ಸಿದ್ದರಾಮಯ್ಯ  
ರಾಜ್ಯ

ಫಾಜಿಲ್ ಕುಟುಂಬಕ್ಕೆ ನೀಡಿರುವ ಪರಿಹಾರಕ್ಕೂ, ಸುಹಾಸ್ ಶೆಟ್ಟಿ ಹತ್ಯೆಗೂ ಸಂಬಂಧವಿಲ್ಲ: ಸಿದ್ದರಾಮಯ್ಯ

2022ರಲ್ಲಿ, ದುಷ್ಕರ್ಮಿಗಳ ಗುಂಪೊಂದು ಸುರತ್ಕಲ್‌ನಲ್ಲಿ ಫಾಜಿಲ್ ಅವರನ್ನು ಕೊಲೆ ಮಾಡಿತ್ತು. ಈ ಕೊಲೆ ಪ್ರಕರಣದಲ್ಲಿ ರೌಡಿ ಶೀಟರ್ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ.

ಹಾವೇರಿ: ಮೊಹಮ್ಮದ್ ಫಾಜಿಲ್ ಅವರ ಕುಟುಂಬಕ್ಕೆ ನೀಡಲಾದ ಪರಿಹಾರವನ್ನು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾಗಿರುವ ಹಂತಕರನ್ನು ನೇಮಿಸಿಕೊಳ್ಳಲು ಬಳಸಲಾಗಿದೆ ಎಂಬ ವರದಿಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.

ಹೆಚ್ಚಿನ ಮಾಹಿತಿ ಪಡೆಯಲು ಗೃಹ ಸಚಿವ ಪರಮೇಶ್ವರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸುವುದಾಗಿ ಹೇಳಿದರು.

2022ರಲ್ಲಿ, ದುಷ್ಕರ್ಮಿಗಳ ಗುಂಪೊಂದು ಸುರತ್ಕಲ್‌ನಲ್ಲಿ ಫಾಜಿಲ್ ಅವರನ್ನು ಕೊಲೆ ಮಾಡಿತ್ತು. ಈ ಕೊಲೆ ಪ್ರಕರಣದಲ್ಲಿ ರೌಡಿ ಶೀಟರ್ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ.

ಇಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, 'ನಾನು ಅದರ ಬಗ್ಗೆ ಪರಿಶೀಲಿಸಬೇಕು. ನನಗೆ ಯಾವುದೇ ಮಾಹಿತಿ ಇಲ್ಲ. ನಿನ್ನೆ ದಿನೇಶ್ ಗುಂಡೂರಾವ್ ಮತ್ತು ಗೃಹ ಸಚಿವ (ಜಿ ಪರಮೇಶ್ವರ) ಅಲ್ಲಿಗೆ ಹೋಗಿದ್ದರು. ನಾನು ಇನ್ನೂ ಅವರೊಂದಿಗೆ ಮಾತನಾಡಿಲ್ಲ. ಅವರೊಂದಿಗೆ ಮಾತನಾಡಿದ ನಂತರ ಹೇಳುತ್ತೇನೆ' ಎಂದು ಹೇಳಿದರು

2022 ರಲ್ಲಿ ಫಾಜಿಲ್ ಹತ್ಯೆಯ ನಂತರ ರಾಜ್ಯ ಸರ್ಕಾರವು ಅವರ ಕುಟುಂಬಕ್ಕೆ ನೀಡಿದ 25 ಲಕ್ಷ ರೂ. ಪರಿಹಾರದಲ್ಲಿ ಐದು ಲಕ್ಷ ರೂ.ಗಳನ್ನು ಸುಹಾಸ್ ಶೆಟ್ಟಿಯನ್ನು ಕೊಲ್ಲಲು ಹಂತಕರಿಗೆ ನೀಡಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.

ಶುಕ್ರವಾರ, ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಫಾಜಿಲ್ ಅವರ ಸಹೋದರ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ.

