ಲಕ್ಷ್ಮಿ ಹೆಬ್ಬಾಳ್ಕರ್, ಸಿ.ಟಿ.ರವಿ 
ರಾಜ್ಯ

ಸಿ.ಟಿ ರವಿ-ಹೆಬ್ಬಾಳ್ಕರ್ ಪ್ರಕರಣ 'ಎಥಿಕ್ಸ್ ಕಮಿಟಿ'ಗೆ ಹಸ್ತಾಂತರ..!

ಸಿ.ಟಿ ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ಈಗಾಗಲೇ ಅಂತ್ಯ ಆಗಿದೆ. ಬೆಳಗಾವಿಯಲ್ಲೇ ನಾನು ಅದಕ್ಕೆ ರೂಲಿಂಗ್ ಕೊಟ್ಟಿದ್ದೆ. ಆದರೆ, ಇಬ್ಬರೂ ಮತ್ತೆ ದೂರು ಕೊಟ್ಟಿದ್ದಾರೆ.

ಬೆಂಗಳೂರು: ಸಿ.ಟಿ.ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಪ್ರಕರಣವನ್ನು ವಿಧಾನ ಪರಿಷತ್‌ನ ಎಥಿಕ್ಸ್ ಕಮಿಟಿಗೆ ಹಸ್ತಾಂತರಿಸಲಾಗಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಶನಿವಾರ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ಈಗಾಗಲೇ ಅಂತ್ಯ ಆಗಿದೆ. ಬೆಳಗಾವಿಯಲ್ಲೇ ನಾನು ಅದಕ್ಕೆ ರೂಲಿಂಗ್ ಕೊಟ್ಟಿದ್ದೆ. ಆದರೆ, ಇಬ್ಬರೂ ಮತ್ತೆ ದೂರು ಕೊಟ್ಟಿದ್ದಾರೆ. ಇದರ ಮಧ್ಯೆ ಇಬ್ಬರಿಗೂ ಸಂಧಾನ ಮಾಡೋ ಕೆಲಸಕ್ಕೆ ಮುಂದಾಗಿದ್ದೆ. ಆದರೆ, ಇದಕ್ಕೆ ಯಾರು ಒಪ್ಪಿಲ್ಲ. ಹೀಗಾಗಿ ಪ್ರಕರಣವನ್ನ ಎಥಿಕ್ಸ್ ಕಮಿಟಿಗೆ ನೀಡಿದ್ದೇನೆಂದು ಹೇಳಿದರು.

ಎಥಿಕ್ಸ್ ಕಮಿಟಿ ವರದಿ ಕೊಟ್ಟ ಮೇಲೆ ಮುಂದಿನ ತೀರ್ಮಾನ ಮಾಡುತ್ತೇನೆ. ಒಂದು ತಿಂಗಳಲ್ಲಿ ವರದಿ ಕೊಡಲು ಹೇಳಿದ್ದೇನೆ. ಈ ವಿಷಯ ಸದನದಲ್ಲಿ ಚರ್ಚೆ ಆಗುವುದಿಲ್ಲ. ಎಥಿಕ್ಸ್ ಕಮಿಟಿಯಲ್ಲಿ ಸಿ.ಟಿ ರವಿ ‌ಇದ್ದರೂ, ಈಗ ಅವರದ್ದೇ ಕೇಸ್ ಬಂದಿರುವುದರಿಂದ ಅವರನ್ನು ಎಥಿಕ್ಸ್ ಕಮಿಟಿಯಿಂದ ಕೈ ಬಿಡಲಾಗಿದೆ ಎಂದು ತಿಳಿಸಿದರು.

ಸದನದಲ್ಲಿ ಮುಗಿದದ್ದನ್ನ ಅಲ್ಲೇ ಮುಗಿಸಬೇಕಿತ್ತು. ಸದನ ನಡೆದಾಗ ನಡೆದಿದ್ದರೆ ಹೀಗೆ ಆಗುತ್ತಿರಲಿಲ್ಲ. ಸದನ ನಡಯದೇ ಇದ್ದಾಗ ಇದು ನಡೆದಿರೋದಕ್ಕೆ ಇಷ್ಟು ದೊಡ್ಡದು ಆಗಿದೆ. ಹೀಗಾಗಿ ಎಥಿಕ್ಸ್ ಕಮಿಟಿಗೆ ಕೊಡಲಾಗಿದೆ. ಎಥಿಕ್ಸ್ ಕಮಿಟಿ ವರದಿ ಕೊಡಲಿ ನೋಡೋಣ. ಎಥಿಕ್ಸ್ ಕಮಿಟಿಯಲ್ಲಿಯೇ ಶೇ,99ರಷ್ಟು ಸಮಸ್ಯೆ ಪರಿಹಾರ ಆಗುವ ವಿಶ್ವಾಸ ಇದೆ. ಇಲ್ಲದೇ ಹೋದರೆ ಎಥಿಕ್ಸ್ ಕಮಿಟಿ ವರದಿಯನ್ನು ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ: ಹೌತಿಗಳು ಬರ್ತಾರೆ ಎಂದು Iran ಎಚ್ಚರಿಕೆ

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಉಗ್ರರೊಂದಿಗೆ ನಂಟು ಆರೋಪ: ಬಳ್ಳಾರಿ ಯುವಕ ಸೇರಿ ದೇಶಾದ್ಯಂತ 12 ಮಂದಿ ಬಂಧನ

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

ಮಾನಸಿಕ ನೆಮ್ಮದಿಗೆ 10 ಸಾವಿರ ರೂ, ಸ್ವಯಂ ಆರೈಕೆಗೆ 10 ಸಾವಿರ: 22 ವರ್ಷದ ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ ವೈರಲ್!

SCROLL FOR NEXT