ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಖಾಸಗಿ ಪುನರ್ವಸತಿ ಕೇಂದ್ರದಲ್ಲಿ ಯುವಕನ ಶವ ಪತ್ತೆ; ನಾಲ್ವರು ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲು

ಮದ್ಯದ ಚಟ ಹೊಂದಿದ್ದ ದರ್ಶನ್ ನವೆಂಬರ್ 12 ರಂದು ಅವರ ನಿವಾಸದ ಬಳಿ ನಡೆದ ವಾಗ್ವಾದದ ನಂತರ ವಿವೇಕನಗರ ಪೊಲೀಸರು ವಶಕ್ಕೆ ಪಡೆದಿದ್ದರು.

ಬೆಂಗಳೂರು: 22 ವರ್ಷದ ಯುವಕನ ಸಾವಿಗೆ ಸಂಬಂಧಿಸಿದಂತೆ ವಿವೇಕನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬುಧವಾರ ಮಾದನಾಯಕನಹಳ್ಳಿಯ ಖಾಸಗಿ ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಸಂತ್ರಸ್ತ ದರ್ಶನ್ ಕೋರಮಂಗಲದ ಸೊನ್ನೇನಹಳ್ಳಿ ನಿವಾಸಿ. ಅವರ ತಾಯಿ ಆದಿಲಕ್ಷ್ಮಿ ಅವರು ವಿವೇಕನಗರ ಪೊಲೀಸ್ ಸಿಬ್ಬಂದಿ ಮತ್ತು ಯೂನಿಟಿ ಸೋಶಿಯಲ್ ಸರ್ವಿಸ್ ಟ್ರಸ್ಟ್ ಪುನರ್ವಸತಿ ಕೇಂದ್ರದ ವಿರುದ್ಧ ಕಸ್ಟಡಿ ಹಿಂಸಾಚಾರ, ಅಕ್ರಮ ಬಂಧನ ಮತ್ತು ನಿರ್ಲಕ್ಷ್ಯದ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.

ಮದ್ಯದ ಚಟ ಹೊಂದಿದ್ದ ದರ್ಶನ್ ನವೆಂಬರ್ 12 ರಂದು ಅವರ ನಿವಾಸದ ಬಳಿ ನಡೆದ ವಾಗ್ವಾದದ ನಂತರ ವಿವೇಕನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಯುವಕ ಮಚ್ಚನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಮೂರು ದಿನಗಳ ನಂತರ, ವಿವೇಕನಗರ ಪೊಲೀಸರು ಅಡಕಮಾರನಹಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಆತನನ್ನು ಸೇರಿಸಲು ವ್ಯವಸ್ಥೆ ಮಾಡಿದ್ದರು ಎಂದು ವರದಿಯಾಗಿದೆ.

ವಿವೇಕನಗರ ಪೊಲೀಸರು ಹಲ್ಲೆ ಮಾಡಿದ್ದರಿಂದ 22 ವರ್ಷದ ದರ್ಶನ್ ಸಾವನ್ನಪ್ಪಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಆಗಿದೆ. ಕುಡಿದು ಗಲಾಟೆ ಮಾಡುತ್ತಿದ್ದ ದರ್ಶನ್‌ನಲ್ಲಿ ವಶಕ್ಕೆ ಪಡೆದಿದ್ದ ವಿವೇಕನಗರ ಪೊಲೀಸರು ಎರಡು ದಿನ ಠಾಣೆಯಲ್ಲಿ ಇಟ್ಟುಕೊಂಡು ಹಲ್ಲೆ ಮಾಡಿದ್ದರು. ಈ ವೇಳೆ ದರ್ಶನ್ ತಾಯಿ ತನ್ನ ಮಗನನ್ನು ಬಿಡಲು ಕೇಳಿದಾಗ ಪೊಲೀಸರು ಬಿಟ್ಟಿರಲಿಲ್ಲ.

ಇದಾದ ಬಳಿಕ ಆತನನ್ನ ಯುನಿಟಿ ರಿಹ್ಯಾಬ್ ಸೆಂಟರ್‌ಗೆ ದಾಖಲಿಸಲಾಗಿತ್ತು. ದರ್ಶನ್ ತಾಯಿ ರಿಹ್ಯಾಬ್ ಗೆ ಕರೆ ಮಾಡಿದಾಗ ನಿಮ್ಮ ಮಗ ಚೆನ್ನಾಗಿದ್ದಾನೆ ಎಂದು ಹೇಳುತ್ತಿದ್ದರು. ಆದರೆ, ಮಗನ ಜೊತೆ ಮಾತನಾಡಲು ಅವಕಾಶ ಕೊಟ್ಟಿರಲಿಲ್ಲ.