ಕೋಮು ಸಮಸ್ಯೆಗಳನ್ನು ನಿಭಾಯಿಸಲು ಕಾರ್ಯಪಡೆ ರಚನೆಯ ಬಗ್ಗೆ ಕೇಳಿದಾಗ, ಸಮಾಜ ವಿರೋಧಿ ಶಕ್ತಿಗಳನ್ನು ಗುರುತಿಸಲು ಮತ್ತು ನಿಗ್ರಹಿಸಲು ಪೊಲೀಸ್ ವಿಭಾಗದ ಅಗತ್ಯವಿದೆ ಎಂದು ಪರಮೇಶ್ವರ ಹೇಳಿದ್ದಾರೆ. ನಾನು ಅದರ ಬಗ್ಗೆ ಗೃಹ ಸಚಿವರೊಂದಿಗೆ ಮಾತನಾಡುತ್ತೇನೆ ಮತ್ತು ನಂತರ ನಿಮಗೆ ತಿಳಿಸುತ್ತೇನೆ' ಎಂದು ಅವರು ಹೇಳಿದರು.

ಜಾತಿ ಗಣತಿ ನಡೆಸುವ ಕೇಂದ್ರದ ನಿರ್ಧಾರಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಯಕರು ಜಾತಿ ಗಣತಿ ನಡೆಸಿದ್ದಕ್ಕಾಗಿ ತಮ್ಮನ್ನು ಟೀಕಿಸಿದರು. ಆಗ ವಿರೋಧಿಸಿದವರು ಈಗ ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳುತ್ತಿದ್ದಾರೆ. ಪರಸ್ಪರ ಜಾತಿಗಳನ್ನು ಎತ್ತಿಕಟ್ಟುತ್ತಿದ್ದಾರೆ. ಅವರು ಜಾತಿ ಗಣತಿಯನ್ನು ವಿರೋಧಿಸಿದ್ದು ರಾಜಕೀಯ ಕಾರಣಗಳಿಗಾಗಿಯೇ ಹೊರತು ವಾಸ್ತವಿಕ ಕಾರಣಗಳಿಗಾಗಿ ಅಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ 'ದ್ವಿಮುಖ ನೀತಿ' ಅನುಸರಿಸುತ್ತಿದೆ ಎಂಬ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಆರೋಪದ ಬಗ್ಗೆ ಕೇಳಿದಾಗ, ಬಿಜೆಪಿ ಸೇರುವ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಗೌಡರು ಏನು ಹೇಳಿದ್ದರು ಮತ್ತು ಅವರು ಈಗ ಏನು ಹೇಳುತ್ತಿದ್ದಾರೆ. ಯಾರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದರೆ ಅದು ದೇವೇಗೌಡರು ಮಾತ್ರ' ಎಂದು ಅವರು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಏಷ್ಯಾ ಸಂಘರ್ಷ: ಭಾರತ ಸೇರಿ 5 ದೇಶಗಳಿಗೆ Hormuz ಮೂಲಕ ಸುರಕ್ಷಿತ ಸಂಚಾರಕ್ಕೆ Iran ಅನುಮತಿ!

Hormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ: ಹೌತಿಗಳು ಬರ್ತಾರೆ ಎಂದು Iran ಎಚ್ಚರಿಕೆ

ಇರಾನಿಯನ್ನರು ಸಾಯುತ್ತಿದ್ದಾಗ ನೀವೆಲ್ಲಿದ್ರಿ..: 'ಶಾಂತಿ-ಸಂಧಾನ' ವ್ಯಂಗ್ಯ ಮಾಡಿದ ನಟ Boman Irani ಚಳಿಬಿಡಿಸಿದ ನಟಿ Mandana Karimi!

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಉಗ್ರರೊಂದಿಗೆ ನಂಟು ಆರೋಪ: ಬಳ್ಳಾರಿ ಯುವಕ ಸೇರಿ ದೇಶಾದ್ಯಂತ 12 ಮಂದಿ ಬಂಧನ

SCROLL FOR NEXT