ಎಂಇಎಸ್ ಮುಖಂಡನ ಜೊತೆ ಸಿಪಿಐ ಸೆಲ್ಫಿ 
ರಾಜ್ಯ

ಬೆಳಗಾವಿ: ರಾಜ್ಯೋತ್ಸವದಂದು ಕರಾಳದಿನ ಆಚರಣೆ; MES ಮುಖಂಡನ ಜೊತೆ CPI ಸೆಲ್ಫಿ; ಕನ್ನಡಿಗರ ಆಕ್ರೋಶ!

ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಸಡಗರ ಸಂಭ್ರಮ ಮನೆ ಮಾಡಿದ್ದರೆ, ಮತ್ತೊಂದೆಡೆ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಪುಂಡರು ನಿಷೇಧದ ನಡುವೆಯೂ ಕರಾಳದಿನ ಆಚರಿಸಿದರು.

ಬೆಳಗಾವಿ: ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಸಡಗರ ಸಂಭ್ರಮ ಮನೆ ಮಾಡಿದ್ದರೆ, ಮತ್ತೊಂದೆಡೆ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಪುಂಡರು ನಿಷೇಧದ ನಡುವೆಯೂ ಕರಾಳದಿನ ಆಚರಿಸಿದರು. ಕರಾಳದಿನ ಆಚರಿಸಲು ಎಂಇಎಸ್ ಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ನಿಷೇಧದ ನಡುವೆಯೂ ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಎಂಇಎಸ್ ಪುಂಡರು ಕರಾಳದಿನ ಆಚರಣೆ ಮಾಡಿದ್ದಲ್ಲದೇ ಮೆರವಣಿಗೆ ನಡೆಸಿದ್ದಾರೆ. ಈ ಮೆರವಣಿಗೆಗೆ ಬೆಳಗಾವಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಈ ವೇಳೆ ಎಂಇಎಸ್ ಮುಖಂಡ ಶುಭಂ ಸೇಳಕೆ ಜೊತೆಗೆ ನಿಂತು ಬೆಳಗಾವಿಯ ಮಾಳಮಾರುತಿ ಠಾಣೆ ಸಿಪಿಐ ಜೆ.ಎಂ ಕಾಲೆಮಿರ್ಚೆ ತಮ್ಮ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯ ಈ ನಡೆ ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಿಟನ್ ರೈಲಿನಲ್ಲಿ ದುಷ್ಕರ್ಮಿಗಳಿಂದ ಸಾಮೂಹಿಕ ಇರಿತ: 9 ಜನರ ಸ್ಥಿತಿ ಗಂಭೀರ, ಇಬ್ಬರು ಶಂಕಿತರ ಬಂಧನ

ನಾಯಕತ್ವ ಬದಲಾವಣೆ ಬಗ್ಗೆ ನಾನು, ಸಿಎಂ ಹೇಳಿದರಷ್ಟೇ ಬೆಲೆ: ಡಿಕೆ.ಶಿವಕುಮಾರ್

ಇನ್ನು ಸಿಎಂ, ಸಚಿವರ ಭೇಟಿಯಾಗುವುದು ಸುಲಭ...! ಹೇಗಂತೀರಾ ಇಲ್ಲಿದೆ ಮಾಹಿತಿ...

ಜನ ಸುರಾಜ್‌ ಪಕ್ಷದ ಬೆಂಬಲಿಗನ ಹತ್ಯೆ ಪ್ರಕರಣ: ಜೆಡಿಯು ಅಭ್ಯರ್ಥಿ ಅನಂತ್‌ ಸಿಂಗ್‌ ಬಂಧನ

ನಮ್ಮ ಈ ಜನ್ಮದ 'ದಾಂಪತ್ಯ' ಪೂರ್ವ ಜನ್ಮದ ಪಾಪ-ಪುಣ್ಯವೇ? ಜಾತಕದಲ್ಲಿ ಇದರ ಬಗ್ಗೆ ತಿಳಿಯುವುದು ಹೇಗೆ; ಇಲ್ಲಿದೆ ಮಾಹಿತಿ...

SCROLL FOR NEXT