ಮೃತಪಟ್ಟ ಕಾರ್ತಿಕ್ 
ರಾಜ್ಯ

10 ಸಾವಿರ ರೂ ಹಣಕ್ಕಾಗಿ ಜೀವ ಕಳೆದುಕೊಂಡ 21 ವರ್ಷದ ಯುವಕ; ನೀರು ಬೆರೆಸದೆ 5 ಬಾಟಲಿ ಮದ್ಯ ಕುಡಿದು ಸಾವು

ಕಾರ್ತಿಕ್ ಐದು ಬಾಟಲಿ ಮದ್ಯವನ್ನು ಸೇವಿದ್ದಾನೆ. ಬಳಿಕ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಕೋಲಾರ ಜಿಲ್ಲೆಯ ಮುಳಬಾಗಿಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಆತ ಸಾವಿಗೀಡಾಗಿದ್ದಾನೆ.

ಬೆಂಗಳೂರು: ತನ್ನ ಸ್ನೇಹಿತರೊಂದಿಗೆ 10,000 ರೂ. ಬೆಟ್‌ ಕಟ್ಟಿ ಐದು ಬಾಟಲಿ ಕಚ್ಚಾ ಮದ್ಯ ಕುಡಿದು 21 ವರ್ಷದ ಯುವಕ ಸಾವಿಗೀಡಾಗಿರುವ ಘಟನೆ ನಡೆದಿದೆ.

ಮದ್ಯದೊಂದಿಗೆ ನೀರನ್ನು ಸೇರಿಸದೆಯೇ ಐದು ಬಾಟಲ್ ಕುಡಿಯುವುದಾಗಿ ಕಾರ್ತಿಕ್ ತನ್ನ ಸ್ನೇಹಿತರಾದ ವೆಂಕಟ ರೆಡ್ಡಿ, ಸುಬ್ರಮಣಿ ಮತ್ತು ಇತರ ಮೂವರಿಗೆ ಹೇಳಿದ್ದಾನೆ. ಒಂದು ವೇಳೆ ಕಾರ್ತಿಕ್‌ ನೀರನ್ನು ಮಿಶ್ರಣ ಮಾಡದೆಯೇ ಮದ್ಯ ಸೇವಿಸಿದರೆ 10,000 ರೂ. ನೀಡುವುದಾಗಿ ವೆಂಕಟ ರೆಡ್ಡಿ ಹೇಳಿದ್ದಾನೆ.

ಅದಾದ ಬಳಿಕ ಕಾರ್ತಿಕ್ ಐದು ಬಾಟಲಿ ಮದ್ಯವನ್ನು ಸೇವಿದ್ದಾನೆ. ಬಳಿಕ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಕೋಲಾರ ಜಿಲ್ಲೆಯ ಮುಳಬಾಗಿಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಆತ ಸಾವಿಗೀಡಾಗಿದ್ದಾನೆ. ಕಾರ್ತಿಕ್ ಮದುವೆಯಾಗಿ ಒಂದು ವರ್ಷವಾಗಿತ್ತು ಮತ್ತು ಅವರ ಪತ್ನಿ ಎಂಟು ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು.

ವೆಂಕಟ ರೆಡ್ಡಿ ಮತ್ತು ಸುಬ್ರಮಣಿ ಸೇರಿದಂತೆ ಆರು ಜನರ ವಿರುದ್ಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದ್ದು, ಪೊಲೀಸರು ಇತರ ಆರೋಪಿಗಳಿಗಾಗಿ ಶೋಧಕಾರ್ಯ ಕೈಗೊಂಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಸುಮಾರು 2.6 ಮಿಲಿಯನ್ ಜನರು ಮದ್ಯ ಸೇವನೆಯಿಂದ ಸಾಯುತ್ತಾರೆ. ಇದು ಜಾಗತಿಕ ಸಾವುಗಳಲ್ಲಿ ಶೇ 4.7 ರಷ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾತ್ರಿಯಿಡೀ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ ಭದ್ರತಾ ಮುಖ್ಯಸ್ಥ ಲಾರಿಜಾನಿ ಹತ್ಯೆ

'ಅನಾಗರಿಕ, ಹೇಡಿತನದ ಕೃತ್ಯ': ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ದಾಳಿ ಖಂಡಿಸಿದ ಭಾರತ

'ನನಗೆ ನಯನಾತಾರಾ ಬೇಕು! ಈ ಕನಸು ನನಸು ಮಾಡುವಿರಾ? ವಿವಾದ ಮೈ ಮೇಲೆ ಎಳೆದುಕೊಂಡ AIADMK ನಾಯಕ!

Iris Dena ನಾವಿಕರ ಹತ್ಯೆ: ಡೆಡ್ಲಿ ಪ್ರತೀಕಾರಕ್ಕಾಗಿ ಕಾಯುತ್ತಿದ್ದೇವೆ, ಯಾವಾಗ, ಏನು ಎಂಬ ಗುಟ್ಟು ಬಿಟ್ಟುಕೊಡದ ಇರಾನ್!

'The Kerala Story 2': ಮುಸ್ಲಿಂರ ಬಹಿಷ್ಕಾರಕ್ಕೆ ಹಿಂದೂಗಳ ಪ್ರತಿಜ್ಞೆ! ಕಾಂಗ್ರೆಸ್ ಸಂಸದ ನಾಸಿರ್ ಹುಸೇನ್ ಕಿಡಿ

SCROLL FOR NEXT