ನೆಫಿಲಾ ಜಾತಿಯ ದೈತ್ಯ ಜೇಡ 
ರಾಜ್ಯ

Nephila giant spider: ಗದಗ ಅರಣ್ಯದಲ್ಲಿ ನೆಫಿಲಾ ಜಾತಿಯ ದೈತ್ಯ ಜೇಡ ಪತ್ತೆ; ಹನುಮಂತನ ಹೆಸರಿಡುವಂತೆ ತಜ್ಞರ ಸೂಚನೆ

ಈ ದೈತ್ಯ ಜೇಡವು ಹನುಮನಂತೆ ಕಾಣುತ್ತದೆ. ಕೀಟಗಳಿಗೆ ಜನಪ್ರಿಯ ವ್ಯಕ್ತಿಗಳ ಹೆಸರನ್ನು ಇಡುವ ಪ್ರವೃತ್ತಿ ಪ್ರಾರಂಭವಾಗಿದೆ. ಜರ್ಮನ್ ಸರ್ವಾಧಿಕಾರಿಯ ಮುಖವನ್ನು ಹೋಲುವ ಕಾರಣ ಕ್ಯಾಟಕಾಂಥಸ್ ಇನ್‌ಕಾರ್ನಾಟಸ್‌ಗೆ ಹಿಟ್ಲರ್ ಎಂದು ಹೆಸರಿಡಲಾಗಿತ್ತು.

ಗದಗ: ಕೀಟಗಳಿಗೆ ಜನಪ್ರಿಯ ವ್ಯಕ್ತಿಗಳ ಹೆಸರನ್ನಿಡುವ ಪ್ರವೃತ್ತಿ ಬೆಳೆಯುತ್ತಲೇ ಬಂದಿದ್ದು, ಅದಾಗ್ಯೂ ಬೆಂಗಳೂರು ಮತ್ತು ಗದಗದ ಸಂಶೋಧಕರು ಇತ್ತೀಚೆಗೆ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸಸರ್ವಾಡ ಅರಣ್ಯ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನೆಫಿಲಾ ಜಾತಿಯ ದೈತ್ಯ ಜೇಡಕ್ಕೆ ಹನುಮಂತನ ಹೆಸರಿಡುವಂತೆ ಸೂಚಿಸಿದ್ದಾರೆ.

ಇಂತಹ ವರ್ಣರಂಜಿತ ಜೀವಿಯನ್ನು ಸೃಷ್ಟಿಸಿದ್ದಕ್ಕಾಗಿ ದೇವರ ಹೆಸರನ್ನು ಇಡುವುದು ಇದರ ಉದ್ದೇಶ ಎಂದು ಸಂಶೋಧಕರು ಹೇಳಿದ್ದಾರೆ.

ಕೀಟಗಳಿಗೆ ಹೆಸರಿಡುವುದು ಕೀಟಗಳ ಅಧ್ಯಯನವನ್ನು ಗುರುತಿಸಲು ಸುಲಭಗೊಳಿಸುತ್ತದೆ ಎಂದು ಸಂಶೋಧನಾ ವಿದ್ಯಾರ್ಥಿಗಳು ಹೇಳಿದ್ದಾರೆ.

ಈ ದೈತ್ಯ ಜೇಡವು ಹನುಮನಂತೆ ಕಾಣುತ್ತದೆ. ಕೀಟಗಳಿಗೆ ಜನಪ್ರಿಯ ವ್ಯಕ್ತಿಗಳ ಹೆಸರನ್ನು ಇಡುವ ಪ್ರವೃತ್ತಿ ಪ್ರಾರಂಭವಾಗಿದೆ. ಜರ್ಮನ್ ಸರ್ವಾಧಿಕಾರಿಯ ಮುಖವನ್ನು ಹೋಲುವ ಕಾರಣ ಕ್ಯಾಟಕಾಂಥಸ್ ಇನ್‌ಕಾರ್ನಾಟಸ್‌ಗೆ ಹಿಟ್ಲರ್ ಎಂದು ಹೆಸರಿಡಲಾಗಿತ್ತು. ಅದೇ ರೀತಿ, 'ಮಿಸ್ಟರ್ ಇಂಡಿಯಾ' ಸಿನಿಮಾದಲ್ಲಿ ಅಮರೀಶ್ ಪುರಿ ಅವರ ಪಾತ್ರವನ್ನು ಹೋಲುವ ಕಾರಣಕ್ಕೆ ಕೀಟಕ್ಕೆ ಮೊಗಾಂಬೊ ಎಂದು ಹೆಸರಿಡಲಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.

“ಗೋಲ್ಡನ್ ಆರ್ಬ್ ವೀವರ್ ಜೇಡ"ವು ಗದಗದಂತಹ ಪ್ರದೇಶಗಳಲ್ಲಿ ಕಂಡು ಬರುವುದು ಅಪರೂಪ. ಈ ದೈತ್ಯ ಜೇಡವು ಕೆಲ ವಿಶೇಷ ಲಕ್ಷಣಗಳನ್ನು ಒಳಗೊಂಡಿದೆ. ಜೈಂಟ್‌ವುಡ್‌ ಸ್ಪೈಡರ್‌ಗಳಲ್ಲಿ ಗಂಡಿಗಿಂತ ಹೆಣ್ಣು ಬಲಿಷ್ಠ. ಹೆಣ್ಣು ಜೇಡ ಮೂರು ಇಂಚಿನಷ್ಟು ಉದ್ದ ಇರುತ್ತದೆ. ಗಂಡು ಜೇಡಗಳು ಸಣ್ಣದಿದ್ದು, ಹೆಣ್ಣು ಜೇಡ ಹೆಣೆದ ಬಲೆಯ ಮೇಲೆ ವಾಸ ಮಾಡುತ್ತವೆ.

ಈ ಜೇಡಗಳಿಂದ ಮನುಷ್ಯರಿಗೆ ಅಪಾಯ ಇಲ್ಲ. ಈ ಜೇಡದಲ್ಲಿರುವ ವಿಷದ ಅಂಶ ಕೀಟಗಳನ್ನು ಹಿಡಿಯಲು ಬಳಕೆ ಆಗುತ್ತದೆ ಎಂದು ಸಂಶೋಧಕ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್