ಸಾಂದರ್ಭಿಕ ಚಿತ್ರ  
ರಾಜ್ಯ

2024 ಸಮೀಕ್ಷೆ: ಕರ್ನಾಟಕದ 5 ಅಭಯಾರಣ್ಯಗಳಲ್ಲಿರುವ ಹುಲಿಗಳ ಸಂಖ್ಯೆ 393

ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು: ಕರ್ನಾಟಕದ ಐದು ಹುಲಿ ಅಭಯಾರಣ್ಯಗಳಲ್ಲಿ ಹುಲಿಗಳ ಅಂದಾಜು ಸಂಖ್ಯೆ 393 ಆಗಿದೆ, ಕಳೆದ ವರ್ಷ ರಾಜ್ಯ ಸರ್ಕಾರ ನಡೆಸಿದ ನಾಲ್ಕನೇ ಹಂತದ ಮೇಲ್ವಿಚಾರಣಾ ಸಮೀಕ್ಷೆಯಿಂದ ಇದು ತಿಳಿದುಬಂದಿದೆ.

ದೇಶದ ಹುಲಿ ಅಭಯಾರಣ್ಯದಲ್ಲಿ ನಡೆಸಲಾದ ವಾರ್ಷಿಕ ಮೇಲ್ವಿಚಾರಣಾ ಸಮೀಕ್ಷೆಯ ಭಾಗವಾಗಿ 2023ರ ನವೆಂಬರ್ ಮತ್ತು ಫೆಬ್ರವರಿ 2024ರ ಮಧ್ಯೆ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ(BRT) ಮತ್ತು ಕಾಳಿ(ದಾಂಡೇಲಿ-ಅಂಶಿ) ಅಭಯಾರಣ್ಯದಲ್ಲಿ ಸಮೀಕ್ಷೆ ನಡೆಸಲಾಯಿತು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(NTCA) ಪ್ರಕಾರ, ನಾಲ್ಕನೇ ಹಂತದ ಸಮೀಕ್ಷೆಯನ್ನು ಪ್ರತಿವರ್ಷ ಎಲ್ಲಾ ಹುಲಿ ಅಭಯಾರಣ್ಯದಲ್ಲಿ ನಡೆಸಲಾಗುತ್ತದೆ. ಸಮೀಕ್ಷೆ ನಂತರ, ಅರಣ್ಯ ಇಲಾಖೆ ಅದರ ಕರ್ನಾಟಕ ವನ್ಯಜೀವಿ ತಾಂತ್ರಿಕ ಕೋಶ ಮೂಲಕ ಹುಲಿಗಳ ಸಂತತಿ ಮತ್ತು ಇತರ ಸಸ್ತನಿಗಳ ಬಗ್ಗೆ 2024ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿತು.

ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ವರದಿಯನ್ನು ಬಿಡುಗಡೆ ಮಾಡಿದ್ದಾರೆ. 2,160 ಕ್ಯಾಮರಾ ಪತ್ತೆ ಹಚ್ಚುವಿಕೆ ಸ್ಥಳಗಳನ್ನು ಹುಲಿ ಅಭಯಾರಣ್ಯಗಳಲ್ಲಿ ನಿಯೋಜಿಸಲಾಗಿದ್ದು, ಸರಿಸುಮಾರು 6.1 ಮಿಲಿಯನ್ ಚಿತ್ರಗಳನ್ನು ಸೆರೆಹಿಡಿದಿವೆ.

ಎಐ ಆಧಾರಿತ ಸಾಫ್ಟ್ ವೇರ್ ಮೂಲಕ ಹುಲಿಗಳ ಚಿತ್ರಗಳನ್ನು ಪ್ರತ್ಯೇಕಿಸಿ ಪರಿಷ್ಕರಿಸಲಾಗಿದೆ. ಕರ್ನಾಟಕದಲ್ಲಿ 2024ರಲ್ಲಿ ಸುಮಾರು 393 ಹುಲಿಗಳನ್ನು ಅಂದಾಜಿಸಲಾಗಿದೆ. ಹುಲಿ ಅಭಯಾರಣ್ಯಗಳಿಂದ ಇತರ ನಿವಾಸ ಸ್ಥಳಗಳಿಗೆ ಚಲಿಸುವ ಚಲನವಲನಗಳನ್ನು ಸಹ ನಿಗಾವಹಿಸಲಾಗುತ್ತದೆ. ಮುಂಬರುವ ಅಖಿಲ ಭಾರತ ಹುಲಿ ಅಂದಾಜು ವರದಿ-(AITE)2026 ರಿಂದ ಕರ್ನಾಟಕದಲ್ಲಿರುವ ಹುಲಿಗಳ ನಿಖರ ಸಂಖ್ಯೆ ದೊರಕಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT