ಗದಗ: ಕರ್ನಾಟಕದಲ್ಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯ ಹೊರಗುತ್ತಿಗೆ ನೌಕರರಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಎಲ್ಲಾ ರಾಜ್ಯ ಸರ್ಕಾರಿ ನೌಕರರ ವೇತನವನ್ನು ನಿರ್ವಹಿಸುವ ಖಜಾನೆ II (K2) ಸಾಫ್ಟ್‌ವೇರ್‌ನೊಂದಿಗೆ ಹೊಸ ಸಾಫ್ಟ್‌ವೇರ್ ನ್ನು ಹೊಂದಿಕೆ ಮಾಡದ ಕಾರಣ ವಿಳಂಬವಾಗಿದೆ ಎನ್ನಲಾಗುತ್ತಿದೆ.
ಆದರೆ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯೋಜನೆಗೆ ಇನ್ನೂ ಹಣವನ್ನು ಬಿಡುಗಡೆ ಮಾಡಿಲ್ಲ, ಇದರಿಂದಾಗಿ ವಿಳಂಬವಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳುತ್ತಾರೆ.
ಈ ವರ್ಷದ ಜುಲೈನಿಂದ ರಾಜ್ಯಾದ್ಯಂತ 3,657 ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿಸಲಾಗಿಲ್ಲ. ಅವರಿಗೆ ಕಳೆದ 10 ತಿಂಗಳಿನಿಂದ ಪ್ರಯಾಣ ಮತ್ತು ತುಟ್ಟಿ ಭತ್ಯೆಗಳನ್ನು ಸಹ ಪಾವತಿಸಲಾಗಿಲ್ಲ.
ಈ ಯೋಜನೆಯಡಿ 27 ವಿಪತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಯ ಅಧಿಕಾರಿಗಳು, 27 ಜಿಲ್ಲಾ ಖಾತೆ ವ್ಯವಸ್ಥಾಪಕರು, 202 ತಾಂತ್ರಿಕ ಸಂಯೋಜಕರು, 222 ತಾಲ್ಲೂಕು ಎಂಬಿಎಸ್, 294 ಬಿಜಿ ಸಂಯೋಜಕರು, 299 ಬಿಎಲ್ ಆರ್ ಪಿ, 799 ತಾಂತ್ರಿಕ ಸಹಾಯಕರು ಮತ್ತು ಇತರರು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ಅಧಿಕಾರಿಗಳನ್ನು ಸಂಬಳ ಬಿಡುಗಡೆ ಮಾಡುವಂತೆ ವಿನಂತಿಸಿದ್ದೇವೆ.
ಅವರ ವೇತನ10,000 ರೂಪಾಯಿಗಳಿಂದ 45,000 ರೂಪಾಯಿಗಳವರೆಗೆ ಇದೆ. TNIE ಜೊತೆ ಮಾತನಾಡಿದ ಸಿಬ್ಬಂದಿ, ಕೆಲಸಕ್ಕೆ ಹೋಗಲು ಬಸ್ ಶುಲ್ಕ ಪಾವತಿಸಲು ಹಣವಿಲ್ಲ ಎಂದು ಹೇಳಿದರು. ಶಾಲಾ ಶುಲ್ಕ ಪಾವತಿಸಲು ಮತ್ತು ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿದೆ ಎಂದು ದೂರಿದರು.
ನಮ್ಮ ವೇತನ ಬಿಡುಗಡೆ ಮಾಡಲು ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ವಿನಂತಿಸಿದ್ದೇವೆ. ಆದರೆ ಅವರು ನಮ್ಮ ಪಾವತಿ ವ್ಯವಸ್ಥೆಯನ್ನು K2 ಸಾಫ್ಟ್‌ವೇರ್‌ನೊಂದಿಗೆ ಮ್ಯಾಪಿಂಗ್ ಮಾಡುವಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಹೀಗೆ ಆಗಿದೆ ಎಂದು ಉದ್ಯೋಗಿಯೊಬ್ಬರು ಹೇಳುತ್ತಾರೆ.
ಗದಗ ಜಿಲ್ಲಾ ಪಂಚಾಯತ್‌ನ ಅಧಿಕಾರಿ, "ನಾವು ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿದ್ದೇವೆ, ಆದರೆ ಈಗ ಕೇಂದ್ರ ಸರ್ಕಾರದಿಂದ ಹಣವನ್ನು ಬಿಡುಗಡೆ ಮಾಡಿಲ್ಲ" ಎಂದು ಹೇಳಿದರು.