ಸಾಂಕೇತಿಕ ಚಿತ್ರ online desk
ರಾಜ್ಯ

ಯಾರೂ ಚೀಟಿ ವ್ಯವಹಾರ ಮಾಡಬೇಡಿ; ಸಾಲದ ಹೊರೆ ತಾಳಲಾರದೆ ವಿಡಿಯೋ ಮಾಡಿಟ್ಟು BJP ಕಾರ್ಯಕರ್ತ ಆತ್ಮಹತ್ಯೆಗೆ ಶರಣು

ವೈಯಾಲಿಕಾವಲ್‌ನ ವಿನಾಯಕ ವೃತ್ತದ ಬಳಿ ವೆಂಕಿ ಟೂರ್ಸ್ ಅಂಡ್ ಟ್ರಾವೆಲ್ಸ್ ನಡೆಸುತ್ತಿದ್ದ ಇವರು, ನಿನ್ನೆ ಸಂಜೆ ಟ್ರಾವೆಲ್ಸ್ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು: ಸಾಲದ ಹೊರೆ ತಾಳಲಾರದೆ ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನಯೊಂದು ನೆ ವೈಯಾಲಿಕಾವಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಲೇಶ್ವರದ ಬಿಜೆಪಿ ಮಂಡಲದ ಕಾರ್ಯಕರ್ತನಾಗಿದ್ದ ಎಂ.ವೆಂಕಟೇಶ್‌ (50) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾರೆ. ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಸಂಸದ ಪಿ.ಸಿ.ಮೋಹನ್ ಅವರಿಗೂ ಆಪ್ತನಾಗಿದ್ದ ಇವರು, ಹಲವು ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.

ವೈಯಾಲಿಕಾವಲ್‌ನ ವಿನಾಯಕ ವೃತ್ತದ ಬಳಿ ವೆಂಕಿ ಟೂರ್ಸ್ ಅಂಡ್ ಟ್ರಾವೆಲ್ಸ್ ನಡೆಸುತ್ತಿದ್ದ ಇವರು, ನಿನ್ನೆ ಸಂಜೆ ಟ್ರಾವೆಲ್ಸ್ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮೃತದೇಹವನ್ನ ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ವೆಂಕಟೇಶ್ ಆಗಾಗ್ಗೆ ಸ್ನೇಹಿತರೊಂದಿಗೆ ಹೊರಗೆ ಹೋಗುತ್ತಿದ್ದರಿಂದ, ಅವರ ಕುಟುಂಬವು ಅವರನ್ನು ಹುಡುಕಿರಲಿಲ್ಲ. ಬುಧವಾರ ಸಂಜೆ, ಕಚೇರಿಯಿಂದ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಣಕಾಸು ನಷ್ಟದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ವೆಂಕಟೇಶ್ ಅವರು ಚೀಟಿ ವ್ಯವಹಾರ ನಡೆಸುತ್ತಿದ್ದು, ಅವರಿಗೆ 7 ಜನ ಚೀಟಿ ಹಣ ಕಟ್ಟದೇ ಮೋಸ ಮಾಡಿದ್ದರು. ಇದೇ ಸಮಯದಲ್ಲಿ ಚೀಟಿ ಕಟ್ಟಿದ್ದ ಇನ್ನುಳಿದ ನಾಲ್ವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ವೆಂಕಟೇಶ್, ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.

ಸಾಯುವ ಮುನ್ನ ವಿಡಿಯೋ ಮಾಡಿಟ್ಟಿರುವ ವೆಂಕಟೇಶ್ ಅವರು ಹಣಕಾಸು ನಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ಜೀವನದಲ್ಲಿ ಏನಾದರೂ ಆಗಿ ಚೀಟಿ ಏಜೆಂಟ್ ಆಗಬೇಡಿ ಎಂದು ಕಣ್ಣೀರಿಟ್ಟು ಹೇಳಿರುವುದು ಕಂಡು ಬಂದಿದೆ. ಇದೇ ವೇಳೆ ಪ್ರಮುಖ ಮುಖಂಡರು ಪರಿಚಸ್ಥರಾಗಿದ್ದರೂ ಯಾರೂ ನೆರವಿಗೆ ಬರಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ವೆಂಕಟೇಶ್ ಅವರ ಇಬ್ಬರು ತಂಗಿಯರು ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ,ವೈಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Live: Bihar Election Results 2025: ಜೆಡಿಯು ಭರ್ಜರಿ ಜಯ ಸಾಧಿಸಿ ಎನ್‌ಡಿಎ ಬಹುಮತದತ್ತ ದಾಪುಗಾಲು, 5ನೇ ಬಾರಿ ಸಿಎಂ ಹುದ್ದೆ ಹಾದಿ

Bihar trends- ಬಿಹಾರ ಮತ ಎಣಿಕೆ ಪ್ರಗತಿಯಲ್ಲಿ, ಆರಂಭಿಕ ಟ್ರೆಂಡ್ ನಲ್ಲಿ NDA ಮುನ್ನಡೆ, ಮಹಾಘಟಬಂಧನ್ ಹಿನ್ನಡೆ

Bihar Election Results 2025: ಮತ ಎಣಿಕೆ ಆರಂಭ, ಸತತ 5ನೇ ಬಾರಿ ಗೆಲುವಿನ ಉತ್ಸಾಹದಲ್ಲಿ ನಿತೀಶ್ ಕುಮಾರ್, ಬದಲಾವಣೆ ನಿರೀಕ್ಷೆಯಲ್ಲಿ ತೇಜಸ್ವಿ ಯಾದವ್

Bihar Election Results 2025: ಇಂದು ಬಿಹಾರ ಚುನಾವಣೆ ಮತ ಎಣಿಕೆ, ಕೆಲವೇ ಹೊತ್ತಿನಲ್ಲಿ ಭವಿಷ್ಯ ನಿರ್ಧಾರ; ಗೆಲುವಿನ 'ಹಾರ' ಯಾರ ಪಾಲು?

'ನಮಗೆ ಆತುರವಿಲ್ಲ, ಪಕ್ಷ ಕಟ್ಟಲು ರಕ್ತ -ಬೆವರು ಸುರಿಸಿದ್ದೇವೆ: ಅಧಿಕಾರಕ್ಕಾಗಿ ಇನ್ನೂ 5 ವರ್ಷ ಕಾಯುತ್ತೇವೆ; ಸಮ್ಮಿಶ್ರ ಸರ್ಕಾರ ಸೇರುವ ಪ್ರಶ್ನೆಯೇ ಇಲ್ಲ'

SCROLL FOR NEXT