ಚಾಮರಾಜನಗರ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿ ಕೊಂಡಿರುವ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಸೋಮವಾರ ಹುಲಿ ದಾಳಿಗೆ ಮಹಿಳೆ ಮೃತಪಟ್ಟಿದ್ದಾರೆ.
ತಮಿಳುನಾಡಿನ ನೀಲಗಿರಿ (ಊಟಿ) ಜಿಲ್ಲೆಯ ಗೂಡ್ಲೂರು ತಾಲ್ಲೂಕಿನ ಮಾವನಹಳ್ಳ ಗ್ರಾಮದ ನಾಗಿಯಮ್ಮ (61) ಮೃತರು. ಮೇಕೆ ಮೇಯಿಸುವಾಗ ಹುಲಿ ಮಹಿಳೆಯನ್ನು ಎಳೆದೊಯ್ದಿದೆ.
ಇದೇ ಸ್ಥಳದಲ್ಲಿ 5 ತಿಂಗಳ ಹಿಂದೆ 2 ಹಸುಗಳನ್ನು ಹುಲಿ ಕೊಂದಿತ್ತು. ಈ ವೇಳೆ ಸಾರ್ವಜನಿಕರು ಕೂಗಿಕೊಂಡಾಗ ಆಕೆಯನ್ನು ಸುಮಾರು 100 ಮೀಟರ್ ನಷ್ಟು ದೂರ ಇರುವ ಹಳ್ಳಕ್ಕೆ ಎಳೆದೊಯ್ದಿದೆ ಎನ್ನಲಾಗುತ್ತಿದೆ. ಮಹಿಳೆ ಮೃತದೇಹ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.