ಗಡ್ಡಪ್ಪ 
ರಾಜ್ಯ

ಮಂಡ್ಯ: 'ತಿಥಿ' ಖ್ಯಾತಿಯ ಹಿರಿಯ ನಟ ಗಡ್ಡಪ್ಪ ನಿಧನ

ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದ ಚನ್ನೇಗೌಡ, ತಿಥಿ ಚಿತ್ರದಲ್ಲಿ ಅಭಿನಯದ ನಂತರ ಗಡ್ಡಪ್ಪ ಎಂದೇ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಮಂಡ್ಯ: ರಾಷ್ಟ್ರ ಪ್ರಶಸ್ತಿ ವಿಜೇತ 'ತಿಥಿ' ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದ ಚನ್ನೇಗೌಡ, ತಿಥಿ ಚಿತ್ರದಲ್ಲಿ ಅಭಿನಯದ ನಂತರ ಗಡ್ಡಪ್ಪ ಎಂದೇ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ತಿಥಿ, ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿ ಸುಮಾರು 8 ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಡ್ಡಪ್ಪ, ತಿಂಗಳ ಹಿಂದೆ ಬಿದ್ದು ಸೊಂಟ ಪೆಟ್ಟಾಗಿ, ಆಪರೇಷನ್ ಆಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಂಜೆ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಲಿದೆ ಎಂದು ಮೃತರ ಪುತ್ರಿ ಶೋಭಾ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: 'ಆರೋಪಿಗಳ ಜೊತೆ ಯಾವುದೇ ಸಂಬಂಧವಿಲ್ಲ, ರಾಸಾಯನಿಕಗಳ ಸಂಗ್ರಹಿಸಿಲ್ಲ': Al-Falah ವಿವಿ ಸ್ಪಷ್ಟನೆ

Delhi Blast: 'ಬಿಹಾರ ಚುನಾವಣೆ ಸಮಯದಲ್ಲೇ ಏಕೆ ಸ್ಫೋಟ ನಡೆಯಿತು..? ಯಾರೂ ಗೂಟ ಹೊಡೆದು ಇರಲ್ಲ': ಸಚಿವ ಜಮೀರ್ ವಿಚಿತ್ರ ಪ್ರಶ್ನೆ

Delhi blast: ಬಂಧಿತ ವೈದ್ಯರು ಜನವರಿ ತಿಂಗಳಲ್ಲಿ ಹಲವು ಬಾರಿ ಕೆಂಪು ಕೋಟೆ ಪ್ರದೇಶಕ್ಕೆ ಭೇಟಿ ನೀಡಿದ್ದರು !

Delhi blast: ಎರಡು ಕಾರ್ಟ್ರಿಡ್ಜ್‌ಗಳು, ಸ್ಫೋಟಕಗಳು ಸೇರಿದಂತೆ ವಿಧಿ ವಿಜ್ಞಾನ ತಂಡದಿಂದ 40 ಮಾದರಿಗಳ ಸಂಗ್ರಹ

Delhi Blast case: ಮೂರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಶಾಹೀನ್, ಅಂತವಳಲ್ಲ; ಪೋಷಕರ ಸಮರ್ಥನೆ

SCROLL FOR NEXT