜರಾತಿ ಕಡ್ಡಾಯಗೊಳಿಸಲಾಗುತ್ತಿದೆ. ನೂತನ ಹಾಜರಾತಿ ವ್ಯವಸ್ಥೆಗೆ ಆರೋಗ್ಯ ಇಲಾಖೆ ಅಧಿಕಾರಿ, ನೌಕರರು ಸಹಕರಿಸುವಂತೆ ನಾನು ಮನವಿ ಮಾಡುತ್ತೇನೆ. ಜುಲೈ 1 ಮೊಬೈಲ್ ಹಾಜರಾಗಿ ಜಾರಿಗೆ ಬರಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಿಗುವುದಿಲ್ಲ ಎಂಬ ಸಾರ್ವಜನಿಕರ ದೂರುಗಳು ಇನ್ಮುಂದೆ ಕಡಿಮೆಯಾಗಲಿವೆ ಎಂಬ ನಿರೀಕ್ಷೆ ನನಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರವೇ ಅಡ್ಡಿ ಸೃಷ್ಟಿಸುತ್ತಿದೆ: DCM ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

SCROLL FOR NEXT