ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿದಿದ ಹಿನ್ನೆಲೆಯಲ್ಲಿ ಹೆಬ್ಬಾಳದ ಯಮಹಾ ಬೈಕ್ ಶೋ ರೂಂಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 5,000 ರೂ. ದಂಡ ವಿಧಿಸಿದೆ.
ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಮಹೇಶ್ವರ ರಾವ್, ಶೋ ರೂಂ ಸಿಬ್ಬಂದಿಗಳು ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುತ್ತಿರುವುದನ್ನು ಕಂಡು, ದಂಡ ವಿಧಿಸಲು ಬಿಬಿಎಂಪಿ ಮಾರ್ಷಲ್‌ಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ನಗರದಲ್ಲಿ ರಸ್ತೆ ಬದಿ ಕಸ ಸುರಿಯುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವಂತೆ ಸೂಚನೆ ನೀಡಿದರು.
ಬಳಿಕ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಬಳಿಯ ಪಾದಚಾರಿ ಮಾರ್ಗವನ್ನು ಪರಿಶೀಲಿಸಿದ ಅವರು, ಪಾದಚಾರಿಗಳಿಗೆ ಯಾವುದೇ ಅಡೆತಡೆಯಿಲ್ಲದ ರೀತಿಯಲ್ಲಿ ಮಾರ್ಗವನ್ನು ನಿರ್ಮಿಸಬೇಕು ಎಂದು ಸೂಚಿಸಿದರು. ಹಾನಿಗೊಳಗಾದ ಭಾಗಗಳನ್ನು ವಿಳಂಬವಿಲ್ಲದೆ ದುರಸ್ತಿ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಬ್ಬಾಳದ ಅಮೃತ್ ಸಾಗರ್ ಹೋಟೆಲ್ ಬಳಿಯ 4ನೇ ಮುಖ್ಯ ರಸ್ತೆಯಲ್ಲಿರುವ ಕಸ ಸುರಿಯುವ ಸ್ಥಳವನ್ನು ಪರಿಶೀಲಿಸಿದ ಅವರು, ಆ ಪ್ರದೇಶವನ್ನು ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಂತರ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಅಧಿಕಾರಿಗಳು ತಕ್ಷಣ ಆಟೋ ಟಿಪ್ಪರ್ ಅನ್ನು ನಿಯೋಜಿಸಿ ತ್ಯಾಜ್ಯವನ್ನು ತೆರವುಗೊಳಿಸಿದರು.
ನಗರದ ಸ್ವಚ್ಛತೆಯನ್ನು ಹೆಚ್ಚಿಸಲು, BSWML ದೂರು ಕೇಂದ್ರವನ್ನು ಸ್ಥಾಪಿಸಿದೆ ಮತ್ತು ನಾಗರಿಕರು ಫೋಟೋದೊಂದಿಗೆ ಸಂದೇಶವನ್ನು ಕಳುಹಿಸುವ ಮೂಲಕ ದೂರುಗಳನ್ನು ನೋಂದಾಯಿಸಲು ಮೀಸಲಾದ ವಾಟ್ಸಾಪ್ ಸಂಖ್ಯೆ - 9448197197 ಅನ್ನು ಒದಗಿಸಲಾಗಿದೆ. ದೂರು ಸ್ವೀಕರಿಸಿದ ನಂತರ, ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲಿದ್ದಾರೆ.
ಇದೇ ವೇಳೆ ದುರ್ಬಲ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸುತ್ತಿರುವ ಬಿಬಿಎಂಪಿ, ಅಧಿಕಾರಿಗಳಿಗೆ ಮಾಹಿತಿ ನೀಡಲು ಸಹಾಯವಾಣಿ ಸಂಖ್ಯೆ 1533 ಅನ್ನು ಸಂಪರ್ಕಿಸಲು ಕರೆ ನೀಡಿದೆ.
ಅಲ್ಲದೆ, ಬಿಬಿಎಂಪಿ ಅಧಿಕಾರಿಗಳ ವಲಯವಾರು ಸಂಖ್ಯೆಗಳನ್ನು ಕೂಡ ಹಂಚಿಕೊಂಡಿದೆ.
ಪಶ್ಚಿಮ ವಲಯ
9480683341 -- ರಾಜಾಜಿನಗರ, ಗೋವಿಂದರಾಜನಗರ, ಮಲ್ಲೇಶ್ವರಂ
9449175978 -- ಮಹಾಲಕ್ಷ್ಮಿಪುರಂ, ಗಾಂಧಿನಗರ, ಚಾಮರಾಜಪೇಟೆ
ಪೂರ್ವ ವಲಯ
9113530344 -- ಶಾಂತಿನಗರ, ಸಿವಿ ರಾಮನ್ ನಗರ, ಪುಲಿಕೇಶಿನಗರ
9164597895 -- ಶಿವಾಜಿನಗರ, ಹೆಬ್ಬಾಳ, ಸರ್ವಜ್ಞ ನಗರ
ದಕ್ಷಿಣ ವಲಯ
9480683655 -- ಬಸವನಗುಡಿ, ವಿಜಯನಗರ, ಪದ್ಮನಾಭನಗರ
9740576919 -- ಚಿಕ್ಕಪೇಟೆ, ಜಯನಗರ
7676165253 -- BTM ಲೇಔಟ್
9448234928- ದಾಸರಹಳ್ಳಿ
9480685399 -ಬೆಂಗಳೂರು ದಕ್ಷಿಣ ಕ್ಷೇತ್ರ
7760933913 -- ಬೊಮ್ಮನಹಳ್ಳಿ, ಆನೇಕಲ್
ಯಲಹಂಕ ವಲಯ
9964530649 -- ಯಲಹಂಕ
9483139438 -- ಬ್ಯಾಟರಾಯನಪುರ
ರಾಜರಾಜೇಶ್ವರಿ ನಗರ ವಲಯ
6361903330 -- ರಾಜರಾಜೇಶ್ವರಿ ನಗರ
9880516322 -- ಯಶವಂತಪುರ
ಮಹದೇವಪುರ ವಲಯ
9480685541 -- ಮಹದೇವಪುರ, ಕೆಆರ್ ಪುರ