ಬೆಂಗಳೂರು: ಮನೆ ಬಾಗಿಲಿಗೆ ಕಸ ಸುರಿಯುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಸುದ್ದಿಯಾಗಿತ್ತು. ಅಕ್ಟೋಬರ್ 29 ರಂದು ಈ ಅಭಿಯಾನವನ್ನು ಪ್ರಾರಂಭಿಸಿದ ನಂತರ ಇದುವರೆಗೆ 400 ಉಲ್ಲಂಘನೆಗಳನ್ನು ವರದಿ ಮಾಡಿದೆ.
BSWML ನ ಹಿರಿಯ ಎಂಜಿನಿಯರ್‌ಗಳ ಪ್ರಕಾರ, ನಿವಾಸಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಂದ 5 ಲಕ್ಷ ರೂ. ದಂಡವನ್ನು ಸಂಗ್ರಹಿಸಲಾಗಿದೆ. ನಾವು ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರು ಸರಿಯಾದ ರೀತಿಯಲ್ಲಿ ಕಸ ವಿಲೇವಾರಿ ಮಾಡುವ ಬಗ್ಗೆ ಜನಗಳ ಮನೋಭಾವದ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಪೂರ್ವ ನಗರ ನಿಗಮದ ಕೆಆರ್ ಪುರಂನಲ್ಲಿ ಹಿರಿಯ ನಾಗರಿಕರೊಬ್ಬರು ಕಪ್ಪು ಪಾಲಿಥಿನ್ ಚೀಲದಲ್ಲಿ ಕಸ ಎಸೆಯುವುದನ್ನು ಅಧಿಕಾರಿಗಳು ನೋಡಿ ಹಿಂಬಾಲಿಸಿದರು. ಮಾರ್ಷಲ್‌ಗಳು ಇಡೀ ಕೃತ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ, ನಂತರ ಅವರ ಮನೆಯನ್ನು ಸಹ ಪತ್ತೆಹಚ್ಚಲಾಗಿದೆ.
ಕೆಲವೇ ಗಂಟೆಗಳಲ್ಲಿ, BSWML ತಂಡವು ಆಟೋ ಟಿಪ್ಪರ್‌ನಲ್ಲಿ ಕಸದ ರಾಶಿಗಳೊಂದಿಗೆ ಬಂದು ವ್ಯಕ್ತಿಯ ಮನೆಯ ಮುಂದೆ ಅದನ್ನು ಎಸೆದಿದೆ. ಜೊತೆಗೆ ದಂಡವಾಗಿ 2,000 ರೂ.ಗಳನ್ನು ಸಹ ಸಂಗ್ರಹಿಸಿದೆ.
ಮೊದಲ ಬಾರಿಗೆ ಅಪರಾಧ ಎಸಗಿದರೆ ನಿವಾಸಿಗಳಿಗೆ 2,000 ರೂ. ದಂಡ ವಿಧಿಸಲಾಗುವುದ, ಪದೇ ಪದೇ ಅಪರಾಧ ಎಸಗಿದರೆ 5,000 ರೂ. ದಂಡ ವಿಧಿಸಲಾಗುವುದು. ವಾಣಿಜ್ಯ ಸಂಸ್ಥೆಗಳಿಗೆ ಮೊದಲ ಬಾರಿಗೆ ಅಪರಾಧ ಎಸಗಿದರೆ 25,000 ರೂ. ಪದೇ ಪದೇ ಅಪರಾಧ ಎಸಗಿದರೆ 50,000 ರೂ ಗಳನ್ನು ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ದಂಡ ವಿಧಿಸಲಾಗುವುದು" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ, ಕಸ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಕಸ ಹಾಕುವುದನ್ನು ತಡೆಯಲು, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಿಸಿಟಿವಿ ಕ್ಯಾಮೆರಾ ಅಳವಡಿಸಲಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವುದನ್ನು ಚಿತ್ರೀಕರಿಸುವ ಜನರಿಗೆ ನಗದು ಬಹುಮಾನ ನೀಡಲು ಬಿಎಸ್‌ಡಬ್ಲ್ಯೂಎಂಎಲ್ ಯೋಜಿಸುತ್ತಿದೆ. ಈ ಯೋಜನೆ ಬಗ್ಗೆ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಶೀಘ್ರದಲ್ಲೇ ಘೋಷಿಸಲಿದ್ದಾರೆ.