ಸಾಂದರ್ಭಿಕ ಚಿತ್ರ 
ರಾಜ್ಯ

ಹೆಚ್ಚುವರಿ ಕ್ಲಾಸ್ ಗಳಿಂದ ದೈಹಿಕ ಶಿಕ್ಷಣ ತರಗತಿಗಳಿಗೆ ಅಡ್ಡಿಪಡಿಸದಂತೆ ರಾಜ್ಯದ ಶಾಲೆಗಳಿಗೆ ನಿರ್ದೇಶನ

10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಟ ಮತ್ತು ದೈಹಿಕ ಶಿಕ್ಷಣದ ಕೊರತೆಯ ಬಗ್ಗೆ ಕೆಎಸ್‌ಸಿಪಿಸಿಆರ್ ಸದಸ್ಯರು ಪತ್ರ ಬರೆದ ನಂತರ ಶಿಕ್ಷಣ ಇಲಾಖೆಯಿಂದ ಈ ಸೂಚನೆಯನ್ನು ನೀಡಲಾಗಿದೆ.

ಬೆಂಗಳೂರು: 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಟ ಮತ್ತು ದೈಹಿಕ ಶಿಕ್ಷಣ ತರಗತಿಗಳಿಗೆ ವಿಷಯ ಶಿಕ್ಷಕರು ಅಡ್ಡಿಪಡಿಸದಂತೆ ನೋಡಿಕೊಳ್ಳಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದ ಎಲ್ಲ ಪ್ರೌಢಶಾಲೆಗಳ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಸೂಚನೆ ನೀಡಿದೆ.

10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಟ ಮತ್ತು ದೈಹಿಕ ಶಿಕ್ಷಣದ ಕೊರತೆಯ ಬಗ್ಗೆ ಕೆಎಸ್‌ಸಿಪಿಸಿಆರ್ ಸದಸ್ಯರು ಪತ್ರ ಬರೆದ ನಂತರ ಶಿಕ್ಷಣ ಇಲಾಖೆಯಿಂದ ಈ ಸೂಚನೆಯನ್ನು ನೀಡಲಾಗಿದೆ.

ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ ಟಿ ತಿಪ್ಪೇಸ್ವಾಮಿ, "ಕಳೆದ ತಿಂಗಳು, ನಾನು ವಿವಿಧ ಶಾಲೆಗಳಿಗೆ ಭೇಟಿ ನೀಡಿ 10ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದೇನೆ. ಕ್ರೀಡಾ ಅವಧಿಯಲ್ಲಿ ಆಟವಾಡಲು ಅಥವಾ ದೈಹಿಕ ತರಗತಿಗಳನ್ನು ನಡೆಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಯೋಗಕ್ಕೆ ತಿಳಿಸಿದ್ದಾರೆ. ಈ ದೈಹಿಕ ಶಿಕ್ಷಣ ತರಗತಿಗಳನ್ನು ಹೆಚ್ಚುವರಿ ತರಗತಿಗಳನ್ನು ನಡೆಸಲು ಮತ್ತು ಅವರ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಇತರ ವಿಷಯದ ಶಿಕ್ಷಕರು ಬಳಸಿಕೊಳ್ಳುತ್ತಿರೆ" ಎಂದು ಹೇಳಿದ್ದಾರೆ.

"ಇದು ತುಂಬಾ ದುಃಖಕರವಾಗಿದೆ ಏಕೆಂದರೆ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸಲು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವಷ್ಟೇ ಮುಖ್ಯವಾಗಿದೆ. ಇದರ ಜೊತೆಗೆ, ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವಂತೆ ಪೋಷಕರಿಂದ ಒತ್ತಡಕ್ಕೊಳಗಾಗುತ್ತಾರೆ. ಆದ್ದರಿಂದ, ಶಿಕ್ಷಕರು ದೈಹಿಕ ಶಿಕ್ಷಣ ತರಗತಿಗಳನ್ನು ಹೆಚ್ಚುವರಿ ತರಗತಿಗಳಿಗೆ ಬಳಸಿಕೊಳ್ಳಬಾರದು ಎಂದು ಆದೇಶ ಹೊರಡಿಸುವಂತೆ ನಾನು ಶಿಕ್ಷಣ ಆಯುಕ್ತ ವಿಕಾಸ್ ಕಿಶೋರ್ ಅವರಿಗೆ ಪತ್ರ ಬರೆದಿದ್ದೇನೆ" ಎಂದು ಅವರು ತಿಳಿಸಿದರು.

