ಸಿದ್ದರಾಮಯ್ಯ 
ರಾಜ್ಯ

ಮೈಸೂರಿನ ಅರಣ್ಯ ಪ್ರದೇಶಗಳಲ್ಲಿ ಸಫಾರಿ ಚಟುವಟಿಕೆ ಕಡಿಮೆ ಮಾಡಿ: ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ಅರಣ್ಯ ವಲಯಗಳಲ್ಲಿ ಹೆಚ್ಚುತ್ತಿರುವ ಮಾನವ ಚಟುವಟಿಕೆಯಿಂದಾಗಿ ನೀರು ಮತ್ತು ಆಹಾರವನ್ನು ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಅವರು ಹೇಳಿದರು.

ಮೈಸೂರು: ಅಕ್ಟೋಬರ್‌ನಲ್ಲಿ ಎರಡು ವಾರಗಳ ಅವಧಿಯಲ್ಲಿ ಮೂವರು ರೈತರು ಸಾವಿಗೀಡಾದ ನಂತರ, ಮೈಸೂರಿನ ಅರಣ್ಯ ಪ್ರದೇಶಗಳಲ್ಲಿ ಸಫಾರಿ ಚಟುವಟಿಕೆಗಳನ್ನು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತಿಳಿಸಿದ್ದಾರೆ.

ಅರಣ್ಯ ವಲಯಗಳಲ್ಲಿ ಹೆಚ್ಚುತ್ತಿರುವ ಮಾನವ ಚಟುವಟಿಕೆಯಿಂದಾಗಿ ನೀರು ಮತ್ತು ಆಹಾರವನ್ನು ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಅವರು ಹೇಳಿದರು.

'ಇದೇನು ಸಂಭವಿಸಿದೆ ಎಂದರೆ ಅರಣ್ಯ ಪ್ರದೇಶದಲ್ಲಿ ಜನರ ಓಡಾಟ ಹೆಚ್ಚಾಗಿದೆ ಮತ್ತು ರೆಸಾರ್ಟ್‌ಗಳು ಬರುತ್ತಿವೆ. ಇದಲ್ಲದೆ, ಸಫಾರಿ ಚಟುವಟಿಕೆಗಳು ಹೆಚ್ಚಿವೆ- ಅದು ಒಂದು ಕಾರಣ. ಹೀಗಾಗಿ, ಕಾಡು ಪ್ರಾಣಿಗಳು ನೀರು ಮತ್ತು ಆಹಾರವನ್ನು ಅರಸಿ ಹಳ್ಳಿಗಳಿಗೆ ಬರುತ್ತಿವೆ ಎಂದು ಸಿದ್ದರಾಮಯ್ಯ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

'ನಿನ್ನೆ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆದಿತ್ತು. ಶೀಘ್ರದಲ್ಲೇ ಮತ್ತೊಮ್ಮೆ ಸಭೆ ನಡೆಸುತ್ತೇನೆ. ಅಕ್ರಮ ರೆಸಾರ್ಟ್‌ಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಮತ್ತು ಕಾಡಿನಲ್ಲಿ ಸಫಾರಿ ಚಟುವಟಿಕೆಗಳನ್ನು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾತ್ರೋರಾತ್ರಿ ಶೋಧ; ಇತಿಹಾಸದಲ್ಲಿಯೇ ಮೊದಲ ಬಾರಿಗೆ 30 ಮೊಬೈಲ್ ಫೋನ್‌ಗಳು ವಶ!

ಚಳಿಗಾಲದ ಅಧಿವೇಶನ ಸಂಪನ್ನ: ಉತ್ತರ ಕರ್ನಾಟಕ ಅಭಿವೃದ್ಧಿಗೆ ಗಣನೀಯ ಅನುದಾನ; ವಿಪಕ್ಷಗಳ ಗದ್ದಲದ ನಡುವೆಯೆ ಮಸೂದೆಗಳ ಅಂಗೀಕಾರ

ಹುಣಸೆ, ಹಲಸು, ನೇರಳೆ ಹಣ್ಣುಗಳಿಗೆ ರಾಷ್ಟ್ರೀಯ ಮಂಡಳಿ ಸ್ಥಾಪಿಸಿ: ಕೇಂದ್ರಕ್ಕೆ ಎಚ್‌ಡಿ ದೇವೇಗೌಡ ಒತ್ತಾಯ

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ ನಾಗೇಂದ್ರಗೆ ಸೇರಿದ ₹8.07 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು!

SCROLL FOR NEXT