ನ. 26ರಂದು ಬೆಳಗ್ಗೆ ಕರೆಮಾಡಿದ್ದ ರಿಹ್ಯಾಬ್ ಸೆಂಟರ್ ಸಿಬ್ಬಂದಿ ನಿಮ್ಮ ಮಗ ಸಾವನ್ನಪ್ಪಿದ್ದಾನೆ ಎಂದಿದ್ದರು. ಆಗ ಪುನರ್ವಸತಿ ಕೇಂದ್ರಕ್ಕೆ ಹೋದಾಗ ಆತನ ಶವವನ್ನು ನೆಲಮಂಗಲ ಆಸ್ಪತ್ರೆಯಲ್ಲಿ ಅನಾಥ ಶವದಂತೆ ಬಿಟ್ಟು ಬಂದಿದ್ದರು ಎಂಬುದು ತಿಳಿದುಬಂದಿದೆ. ದರ್ಶನ್ ಸಾವಿನ ಬಗ್ಗೆ ಮಾಹಿತಿ ಕೇಳಿದರೆ ಆತನಿಗೆ ಉಸಿರಾಟ ಸಮಸ್ಯೆಯಿದ್ದರಿಂದ ಸಾವು ಸಂಭವಿಸಿದೆ ಎಂದಿದ್ದಾರೆ.

ಆದರೆ ದರ್ಶನ್ ಮೃತದೇಹ ನೋಡಿದಾಗ ಗಾಯದ ಗುರುತು ಪತ್ತೆಯಾಗಿವೆ. ಹೀಗಾಗಿ ಮಗನ ಸಾವಿನಲ್ಲಿ ಅನುಮಾನ ಇದೆ ಎಂದು ಪೋಷಕರು ದೂರು ನೀಡಿದ್ದರು. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರು ಮೊದಲು UDR ದಾಖಲಿಸಿದ್ದರು. ನಂತರ ದರ್ಶನ್ ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆ ಮಾಡಿರೋದು ಬೆಳಕಿಗೆ ಬಂದಿದ್ದು, ನಂತರ ಕೊಲೆ ಕೇಸ್ ದಾಖಲಿಸಿ ತನಿಖೆ ಮಾಡಲಾಗುತ್ತಿದೆ.

ವಿವೇಕನಗರ ಪೊಲೀಸರು ದರ್ಶನ್ ಅವರನ್ನು ದಾಖಲಿಸಲು ಕರೆ ಮಾಡಿದ್ದರು ಎಂದು ಪುನರ್ವಸತಿ ಕೇಂದ್ರದ ಮೇಲ್ವಿಚಾರಕ ನವೀನ್ ಮಾಧ್ಯಮಗಳಿಗೆ ತಿಳಿಸಿದರು. "ದಾಖಲಾದ ಸಮಯದಲ್ಲಿ, ಅವರ ಮೈಮೇಲೆ ಗಾಯದ ಗುರುತುಗಳಿದ್ದವು, ಮತ್ತು ನಾವು ಅವುಗಳ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದೇವೆ.

ಉಸಿರಾಟದ ತೊಂದರೆ ಇದೆ ಎಂದು ಅವರು ದೂರು ನೀಡಿದ ನಂತರ, ಅವರನ್ನು ಮೊದಲು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಮ್ಮ ತಪ್ಪು ಇದ್ದರೆ ನಾವು ಶಿಕ್ಷೆಯನ್ನು ಅನುಭವಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.

"ಗುರುವಾರ ಮಾದನಾಯಕನಹಳ್ಳಿ ಪೊಲೀಸರು ವಿವೇಕನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇತರ ಮೂವರು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪುನರ್ವಸತಿ ಕೇಂದ್ರದ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌ಪಿ ಸಿಕೆ ಬಾಬಾ ಟಿಎನ್‌ಐಇಗೆ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು: ಶೂಟ್ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್ ಆತ್ಮಹತ್ಯೆ

ಲಂಚ ಪಡೆವಾಗ ಲೋಕಾಯುಕ್ತ ದಾಳಿ: ಇನ್ಸ್ ಪೆಕ್ಟರ್ ಹೈಡ್ರಾಮಾ, ಪೊಲೀಸರ ವಿರುದ್ಧವೇ ಕೂಗಾಡಿ ರಂಪಾಟ, Video Viral

ಕೇವಲ 400 ಮೀಟರ್​ಗೆ 18 ಸಾವಿರ ರೂ. ಬಾಡಿಗೆ: ಹಗಲು ದರೋಡೆಗಿಳಿದ ಮುಂಬೈ ಕ್ಯಾಬ್ ಚಾಲಕನ ಬಂಧನ!

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ತಳ್ಳಿಹಾಕಿದ CBI; ಆದ್ರೆ ಕೃತಕ 'ತುಪ್ಪ' ಬಳಕೆ ಬಹಿರಂಗ

ಮಂಗನ ಜ್ವರಕ್ಕೆ ಈ ವರ್ಷ ಮೊದಲ ಸಾವು: ಶಿವಮೊಗ್ಗದಲ್ಲಿ 29 ವರ್ಷದ ಯುವಕ ಬಲಿ, ಆರೋಗ್ಯ ಇಲಾಖೆಗೆ ಮುನ್ನೆಚ್ಚರಿಕೆ

SCROLL FOR NEXT