ಪಠ್ಯಕ್ರಮ ಪೂರ್ಣಗೊಳಿಸುವ ಒತ್ತಡದಲ್ಲಿ ಶಿಕ್ಷಕರು

ಇಲಾಖೆಯ ಕಟ್ಟುನಿಟ್ಟಿನ ಆದೇಶ ಮತ್ತು ಮಕ್ಕಳ ಒಟ್ಟಾರೆ ಹಿತಾಸಕ್ತಿಯ ನಡುವೆ, ಶಿಕ್ಷಕರು ಡಿಸೆಂಬರ್ 15, 2025ರ ಮೊದಲು ತಮ್ಮ ವಿಷಯಗಳ ಪಠ್ಯಕ್ರಮವನ್ನು ಪೂರ್ಣಗೊಳಿಸುವ ಒತ್ತಡದಲ್ಲಿದ್ದಾರೆ.

"ಸಾಮಾಜಿಕ-ಆರ್ಥಿಕ ಸಮೀಕ್ಷೆಯ ದಿನಾಂಕ ವಿಸ್ತರಿಸಿದ್ದರಿಂದ ನಮ್ಮ ಹೆಚ್ಚಿನ ತರಗತಿ ಸಮಯವು ಅದರಲ್ಲಿ ಕಳೆದುಹೋಯಿತು. ಪರಿಣಾಮವಾಗಿ, ಡಿಸೆಂಬರ್ 15 ರೊಳಗೆ ಪಠ್ಯಕ್ರಮವನ್ನು ಪೂರ್ಣಗೊಳಿಸಲು ನಾವು ಒತ್ತಡದಲ್ಲಿದ್ದೇವೆ. ಈ ದಿನಾಂಕವು ಹೆಚ್ಚುವರಿ ಹತ್ತು ದಿನಗಳವರೆಗೆ ವಿಸ್ತರಿಸಬಹುದು. ಆದರೆ ಅದನ್ನು ಮೀರುವಂತಿಲ್ಲ. ಆದ್ದರಿಂದ, ನಾವು ಬೆಳಗ್ಗೆ ಮತ್ತು ಸಂಜೆ 45 ನಿಮಿಷಗಳ ಕಾಲ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಶನಿವಾರ ಮತ್ತು ಭಾನುವಾರ ಶಿಕ್ಷಕರ ಲಭ್ಯತೆಯನ್ನು ಅವಲಂಬಿಸಿರುತ್ತದೆ" ಎಂದು ಬೆಂಗಳೂರಿನ ಹೊರವಲಯದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಧನ ಸುರಕ್ಷತೆ ಕುರಿತು ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮೂರು ಬಾರಿ ಮಾತುಕತೆ

ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು: ಯಾರೇ ಒಪ್ಪಿದರೂ-ಒಪ್ಪದಿದ್ದರೂ ನಿಯಮಗಳ ಪ್ರಕಾರವೇ ಲೋಕಸಭೆ ಕಾರ್ಯನಿರ್ವಹಣೆ; ಸ್ಪೀಕರ್ ಓಂ ಬಿರ್ಲಾ

ಇರಾನ್ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಹೊರೆ, ಪ್ರತಿ ತಿಂಗಳು 30,000 ಕೋಟಿ ರೂ. ಹೆಚ್ಚಿನ ವೆಚ್ಚ!

ಟಿ20 ವಿಶ್ವಕಪ್ ನಲ್ಲಿ ವಿವಾದಾತ್ಮಕ ನಿರ್ಧಾರ: ಸೂರ್ಯ ಕುಮಾರ್ ಯಾದವ್ ಕ್ಷಮೆಯಾಚನೆ!

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಪತನ; 92.36ಕ್ಕೆ ಕುಸಿತ

SCROLL FOR NEXT