ಬೆಂಗಳೂರು ಮಳೆ- ಮಗು ಸಾವು online desk
ರಾಜ್ಯ

Bengaluru rains: ಮಳೆಗೆ ಬೈಕ್ ಮೇಲೆ ಮರ ಬಿದ್ದು 3 ವರ್ಷದ ಮಗು ಸಾವು!

ಸಂಜೆ ಸುರಿದ ಮಳೆಗೆ ಮರ ಮುರಿದು ಬೈಕ್ ಮೇಲೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಜೀವನಹಳ್ಳಿಯ ಪೂರ್ವ ಪಾರ್ಕ್ ಬಳಿ ವರದಿಯಾಗಿದೆ.

ಬೆಂಗಳೂರು: ನಗರದಲ್ಲಿ ಸಂಜೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಾಲು ಸಾಲು ಅನಾಹುತಗಳು, ಅವಘಡಗಳು ಸಂಭವಿಸುತ್ತಿವೆ.

ಸಂಜೆ ಸುರಿದ ಮಳೆಗೆ ಮರ ಮುರಿದು ಬೈಕ್ ಮೇಲೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಜೀವನಹಳ್ಳಿಯ ಪೂರ್ವ ಪಾರ್ಕ್ ಬಳಿ ವರದಿಯಾಗಿದೆ.

ರಕ್ಷಾ ಮೃತಪಟ್ಟಿರುವ ಮಗುವಾಗಿದ್ದು, ತಂದೆಯ ಜೊತೆ ಮಗು ಬೈಕ್‍ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮರ ಬಿದ್ದು ಮಗುವಿಗೆ ಗಂಭೀರ ಗಾಯವಾಗಿತ್ತು. ತಕ್ಷಣ ಮಗುವನ್ನು ಫೋಷಕರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರು. ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.

ಪುಲಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ನಗರದ ಹಲವೆಡೆ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.

ಯಲಹಂಕದ ಪ್ರದೇಶಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ಮೋರಿಗಳಲ್ಲಿ ನೀರು ಹರಿಯದೇ ರಸ್ತೆಯಲ್ಲಿ ನಿಂತ ನೀರು ಜನರು ಪರದಾಡುವಂತಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Tri Series Final: ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ; ಶ್ರೀಲಂಕಾ ಹುಟ್ಟಡಗಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ!

ಕಾಂಗ್ರೆಸ್ ಸಮಾವೇಶದಿಂದ ಟ್ರಾಫಿಕ್ ಜಾಮ್ ? : NEET ಪರೀಕ್ಷೆಗೆ ತಡವಾಗಿ ಬಂದರೆಂದು ಪ್ರವೇಶ ನಿರಾಕರಣೆ, ಕಣ್ಣೀರು ಹಾಕಿದ ವಿದ್ಯಾರ್ಥಿಗಳು-Video

ತಮಿಳುನಾಡು ಸಮುದ್ರಾಹಾರ ರಫ್ತು ಘಟಕದಲ್ಲಿ ಅನಿಲ ಸೋರಿಕೆ: ಇಬ್ಬರು ಸಾವು, 46 ಮಂದಿ ಆಸ್ಪತ್ರೆಗೆ ದಾಖಲು

ಅಡ್ಡ ಮತದಾನ: ಯಾವುದೇ ಒಂದು ಘಟನೆಯಿಂದ ನಾಯಕತ್ವ ಕೊರತೆ ಎನ್ನುವುದು ತಪ್ಪು- ಪ್ರಲ್ಹಾದ್ ಜೋಶಿ

ಅಡ್ಡಮತದಾನ ಮಾಡಿದವರಿಗೆ ಈ ಜನ್ಮದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುತ್ತೇನೆ: ಆರ್. ಅಶೋಕ್ ಆಕ್ರೋಶ