ವಿಧಾನಪರಿಷತ್ ಸದಸ್ಯ ಸಿಟಿ ರವಿ 
ರಾಜ್ಯ

Delhi Blast: 'ಗುಪ್ತಚರ ವೈಫಲ್ಯ' ಎನ್ನುವವರಿಗೆ ಸಿ.ಟಿ ರವಿ ತಿರುಗೇಟು! ಹೇಳಿದ್ದೇನು?

ಅಕ್ಟೋಬರ್ 9ರಂದು ಜಲಂಧರ್ ನಲ್ಲಿ ಐಎಸ್‍ಐ ಬೆಂಬಲಿತ ಸಂಚನ್ನು ವಿಫಲಗೊಳಿಸಲಾಗಿತ್ತು. ಅಕ್ಟೋಬರ್ 13ರಂದು ಜೈಶ್ ಮಹಮ್ಮದ್ ಸಂಘಟನೆಯ ಹಣಕಾಸಿನ ಜಾಲವನ್ನು ಆಂಧ್ರ ಪ್ರದೇಶ, ಮಹಾರಾಷ್ಟ್ರ ಮೊದಲಾದ ಕಡೆಗಳಲ್ಲಿ ಬಯಲಿಗೆ ಎಳೆಯಲಾಗಿತ್ತು.

ಬೆಂಗಳೂರು: ಸೋಮವಾರ ಸಂಜೆ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಗುಪ್ತಚರ ವೈಫಲ್ಯ ಕಾರಣ ಎನ್ನುವವರಿಗೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಗುರುವಾರ ತಿರುಗೇಟು ನೀಡಿದರು.

ಬೇಹುಗಾರಿಕೆ ವೈಫಲ್ಯ ಎನ್ನುವವರಿಗೆ ಮಾಹಿತಿ: ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಬಾಂಬ್ ಸ್ಪೋಟಕ್ಕೆ ಕೆಲವರು ಬೇಹುಗಾರಿಕೆ ವೈಫಲ್ಯ ಎನ್ನುತ್ತಾರೆ. ಅವರಿಗೆ ಈ ಮಾಹಿತಿ ಎಂದ ಅವರು, ಅಕ್ಟೋಬರ್ 9ರಂದು ಜಲಂಧರ್ ನಲ್ಲಿ ಐಎಸ್‍ಐ ಬೆಂಬಲಿತ ಸಂಚನ್ನು ವಿಫಲಗೊಳಿಸಲಾಗಿತ್ತು. ಅಕ್ಟೋಬರ್ 13ರಂದು ಜೈಶ್ ಮಹಮ್ಮದ್ ಸಂಘಟನೆಯ ಹಣಕಾಸಿನ ಜಾಲವನ್ನು ಆಂಧ್ರ ಪ್ರದೇಶ, ಮಹಾರಾಷ್ಟ್ರ ಮೊದಲಾದ ಕಡೆಗಳಲ್ಲಿ ಬಯಲಿಗೆ ಎಳೆಯಲಾಗಿತ್ತು ಎಂದು ತಿಳಿಸಿದರು.

ಅಕ್ಟೋಬರ್ 15ರಂದು ಪಂಜಾಬ್‍ನಲ್ಲಿ ಡ್ರೋನ್ ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಜಾಲವನ್ನು ಭೇದಿಸಿ ವಶಕ್ಕೆ ಪಡೆಯಲಾಗಿತ್ತು. ಅಕ್ಟೋಬರ್ 24ರಂದು ದೆಹಲಿಯಲ್ಲಿ ಐಸಿಸ್ ಪ್ರೇರಿತ ಆನ್ ಲೈನ್ ಜಾಲವನ್ನು ವಿಫಲಗೊಳಿಸಲಾಗಿತ್ತು. 28ರಂದು ಎಚ್‍ಯುಐಎಸ್ ತಾಂತ್ರಿಕ ತಜ್ಞೆಯನ್ನು ಪುಣೆಯಲ್ಲಿ ಬಂಧಿಸಲಾಗಿತ್ತು. ನವೆಂಬರ್ 7ರಂದು ಭಯೋತ್ಪಾದನಾ ಕೃತ್ಯಕ್ಕೆ ಪ್ರೇರಣೆ ನೀಡುವವರನ್ನು ರಾಜಸ್ಥಾನದಲ್ಲಿ ಬಂಧಿಸಿದ್ದರು. ಗುಜರಾತ್ ಎಟಿಎಸ್ ಮಹಿಳೆ ಸೇರಿ ನಾಲ್ವರನ್ನು ಬಂಧಿಸಿತ್ತು ಎಂದು ವಿವರಿಸಿದರು.

ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಕುರಿತು ಆತಂಕ ಇಲ್ಲ. ಚುನಾವಣೆಗೆ ಮೊದಲು ಯಾಕೆ ಆಗಿದೆ ಎಂಬುದೇ ಅವರ ಆತಂಕವಾಗಿದೆ. ದೆಹಲಿ ಬಾಂಬ್ ಸ್ಫೋಟಕ್ಕೆ ಕಾರಣವಾದವರು ಡಾ.ಉಮರ್, ಡಾ.ಆದಿಲ್, ಡಾ.ಶಹೀನಾ, ಡಾ.ಮೊಹಿಯುದ್ದೀನ್ ಮೊದಲಾದವರು ಇದ್ದಾರೆ. ಅಲ್ ಫಲಾಹ್ ವೈದ್ಯಕೀಯ ಕಾಲೇಜನ್ನೇ ಭಯೋತ್ಪಾದನೆಯ ತಾಣವಾಗಿ ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ RDX ಸಂಗ್ರಹಿಸಿದ್ದರು. ಸುಮಾರು 3 ಸಾವಿರ ಕೆಜಿ ಸ್ಪೋಟಕ ಸಂಗ್ರಹ ಮಾಡಿದ್ದರು. ಇದು ಇಡೀ ಬೆಂಗಳೂರನ್ನೇ ಸುಟ್ಟು ಹಾಕಿಬಿಡಬಹುದು ಎಂದು ತಿಳಿಸಿದರು.

ಜಗತ್ತೇ ಬೆಚ್ಚಿ ಬೀಳುವಂಥ ಭಯೋತ್ಪಾದನಾ ದುಷ್ಕೃತ್ಯ ನಡೆಯುತ್ತಿತ್ತು

ಅಪಾರ ಪ್ರಮಾಣದಲ್ಲಿ ರಿಸಿನ್ ಎಂಬ ಆರ್ಸೆನಿಕ್ ಥರದ ವಿಷ ತಯಾರಿಸಿದ್ದರು. ಅವರು ಅಂದುಕೊಂಡ ಯೋಜನೆ ಪ್ರಕಾರ ನಡೆದಿದ್ದರೆ ಬಹುಶಃ ಭಾರತದಲ್ಲಿ ಜಗತ್ತೇ ಬೆಚ್ಚಿ ಬೀಳುವಂಥ ಭಯೋತ್ಪಾದನಾ ದುಷ್ಕೃತ್ಯ ನಡೆಯುತ್ತಿತ್ತು ಎಂದು ಲಕ್ಷಾಂತರ ಜನರನ್ನು ಕೊಲ್ಲುವ ಸಂಚು ಮಾಡಿದ್ದರು ಎಂದು ವಿವರಿಸಿದ ಸಿಟಿ ರವಿ, ಲಕ್ಷಗಟ್ಟಲೆ ಜನರ ಸಾವಿನ ಬಗ್ಗೆ ಕಾಂಗ್ರೆಸ್ಸಿಗೆ ಆತಂಕ ಇರಬೇಕಾಗಿತ್ತು. ಅವರು ತಮ್ಮ ಯೋಜನೆಯಲ್ಲಿ ಯಶ ಪಡೆದಿದ್ದರೆ ಎಷ್ಟು ಲಕ್ಷ ಜನರು ಸಾಯುತ್ತಿದ್ದರೆಂಬ ಆತಂಕ ಇರಬೇಕಿತ್ತು. ಆದರೆ, ಬಿಹಾರ ಚುನಾವಣೆಗೆ ಮುಂಚೆಯೇ ಯಾಕಾಯಿತು? ಎಂಬುದು ಇವರ ಆತಂಕ. ಭಯೋತ್ಪಾದಕರು ಬಾಂಬ್ ಇಟ್ಟರೆ ಬಿಜೆಪಿಗೇ ಲಾಭ ಆಗುತ್ತದೆಯೇ? ನೀವೇನು ಭಯೋತ್ಪಾದಕರ ಜೊತೆ ಸೇರಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್, ಬೌದ್ಧಿಕವಾಗಿ ದಿವಾಳಿ: ಭಯೋತ್ಪಾದಕರು ಮತ್ತು ನಿಮ್ಮನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುತ್ತಾರೆಂಬ ಭಯವೇ? ಆ ಭಯದಿಂದ ಈ ಯೋಚನೆಯೇ? ಕಾಂಗ್ರೆಸ್ಸಿಗೆ ಜನ ಸತ್ತಿದ್ದಕ್ಕೆ ಸಂಕಟವಿಲ್ಲ; ಚುನಾವಣೆ ಸಂದರ್ಭದಲ್ಲೇ ಯಾಕೆ ಬಾಂಬಿಟ್ಟರು ಎಂಬುದು ಅವರಿಗೆ ಸಂಕಟದ ವಿಚಾರವಾಗಿದೆ. ಕಾಂಗ್ರೆಸ್, ಬೌದ್ಧಿಕವಾಗಿ ದಿವಾಳಿ ಹೊಂದಿರುವುದಕ್ಕೆ ಇದೊಂದು ನಿದರ್ಶನ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿನಲ್ಲಿ ಕಸ ಗುಡಿಸುವ ಯಂತ್ರಗಳಿಗೆ 613 ಕೋಟಿ ರೂ. ಬಾಡಿಗೆ; ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು ಹೀಗಿವೆ

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ

ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಇದೇ ಮೊದಲು, ಬಿಜೆಪಿಯಿಂದ ಗೆದ್ದು TMC ಸೇರಿದ್ದ ಮುಕುಲ್ ರಾಯ್ ಶಾಸಕ ಸ್ಥಾನ ರದ್ದುಗೊಳಿಸಿದ ಹೈಕೋರ್ಟ್!

ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಗೆಲುವು; ತಮಿಳು ನಾಡು ಅರ್ಜಿ ಸುಪ್ರೀಂ ಕೋರ್ಟ್ ವಜಾ

SCROLL FOR NEXT