ಬೆಂಗಳೂರು: ವಿಮಾನ ನಿಲ್ದಾಣದ ಭದ್ರತಾ ಪಡೆಗೆ ಹುಸಿ ಬಾಂಬ್ ಬೆದರಿಕೆ ಬಂದ ನಂತರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತೀವ್ರ ಭದ್ರತಾ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.
ಮೂಲಗಳ ಪ್ರಕಾರ, ಬುಧವಾರ ರಾತ್ರಿ ಭಯೋತ್ಪಾದಕರ ಹೆಸರಿನಲ್ಲಿ ಕಳುಹಿಸಲಾದ ಇಮೇಲ್‌ನಲ್ಲಿ ಎರಡು ಬಾಂಬ್‌ಗಳನ್ನು ಇಟ್ಟಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಒಂದು "ಪ್ಲಾನ್ ಎ" ನ ಭಾಗವಾಗಿ ಮತ್ತು ಮೊದಲನೆಯದು ವಿಫಲವಾದರೆ "ಪ್ಲಾನ್ ಬಿ" ಅಡಿಯಲ್ಲಿ ಬ್ಯಾಕಪ್ ಇದೆ ಎಂದು ಬೆದರಿಕೆ ಹಾಕಲಾಗಿದೆ.
ವಿಮಾನ ನಿಲ್ದಾಣದ ಶೌಚಾಲಯದ ಪೈಪ್‌ಲೈನ್ ಒಳಗೆ ಸ್ಫೋಟಕ ಸಾಧನ ಇರಿಸಲಾಗಿದೆ ಎಂದು ಇಮೇಲ್ ನಲ್ಲಿ ತಿಳಿಸಲಾಗಿದೆ.
ಬೆದರಿಕೆ ನಂತರ ಭದ್ರತಾ ಪಡೆಗಳು ಆವರಣದ ಸಮಗ್ರ ತಪಾಸಣೆ ನಡೆಸಿದವು. ವಿವರವಾದ ಪರಿಶೀಲನೆಯ ನಂತರ, ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಇದು ಹುಸಿ ಬಾಂಬ್ ಬೆದರಿಕೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಬೆದರಿಕೆ ಹಾಕಲು ಬಳಸಿದ ಇಮೇಲ್ ಐಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.