ರಾಜ್ಯ

'ನನ್ನ ಕೊನೆ ಉಸಿರು ಇರೋವರೆಗೂ ದರ್ಶನ್ ನನ್ನ ಮಗ': ಸುಮಲತಾ

ದರ್ಶನ್ ನಡೆ ಮತ್ತು ಇಂದು ಸುಮಲತಾ ಅವರು ಮಾರ್ಮಿಕವಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು ವದಂತಿಗೆ ಪುಷ್ಠಿ ನೀಡಿದವು. ಅದಕ್ಕೀಗ ಸುಮಲತಾ ಅವರೇ ಸ್ಪಷ್ಟನೆ ನೀಡಿದ್ದಾರೆ.

ಡೆವಿಲ್ ಶೂಟಿಂಗ್ ಆರಂಭಿಸಿರುವ ನಟ ದರ್ಶನ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಎಲ್ಲರನ್ನೂ ಅನ್​ಫಾಲೋ ಮಾಡಿ ಅಚ್ಚರಿ ಮೂಡಿಸಿದ್ದರು. ಮದರ್ ಇಂಡಿಯಾ ಎಂದು ಬಾಯ್ತುಂಬ ಕರೆಯುತ್ತಿದ್ದ ಮಾಜಿ ಸಂಸದೆ ಹಿರಿಯ ನಟಿ ಸುಮಲತಾ ಅವರನ್ನು ಅನ್ ಫಾಲೋ ಮಾಡಿದ್ದು ಇಬ್ಬರ ಮಧ್ಯೆ ಸಂಬಂಧ ಹಳಸಿದೆ ಎಂಬ ಊಹಾಪೋಹಗಳು ಕೇಳಿಬಂತು.

ದರ್ಶನ್ ನಡೆ ಮತ್ತು ಇಂದು ಸುಮಲತಾ ಅವರು ಮಾರ್ಮಿಕವಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು ವದಂತಿಗೆ ಪುಷ್ಠಿ ನೀಡಿದವು. ಅದಕ್ಕೀಗ ಸುಮಲತಾ ಅವರೇ ಸ್ಪಷ್ಟನೆ ನೀಡಿದ್ದಾರೆ. ‘ಕೊನೆ ಉಸಿರು ಇರೋವರೆಗೂ ದರ್ಶನ್ ನನ್ನ ಮಗ’ ಎಂದಿದ್ದಾರೆ.

ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ

ದರ್ಶನ್ ಅವರು ನನ್ನನ್ನು ಮಾತ್ರವಲ್ಲ ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ. ಇದನ್ನು ಗಮನಿಸಬೇಕು. ಸೋಷಿಯಲ್ ಮೀಡಿಯಾದಲ್ಲಿ ಅನ್​ಫಾಲೋ ಮಾಡಿದರೆ ಸಂಬಂಧ ಹಾಳಾಗುತ್ತದೆಯೇ? ಈ ವಿಚಾರವನ್ನು ಕೇಳಿ ನಗಬೇಕಾ, ಬೇಸರಗೊಳ್ಳಬೇಕಾ ಗೊತ್ತಾಗುತ್ತಿಲ್ಲ, ನಾನು ಸೋಷಿಯಲ್ ಮೀಡಿಯಾ ಸಂಬಂಧಕ್ಕೆ ಅಷ್ಟೊಂದು ಬೆಲೆ, ಮಹತ್ವ ಕೊಡುವವಳಲ್ಲ, ಅಷ್ಟೊಂದು ಸಮಯ ಕೂಡ ನನ್ನಲ್ಲಿಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಬಂದ ಮೇಲಷ್ಟೆ ನನಗೆ ಗೊತ್ತಾಯ್ತು ಎಂದರು.

‘ನನ್ನ ಕೊನೆಯ ಉಸಿರು ಇರುವವರೆಗೂ ದರ್ಶನ್​ ನನ್ನ ಮಗನೇ. ದರ್ಶನ್​ನ ಗುರಿಯಾಗಿಸಿಕೊಂಡು ನಾನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿಲ್ಲ. ನನ್ನ ಪೋಸ್ಟ್ ಗಳಿಗೂ ಕುಟುಂಬ ಸದಸ್ಯರಿಗೂ, ಆಪ್ತರ ಮಧ್ಯೆ ಯಾವುದೇ ಸಂಬಂಧಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT