ಹಾವೇರಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿದ ವಿಚಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮುಸ್ಲಿಂರು ಸಾಲಾಗಿ ನಿಂತು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಈಗ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ವಿಮಾನ ನಿಲ್ದಾಣವನ್ನೇ ಮಸೀದಿ ಮಾಡಿಕೊಳ್ಳಲು ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಮುಸ್ಲಿಮರ ಪ್ರಾರ್ಥನೆಯನ್ನು ಸಮರ್ಥಿಕೊಳ್ಳುವ ಭರದಲ್ಲಿ ಮಾಜಿ ಸಚಿವ ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರ ಶ್ರದ್ಧೆ ನೋಡಿ ನೀವು ಕಲಿಯಿರಿ. ಅವರು ಎಲ್ಲೇ ಇದ್ದರೂ ಅವರ ಮನದ ನೆಮ್ಮದಿಗೆ ಪ್ರಾರ್ಥನೆ ಮಾಡುತ್ತಾರೆ. ಅದು ಬಸ್ ಸ್ಟ್ಯಾಂಡ್ ಇರಲಿ, ರಸ್ತೆ ಇರಲಿ ಅಥವಾ ವಿಮಾನ ನಿಲ್ದಾಣವೇ ಆಗಲಿ ಸಾಮೂಹಿಕ ಪ್ರಾರ್ಥನೆಯನ್ನ ಅಚ್ಚುಕಟ್ಟಾಗಿ ಮಾಡುತ್ತಾರೆ. ನಮ್ಮವರಂತೆ ನಾಮ ಹಾಕಿಕೊಂಡು, ಪೂಜೆ ಮಾಡಿ ತಟ್ಟೆಗೆ ದಕ್ಷಿಣೆ ಹಾಕಿ ಎಂದು ಕೇಳಲ್ಲ. ಅವರು ಮೂರ್ಖರಲ್ಲ ಮಸೀದಿ ಇಲ್ಲ ಅಂತ ವಿಮಾನ ನಿಲ್ದಾಣದಲ್ಲಿ ಮಾಡಿರಬಹುದು ಎಂದು ಹೇಳಿದ್ದಾರೆ.
ಅದಕ್ಕೆ ನಾವು ಯಾಕೆ ಸಣ್ಣತನ ತೋರಿಸಿಬೇಕು? ಗಣೇಶನ ಹಬ್ಬದಲ್ಲಿ ಬ್ರ್ಯಾಂಡಿ ಅಂಗಡಿಗಳು ಫುಲ್ ರಶ್ ಇರುತ್ತವೆ. ಗಣೇಶ ಹಬ್ಬದಲ್ಲಿ ಹೂ, ಹಣ್ಣಿನ ವ್ಯಾಪಾರ ಆಗಲ್ಲ. ಮದ್ಯ ಮಾರಾಟ ಹೆಚ್ಚಾಗಿರುತ್ತದೆ. ನಮ್ಮವರು ಬಾರ್ ಗಳಲ್ಲಿ ಚನ್ನಾಗಿ ಕುಡಿದು ದೇವರ ಮುಂದೆ ಬಂದು ಕುಣಿಯುತ್ತಾರೆ ಎಂದು ಆಂಜನೇಯ ಹೇಳಿದ್ದಾರೆ.