ವಸುಂಧರಾ ನಾಯ್ಕ್ 
ರಾಜ್ಯ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಪದವೀಧರೆ ಕೆನಡಾ ಫ್ಯಾಮಿಲಿ ಕೋರ್ಟ್ ಜಡ್ಜ್ ಆಗಿ ನೇಮಕ!

ಕೆನಡಾದಲ್ಲಿ ಹುಟ್ಟಿ, ಬೆಳೆದು ಮತ್ತು ಶಿಕ್ಷಣ ಪಡೆದ ಹಿಂದಿನ ಭಾರತೀಯ ಮೂಲದ ನ್ಯಾಯಾಧೀಶರಿಗಿಂತ ವಸುಂದರಾ ನಾಯ್ಕ್ ಭಿನ್ನವಾಗಿದ್ದಾರೆ, ಏಕೆಂದರೇ ಅವರು ಭಾರತದಲ್ಲೇ ಹುಟ್ಟಿ ಬೆಳೆದಿದ್ದಾರೆ.

ಬೆಂಗಳೂರು: ಭಾರತದಲ್ಲಿ ಅರ್ಹತೆ ಪಡೆದ ವಕೀಲರೊಬ್ಬರಿಗೆ ಐತಿಹಾಸಿಕ ಮೊದಲ ಬಾರಿಗೆ, ಬೆಂಗಳೂರಿನವರಾದ ವಸುಂಧರಾ ನಾಯ್ಕ್ ಕೆನಡಾದ ಒಂಟಾರಿಯೊದಲ್ಲಿರುವ ಫ್ಯಾಮಿಲಿ ಕೋರ್ಟ್ ಆಫ್ ಜಸ್ಟೀಸ್‌ನಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

ಕಾನೂನು ವೃತ್ತಿಪರತೆಯಲ್ಲಿ ಅಂತರರಾಷ್ಟ್ರೀಯವಾಗಿ ತರಬೇತಿ ಪಡೆದ ವಸುಂಧರಾ ನಾಯ್ಕ್ ಕೆನಡಾದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇರಿಕೊಂಡಿದ್ದಾರೆ. ಕೆನಡಾದಲ್ಲಿ ಹುಟ್ಟಿ, ಬೆಳೆದು ಮತ್ತು ಶಿಕ್ಷಣ ಪಡೆದ ಹಿಂದಿನ ಭಾರತೀಯ ಮೂಲದ ನ್ಯಾಯಾಧೀಶರಿಗಿಂತ ವಸುಂದರಾ ನಾಯ್ಕ್ ಭಿನ್ನವಾಗಿದ್ದಾರೆ, ಏಕೆಂದರೇ ಅವರು ಭಾರತದಲ್ಲೇ ಹುಟ್ಟಿ ಬೆಳೆದಿದ್ದಾರೆ.

ಭಾರತ, ಸ್ವೀಡನ್, ಸಿಂಗಾಪುರ ಮತ್ತು ಕೆನಡಾದಲ್ಲಿ ಕಾನೂನು ವೃತ್ತಿಜೀವನ ಪ್ರಾರಂಭಿಸುವ ಮೊದಲು ಅವರು ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ನಲ್ಲಿ ತಮ್ಮ ಕಾನೂನು ಕುಶಾಗ್ರಮತಿಯನ್ನು ಹೆಚ್ಚಿಸಿಕೊಂಡರು.

ನ್ಯಾಯಮೂರ್ತಿ ನಾಯ್ಕ್ ನವದೆಹಲಿಯಲ್ಲಿ ಮಾನವ ಹಕ್ಕುಗಳು ಮತ್ತು ಕ್ರಿಮಿನಲ್ ರಕ್ಷಣಾ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ನಂತರ ಒಂದು ಬೂಟೀಕ್ ಸಂಸ್ಥೆಯಲ್ಲಿ ಬೌದ್ಧಿಕ ಆಸ್ತಿ ಕಾನೂನಿನಲ್ಲಿ ಪರಿಣತಿ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ.

ಅವರ ಪರಿಣತಿಯು ಅವರನ್ನು ಭಾರತದಲ್ಲಿನ ಸಿಸ್ಕೋ ಸಿಸ್ಟಮ್ಸ್‌ ನಿಂದ ಸಿಂಗಾಪುರಕ್ಕೆ ಕರೆದೊಯ್ದಿತು. ಕೆನಡಾದ ಒಟ್ಟಾವಾದಲ್ಲಿ ರಾಬಿನ್ಸ್ ನಾಯಕ್ ಎಲ್‌ಎಲ್‌ಪಿಯನ್ನು ಸಹ-ಸ್ಥಾಪಿಸಿದರು, ಅಲ್ಲಿ ಅವರು ಕುಟುಂಬ, ಮಕ್ಕಳ ರಕ್ಷಣೆ ಮತ್ತು ದತ್ತು ಕಾನೂನಿನಲ್ಲಿ ಅಸಾಧಾರಣ ಶಕ್ತಿಯಾಗಿ ಬೆಳೆದರು.

