ವಿಜಯಪುರ: ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಪ್ರಿಯಕರನ ಕತ್ತುಹಿಸುಕಿ ಮಹಿಳೆಯೇ ಕೊಲೆ ಮಾಡಿರುವ ಘಟನೆ ವಿಜಯಪುರದ ಅಮನ್ ಕಾಲೋನಿಯಲ್ಲಿ ನಡೆದಿದೆ. ಮೃತನನ್ನು 26 ವರ್ಷದ ಸಮೀರ್ ಅಲಿಯಾಸ್ ಪಿಕೆ ಇನಾಂದಾರ್ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ತಯ್ಯಾಬಾ ತನ್ನ ಸಹೋದರ ಅಸ್ಲಮ್ ಸಹಾಯ ಪಡೆದು ಕೊಲೆ ಮಾಡಿದ್ದಾಳೆ. ರಾತ್ರಿಯೆಲ್ಲಾ ಶವದೊಂದಿಗೆ ಕಳೆದಿದ್ದ ಮಹಿಳೆ ಬೆಳಗ್ಗೆ ಗೋಲಗುಂಬಜ್ ಪೊಲೀಸ್ ಠಾಣಾಗೆ ತೆರಳಿ ಕೊಲೆ ವಿಚಾರ ಬಹಿರಂಗಪಡಿಸಿದ್ದಾಳೆ. ನಂತರ ಘಟನಾ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿ ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರೌಡಿ ಶೀಟರ್ ಆಗಿದ್ದ ಸಮೀರ್ ಮಹಿಳೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದರಿಂದ ಬೇಸತ್ತ ತಯ್ಯಾಬಾ ಆತನನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ. ಇದಕ್ಕೆ ತಮ್ಮನ ಸಹಾಯವನ್ನು ಮಹಿಳೆ ಪಡೆದಿದ್ದಾಳೆ ಎಂದು ತಿಳಿದುಬಂದಿದೆ.