ಸಾಂದರ್ಭಿಕ ಚಿತ್ರ 
ರಾಜ್ಯ

ಕಲಬುರಗಿ: ಪ್ರೀತಿ ವಿಚಾರಕ್ಕೆ 10ನೇ ತರಗತಿಯ ಹುಡುಗ-ಹುಡುಗಿ ಆತ್ಮಹತ್ಯೆ!

ಹಿಂದುಳಿದ ವರ್ಗಕ್ಕೆ ಸೇರಿದ ಬಾಲಕ ಮತ್ತು ಅಲ್ಪಸಂಖ್ಯಾತ ಸಮುದಾಯದ ಬಾಲಕಿಯ ಮೃತದೇಹಗಳು ಮಲ್ಲಿ-ಐನಾಪುರ ರಸ್ತೆಯ ಹೊಲದಲ್ಲಿ ಒಂದೇ ಹಗ್ಗದಿಂದ ಮರಕ್ಕೆ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಕಲಬುರಗಿ: ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿಯ ಹದಿಹರೆಯದ ಬಾಲಕ ಮತ್ತು ಬಾಲಕಿ ಶನಿವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಿಂದುಳಿದ ವರ್ಗಕ್ಕೆ ಸೇರಿದ ಬಾಲಕ ಮತ್ತು ಅಲ್ಪಸಂಖ್ಯಾತ ಸಮುದಾಯದ ಬಾಲಕಿಯ ಮೃತದೇಹಗಳು ಮಲ್ಲಿ-ಐನಾಪುರ ರಸ್ತೆಯ ಹೊಲದಲ್ಲಿ ಒಂದೇ ಹಗ್ಗದಿಂದ ಮರಕ್ಕೆ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಬಾಲಕ ನಾಗರಹಳ್ಳಿ ಗ್ರಾಮದವನಾಗಿದ್ದರೆ, ಹುಡುಗಿ ಮಲ್ಲಿ ಗ್ರಾಮದವಳಾಗಿದ್ದು, ಇಬ್ಬರೂ 16 ವರ್ಷದವರಾಗಿದ್ದಾರೆ.

ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಅವರ ಕುಟುಂಬಗಳಿಗೆ ತಮ್ಮ ಪ್ರೀತಿ ವಿಚಾರ ತಿಳಿಸಿರಲಿಲ್ಲ. ಶುಕ್ರವಾರ ರಾತ್ರಿ ಹುಡುಗಿ ಮನೆಯಲ್ಲಿ ಮಲಗಿದ್ದಳು. ಆದರೆ ಶನಿವಾರ ಬೆಳಗ್ಗೆ ನೋಡಿದರೆ ಮನೆಯಲ್ಲಿ ಇರಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಯಲು ಶೌಚಕ್ಕೆ ಹೋಗಿದ್ದಾಳೆಂದು ಬಾಲಕಿ ಕುಟುಂಬ ಸದಸ್ಯರು ಭಾವಿಸಿದ್ದರು. ಆದರೆ ನಂತರ, ಹುಡುಗಿ ಮತ್ತು ಹುಡುಗ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಯಾರೋ ಅವರಿಗೆ ಮಾಹಿತಿ ನೀಡಿದರು. ಇಬ್ಬರ ಕುಟುಂಬ ಸದಸ್ಯರು ಸ್ಥಳಕ್ಕೆ ಬಂದು ಶವಗಳನ್ನು ತೆಗೆದುಕೊಂಡು ಅಂತಿಮ ವಿಧಿವಿಧಾನ ನೆರವೇರಿಸಿದರು.

ಅಂತ್ಯಕ್ರಿಯೆಯ ನಂತರವೇ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ಬಂದಿದ್ದು, ಎರಡೂ ಕುಟುಂಬಗಳು ಘಟನೆಯ ಬಗ್ಗೆ ಯಾರನ್ನೂ ಅನುಮಾನಿಸುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಹುಡುಗಿಯ ಕುಟುಂಬ ಆಕೆಗೆ ಮದುವೆ ಮಾಡಲು ಯೋಜಿಸುತ್ತಿತ್ತು. ಇದರಿಂದ ಬೇಸತ್ತು ಬಾಲಕಿ ತನ್ನ ಗೆಳೆಯನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