ಡಿ ಕೆ ಶಿವಕುಮಾರ್  
ರಾಜ್ಯ

'ಕುಡಿದು ತೂರಾಡ್ತಾನೆ ಅಂತ ವಿರೋಧ ಪಕ್ಷದವರು ನನ್ನನ್ನ ಟೀಕೆ ಮಾಡಿದ್ರು; ನನಗೆ ಮಧ್ಯಾಹ್ನ ಕುಡಿಯುವ ಚಟ ಏನೂ ಇಲ್ಲ': ಡಿ.ಕೆ ಶಿವಕುಮಾರ್

ಬೆಂಗಳೂರಿನಲ್ಲಿ ಅವರು ರಚಿಸಿರುವ ನೀರಿನ ಹೆಜ್ಜೆ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ನಾವು ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡಿದ್ದೆವು, ಅಧಿಕಾರಕ್ಕೆ ಬಂದ ಮೇಲೂ ನಮ್ಮ ಹಕ್ಕಿಗಾಗಿ ಹೋರಾಟ ಮುಂದುವರಿಸಿದೆವು ಎಂದಿದ್ದಾರೆ.

ಬೆಂಗಳೂರು: ವಿರೋಧ ಪಕ್ಷದವರು ನನ್ನ ಬಗ್ಗೆ ಬೇಕಾದಷ್ಟು ಟೀಕೆಗಳನ್ನು ಮಾಡಿದರು, ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕೇಸು ಹಾಕಿಸಿದರು. ಆದರೆ ನಾನು ಅವೆಲ್ಲವುಗಳನ್ನೂ ಮೆಟ್ಟಿನಿಂತು ಕೆಲಸದಿಂದ ಗುರುತಿಸಿಕೊಂಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅವರು ರಚಿಸಿರುವ ನೀರಿನ ಹೆಜ್ಜೆ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ನಾವು ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡಿದ್ದೆವು, ಬೆಂಗಳೂರಿನಿಂದ ಮಂಡ್ಯಕ್ಕೆ ಮೆರವಣಿಗೆ ಹೋಗಿದ್ದೆವು. ಇಡೀ ರಾತ್ರಿ ಕಷ್ಟಪಟ್ಟು ಕೆಲಸ ಮಾಡಿ ವಿಪರೀತ ಸುಸ್ತಾಗಿ ನಡೆದುಕೊಂಡು ಹೋಗುವಾಗ ಅದು ಜಾಗವೂ ಹಾಗೆಯೇ ಇದ್ದಿತು, ಅಂಕುಡೊಂಕು ಸ್ಥಳದಲ್ಲಿ ಹೋಗುವಾಗ ನನ್ನ ಬಾಡಿ ಅಲ್ಲಾಡುತ್ತಿದ್ದಾಗ ಡಿ ಕೆ ಶಿವಕುಮಾರ ಕುಡಿದು ಬಿಟ್ಟು ಅಲ್ಲಾಡ್ತಾನೆ ಎಂದು ಮಾತನಾಡಿದರು.

ವಿರೋಧ ಪಕ್ಷದವರು ಕೇಸು ಹಾಕಿದರು, ಇನ್ನೂ ಕೆಲವು ವಿಚಾರಣೆ ನಡೆಯುತ್ತಿದೆ. ಕೊರೋನಾ ಸಂದರ್ಭದಲ್ಲಿ ನನ್ನನ್ನು ಟೆಸ್ಟ್ ಮಾಡಿ ಕೊರೋನಾ ಇದೆ ಎಂದು ರಿಪೋರ್ಟ್ ಕೊಡಲು ಬಂದೆ, ಆಗ ನನ್ನ ಆರೋಗ್ಯನೂ ಸ್ವಲ್ಪ ಹದಗೆಟ್ಟಿತ್ತು. ಅವರಿಗೆ ನಾನು ಆಗ ಸರಿಯಾಗಿಯೇ ಉತ್ತರ ಕೊಟ್ಟೆ ಎಂದರು.

ಡಿ ಕೆ ಶಿವಕುಮಾರ್ ಕುಡಿದುಬಿಟ್ಟು ಅಲ್ಲಾಡ್ತಾನೆ ಎಂದರು. ನಾನು ಟೀಕೆಗಳಿಗೆ ಜಗ್ಗುವವನಲ್ಲ, ಆ ಸಂದರ್ಭದಲ್ಲಿ ಹಾಗಿತ್ತು, ಇಡೀ ರಾತ್ರಿ ಕಷ್ಟಪಟ್ಟು ಕೆಲಸ ಮಾಡಿ ನಡೆಯುವಾಗ ದೇಹ ದಣಿದು ಅಲ್ಲಾಡಿತು, ನನಗೇನು ಮಧ್ಯಾಹ್ನನೇ ಕುಡಿಯುವ ಚಟ ಇಲ್ಲ. ಅಷ್ಟು ಕಷ್ಟಪಟ್ಟು ಬೆಂಗಳೂರು ತಲುಪಿದೆವು. ಈ ರಾಜ್ಯದ ರೈತರಿಗೋಸ್ಕರ ನೀರಿನ ಹೋರಾಟ ಮಾಡಿದೆವು. ನಮ್ಮ ನೀರು ನಮ್ಮ ಹಕ್ಕು, ಸುಪ್ರೀಂ ಕೋರ್ಟ್ ಮೇಕೆದಾಟು ಬಗ್ಗೆ ಐತಿಹಾಸಿಕ ತೀರ್ಪು ನೀಡಿದೆ. ನಮ್ಮ ಶ್ರಮ, ದಿಕ್ಕು, ಆಲೋಚನೆಯಿಂದ ನ್ಯಾಯ ಸಿಕ್ಕಿದೆ, ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