ನ್ಯಾಯಾಲಯದ ಆಚೆಗೆ, ನ್ಯಾಯಮೂರ್ತಿ ವಸುಂದರಾ ನಾಯ್ಕ್ ಅವರ ಪ್ರಭಾವ ಕಾನೂನು ಶಿಕ್ಷಣ, ವಕಾಲತ್ತು ಮತ್ತು ತಳಮಟ್ಟದ ಯೋಜನೆಗಳಿಗೂ ಹರಡಿದೆ. ಅವರು ಒಟ್ಟಾವಾ ವಿಶ್ವವಿದ್ಯಾಲಯದಲ್ಲಿ ವಿಚಾರಣೆ ಮತ್ತು ಕುಟುಂಬ ವಕಾಲತ್ತುಗಳನ್ನು ಕಲಿಸಿದ್ದಾರೆ, ಸಮುದಾಯ ಕಾನೂನು ಸೇವೆಗಳ ಒಟ್ಟಾವಾದ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಸ್ಥಳೀಯ ಗುಂಪುಗಳು ಮತ್ತು ಮಹಿಳಾ ಸಮುದಾಯಗಳಿಗೆ ಕಾನೂನು ನೆರವು ನೀಡಿದ್ದಾರೆ.

ಆಕೆಯ ತಂದೆ ಕೆಲಸ ಮಾಡುತ್ತಿದ್ದ ಸಿಪಿಆರ್‌ಐ ಕ್ವಾರ್ಟರ್ಸ್‌ನಲ್ಲಿದ್ದ ವಸುಂಧರಾ, ನನ್ನೊಂದಿಗೆ ಶಾಲೆಗೆ ಸೈಕಲ್ ತುಳಿದುಕೊಂಡು ಬರುತ್ತಿದ್ದರು. ಅವರು ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮರಾಗಿದ್ದರು. ಅವರು ಅತ್ಯುತ್ತಮ ಗಾಯಕಿಯೂ ಆಗಿದ್ದರು. ವಕೀಲರಾಗಬೇಕೆಂಬುದು ಅವರ ಬಾಲ್ಯದ ಕನಸು ಎಂದು ನನಗೆ ಇನ್ನೂ ನೆನಪಿದೆ ಎಂದು ಒಂದರಿಂದ ಹತ್ತನೇ ತರಗತಿಯವರೆಗೆ ವಸುಂಧರಾ ಅವರ ಸಹಪಾಠಿಯಾಗಿದ್ದ ಅವರ ಸ್ನೇಹಿತೆ ಎಲಿಜಬೆತ್ ಜೇನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯಾವ ಕ್ರಾಂತಿಯು ಇಲ್ಲ, ಕೇವಲ ''ಮಾಧ್ಯಮ ಸೃಷ್ಟಿ''; ನನ್ನ ಸ್ಥಾನ ಈಗಲೂ ಗಟ್ಟಿ, ಮುಂದೆಯೂ ಗಟ್ಟಿ

ಬೆಂಗಳೂರು ಎಟಿಎಂ ದರೋಡೆ ಪ್ರಕರಣ: ತಿರುಪತಿಯಲ್ಲಿ ಇಬ್ಬರ ಬಂಧನ

ನೇಪಾಳದಲ್ಲಿ ಮತ್ತೆ ಭುಗಿಲೆದ್ದ Gen- Z​​ ಹಿಂಸಾಚಾರ, ಕರ್ಫ್ಯೂ ಜಾರಿ; ಪ್ರಚೋದನೆ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

Delhi Blast: ವೈದ್ಯನಾದರೂ ತಲೆ ತುಂಬ 'ಇಸ್ಲಾಮ್ ಮೂಲಭೂತವಾದ' ತುಂಬಿಕೊಂಡಿದ್ದ ಬಾಂಬರ್! ರೋಗಿಗಳಿಗೆ ಏನು ಹೇಳ್ತಿದ್ದ ಗೊತ್ತಾ?

Delhi Blast: ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಪರಿಶೀಲನೆ, 200 ವೈದ್ಯರು, ಸಿಬ್ಬಂದಿಗಳ ವಿಚಾರಣೆ

SCROLL FOR NEXT