ಸಾಂದರ್ಭಿಕ ಚಿತ್ರ 
ರಾಜ್ಯ

ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ್ಯಾಗಿಂಗ್: ಬಾಲಕನ ಗುಪ್ತಾಂಗಕ್ಕೆ ಒದ್ದು ಹಲ್ಲೆ; ವೃಷಣಗಳಿಗೆ ಗಾಯ- ಶಸ್ತ್ರಚಿಕಿತ್ಸೆ

8 ನೇ ತರಗತಿಯ ವಿದ್ಯಾರ್ಥಿಗೆ ಅವನ ಮೂವರು ಸಹಪಾಠಿಗಳು ಪದೇ ಪದೇ ಕಿರುಕುಳ ನೀಡುತ್ತಿದ್ದರು. ನಗದು ಮತ್ತು ಮೊಬೈಲ್ ಫೋನ್‌ಗಳನ್ನು ತಂದು ಕೊಡುವಂತೆ ಒತ್ತಾಯಿಸುತ್ತಿದ್ದರು ಎಂದು ಕುಟುಂಬವು ತನ್ನ ದೂರಿನಲ್ಲಿ ತಿಳಿಸಿದೆ.

ಮೈಸೂರು: ನಗರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, 13 ವರ್ಷದ ಬಾಲಕನ ಮೇಲೆ ಅವನ ಮೂವರು ಸಹಪಾಠಿಗಳು ಶಾಲಾ ಆವರಣದಲ್ಲಿ ಹಲ್ಲೆ ನಡೆಸಿದ್ದರಿಂದ ಅವನ ವೃಷಣಗಳಿಗೆ ಗಂಭೀರ ಗಾಯವಾಗಿದೆ.

ವರದಿಗಳ ಪ್ರಕಾರ, 8 ನೇ ತರಗತಿಯ ವಿದ್ಯಾರ್ಥಿಗೆ ಅವನ ಮೂವರು ಸಹಪಾಠಿಗಳು ಪದೇ ಪದೇ ಕಿರುಕುಳ ನೀಡುತ್ತಿದ್ದರು. ನಗದು ಮತ್ತು ಮೊಬೈಲ್ ಫೋನ್‌ಗಳನ್ನು ತಂದು ಕೊಡುವಂತೆ ಒತ್ತಾಯಿಸುತ್ತಿದ್ದರು ಎಂದು ಕುಟುಂಬವು ತನ್ನ ದೂರಿನಲ್ಲಿ ತಿಳಿಸಿದೆ.

ಅಕ್ಟೋಬರ್ 25 ರಂದು, ಆರೋಪಿಯು ಬಾಲಕನನ್ನು ಶೌಚಾಲಯಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ಆರಂಭದಲ್ಲಿ ಎಫ್‌ಐಆರ್ ದಾಖಲಿಸಲು ಹಿಂಜರಿದರು, ಆದರೆ ಸಂತ್ರಸ್ತ ಬಾಲಕನ ಸಂಬಂಧಿಕರ ಒತ್ತಡದ ನಂತರ ಹಾಗೆ ಮಾಡಿದ್ದಾಗಿ ಬಾಲಕನ ಕುಟುಂಬ ಆರೋಪಿಸಿದೆ.

ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂದ ಪ್ರಕರಣ ದಾಖಲಾಗಿದೆ. ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು ಮತ್ತು ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಬಾಲಕನ ಸಹಪಾಠಿಗಳ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ನಾಲ್ಕು ವರ್ಷಗಳಿಂದ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಬಾಲಕ ಮಾಧ್ಯಮಗಳಿಗೆ ತಿಳಿಸಿದ್ದಾನೆ. ನಾನು 4 ನೇ ತರಗತಿಯಲ್ಲಿದ್ದಾಗ ಪ್ರಾರಂಭವಾಯಿತು. ನನ್ನನ್ನು ತರಗತಿಯ ಲೀಡರ್ ಮಾಡಿ ಯಾರಾದರೂ ತಪ್ಪು ಮಾಡಿದರೆ ವರದಿ ನೀಡಲು ತಿಳಿಸಲಾಯಿತು.

ನಾನು ಹಾಗೆ ಮಾಡಿದೆ, ಹೀಗಾಗಿ ಅವರು ನನ್ನನ್ನು ಹೊಡೆದರು. ನನ್ನ ತಾಯಿ ಶಿಕ್ಷಕರಿಗೆ ದೂರು ನೀಡಿದರು, ಆದರೆ ಅವರು ಏನೂ ಮಾಡಲಿಲ್ಲ ಎಂದು ಅವರು ಹೇಳಿದರು. ಅಕ್ಟೋಬರ್ 25 ರ ಘಟನೆಯ ಬಗ್ಗೆ ಕೇಳಿದಾಗ, "ಅವರಲ್ಲಿ ಇಬ್ಬರು ನನ್ನ ಕೈ ಹಿಡಿದರು ಮತ್ತು ಒಬ್ಬರು ನನ್ನ ಗುಪ್ತಾಂಗಕ್ಕೆ ಎರಡು ಬಾರಿ ಒದ್ದ" ಎಂದು ಅವರು ಹೇಳಿದರು. ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ, ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥರು ಮತ್ತು ಸಂಬಂಧಪಟ್ಟ ಶಿಕ್ಷಕರನ್ನು ಆರೋಪಿ ನಂ. 1 ಎಂದು ಹೆಸರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ 'ರಾಜಾತಿಥ್ಯ': ಇಬ್ಬರು ಅಧಿಕಾರಿಗಳು ಅಮಾನತು; ಮುಖ್ಯ ಅಧೀಕ್ಷಕ ಎತ್ತಂಗಡಿ; ತನಿಖೆಗೆ ಸಮಿತಿ ರಚನೆ

ಜೈಲಿನ ಕೈದಿಗಳಿಗೆ 'ರಾಜಾತಿಥ್ಯ'ಕ್ಕೆ ಖಂಡನೆ: ಸಿಎಂ ಮನೆಗೆ ಮುತ್ತಿಗೆ ಯತ್ನ; ಅನೇಕ ಬಿಜೆಪಿ ನಾಯಕರು ಪೊಲೀಸ್​ ವಶಕ್ಕೆ

Tirumala: 'ನಂದಿನಿ ಬೇಡ' ಎಂದಿದ್ದ TTDಗೆ ಉಂಡೇ ನಾಮ ತಿಕ್ಕಿದ್ದ ಖಾಸಗಿ ಡೈರಿ, 'ಹಾಲನ್ನೇ ಬಳಸದೇ ತುಪ್ಪ ತಯಾರಿಕೆ'.. ಭಕ್ತರಿಗೆ ಕಲಬೆರಕೆ ಲಡ್ಡು ಪ್ರಸಾದ!

360 ಕೆಜಿ ಸ್ಫೋಟಕ, ಶಸ್ತ್ರಾಸ್ತ್ರಗಳು ಪತ್ತೆ ಪ್ರಕರಣ: ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಸೇರಿ ಇಬ್ಬರ ಬಂಧನ

20 ವರ್ಷಗಳ ದುರ್ಬಲ ಆಡಳಿತದಿಂದ ಮುಕ್ತಿ: ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರ ರಚನೆ ಖಚಿತ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT