ಶೌಚಾಲಯ ಶುಲ್ಕದ ವಿರುದ್ಧ ಪ್ರತಿಭಟನೆ (Photo | Express)
ರಾಜ್ಯ

ಬೆಂಗಳೂರು ಮೆಟ್ರೋ ಯೂಟರ್ನ್: ಶೌಚಾಲಯ ಬಳಕೆಗೂ ಶುಲ್ಕ ನಿರ್ಧಾರ ವಾಪಸ್

ನಗರದ 12 ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯಗಳ ಬಳಕೆಗೆ ಶುಲ್ಕ ವಿಧಿಸಿತ್ತು. ಇದಕ್ಕಾಗಿ ಲಾಭ ರಹಿತ ಸಂಘಟನೆಯಾದ ಸುಲಭ್‌ ಇಂಟರ್‌ನ್ಯಾಶನಲ್ ಜತೆ ಒಪ್ಪಂದ ಮಾಡಿಕೊಂಡಿತ್ತು.

ಬೆಂಗಳೂರು: ಪ್ರಯಾಣಿಕರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(ಬಿಎಂಆರ್ ಸಿಎಲ್) ಮೆಟ್ರೋ ನಿಲ್ದಾಣಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ಬಳಕೆಗೆ ವಿಧಿಸಿದ್ದ ಶುಲ್ಕವವನ್ನು ರದ್ದುಗೊಳಿಸಿದೆ.

ಮೆಟ್ರೋ ನಿಲ್ದಾಣಗಳಲ್ಲಿನ ಶೌಚಾಲಯಗಳನ್ನು ಬಳಸುವುದಕ್ಕೆ ಶುಲ್ಕವನ್ನು ಸಂಗ್ರಹಿಸಲಾಗುವುದಿಲ್ಲ. ಈ ಶೌಚಾಲಯಗಳು ಸಾರ್ವಜನಿಕ ಬಳಕೆಗೆ ಉಚಿತವಾಗಿ ಮುಕ್ತವಾಗಿರಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರದ 12 ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯಗಳ ಬಳಕೆಗೆ ಶುಲ್ಕ ವಿಧಿಸಿತ್ತು. ಇದಕ್ಕಾಗಿ ಲಾಭ ರಹಿತ ಸಂಘಟನೆಯಾದ ಸುಲಭ್‌ ಇಂಟರ್‌ನ್ಯಾಶನಲ್ ಜತೆ ಒಪ್ಪಂದ ಮಾಡಿಕೊಂಡಿತ್ತು.

ಇದಕ್ಕೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವ ಬಿಎಂಆರ್ ಸಿಎಲ್ ಸುಲಭ್‌ ಇಂಟರ್‌ನ್ಯಾಶನಲ್ ಜೊತೆಗಿನ ಒಪ್ಪಂದವನ್ನು ರದ್ದುಪಡಿಸಿದೆ.

ಕರ್ನಾಟಕದ ಸುಲಭ್ ಇಂಟರ್ನ್ಯಾಷನಲ್'ನ ನಿಯಂತ್ರಕ ಎಂ. ವಿಶ್ವನಾಥ್ ಅವರು ಮಾತನಾಡಿ, ಬಿಎಂಆರ್ಸಿಎಲ್ ಶೌಚಾಲಯಗಳ ಬಳಕೆಯ ಶುಲ್ಕವನ್ನು ಸಂಗ್ರಹಿಸುವುದಿಲ್ಲ ಎಂದು ಘೋಷಿಸಿದ್ದು, ಹೀಗಾಗಿ ನಾವು 12 ಮೆಟ್ರೋ ನಿಲ್ದಾಣಗಳಿಂದ ನಮ್ಮ ಕಾರ್ಮಿಕರನ್ನು ಹಿಂತೆಗೆದುಕೊಂಡಿದ್ದೇವೆಂದು ಹೇಳಿದರು.

ಬಿಎಂಆರ್ ಸಿಎಲ್ ನಡೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ವಕೀಲ ಟಿ. ನರಸಿಂಹ ಮೂರ್ತಿ ಅವರು ಮಾತನಾಡಿ, ಬಿಎಂಆರ್ಸಿಎಲ್ ಅಧಿಕಾರಿಗಳ ಈ ನಿರ್ಧಾರ ಸಂತಸ ತಂದಿದೆ. ಭವಿಷ್ಯದಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳುವುದ್ಕಕೂ ಮುನ್ನ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಬೇಕೆಂದು ಹೇಳಿದ್ದಾರೆ.

ಶೌಚಾಲಯಗಳು ಮತ್ತು ಕುಡಿಯುವ ನೀರು ಪ್ರೀಮಿಯಂ ಸೇವೆಗಳಲ್ಲ, ಮೂಲಭೂತ ಅವಶ್ಯಕತೆಗಳಾಗಿವೆ. ಈಗಾಗಲೇ ನಮ್ಮ ಮೆಟ್ರೋ ಟಿಕೆಟ್ ದರಗಳನ್ನು ಶೇ.71ರಷ್ಟು ಹೆಚ್ಚಳ ಮಾಡಿದ್ದು, ಇದರ ಬೆನ್ನಲ್ಲೇ ಶೌಚಾಲಯ ಬಳಕೆಗೂ ಶುಲ್ಕ ವಿಧಿಸುವುದು ಹೆಚ್ಚುವರಿ ಹೊರೆಯಾಗುತ್ತಿತ್ತು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video