ಬಂಧಿತ ಆರೋಪಿ. 
ರಾಜ್ಯ

ಬೆಂಗಳೂರು: ವಿದ್ಯಾರ್ಥಿನಿ ಸಾವಿಗೆ ಕಾರಣವಾಗಿದ್ದ ಟಿಪ್ಪರ್ ಚಾಲಕನ ಬಂಧನ

ಧನುಶ್ರೀ ಹೊಸಕೋಟೆ ನಿವಾಸಿಯಾಗಿದ್ದು, ಕಾಲೇಜಿಗೆ ಹೋಗುತ್ತಿದ್ದ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿಯಾಗಿದ್ದರು.

ಬೆಂಗಳೂರು: ಮೂರು ದಿನಗಳ ಹಿಂದೆ ಬೂದಿಗೆರೆ ಕ್ರಾಸ್ ಸಮೀಪ ಹಿಟ್ ಆ್ಯಂಡ್ ರನ್ ಮಾಡಿ ವಿದ್ಯಾರ್ಥಿನಿ ಸಾವಿಗೆ ಕಾರಣವಾಗಿ ಪರಾರಿಯಾಗಿದ್ದ ಟಿಪ್ಪರ್‌ಲಾರಿ ಚಾಲಕನನ್ನು ಆವಲಹಳ್ಳಿ ಠಾಣೆ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಯನ್ನು ಮಂಡೂರು ನಿವಾಸಿ ವೈ. ಜಯರುದ್ದೀನ್ ಮಂಡಲ್ (28) ಎಂದು ಗುರುತಿಸಲಾಗಿದೆ. ಆರೋಪಿ ಪಶ್ಚಿಮ ಬಂಗಾಳದ ಮೂಲದವನಾಗಿದ್ದು, ಈತ ಸೆ.29 ರಂದು ಬೂದಿಗೆರೆ ಕ್ರಾಸ್ ಬಳಿ ಸ್ಕೂಟರ್‌ಗೆ ಟಿಪ್ಪಲ್ ಲಾರಿ ಗುದ್ದಿಸಿ ಪರಾರಿಯಾಗಿದ್ದ.

ಈ ಘಟನೆಯಲ್ಲಿ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ಧನುಶ್ರೀ (21) ಮೃತಪಟ್ಟಿದ್ದಳು. ಈ ಘಟನೆ ಬಗ್ಗೆ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಧನುಶ್ರೀ ಹೊಸಕೋಟೆ ನಿವಾಸಿಯಾಗಿದ್ದು, ಕಾಲೇಜಿಗೆ ಹೋಗುತ್ತಿದ್ದ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿಯಾಗಿದ್ದರು. ಸೋಮವಾರ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೂದಿಗೆರೆ ಕ್ರಾಸ್ ಬಳಿ ಜಲ್ಲಿಕಲ್ಲು ತಪ್ಪಿಸಲು ಹೋಗಿ, ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದಳು. ಈ ವೇಳೆ ಆಕೆಯ ಮೇಲೆ ಟಿಪ್ಪರ್‌ ಹರಿದ ಹಿನ್ನೆಲೆ ಸಾವನ್ನಪ್ಪಿದ್ದಳು. ಈ ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಅಪಘಾತ ನಡೆದ ವೇಳೆ ಟಿಪ್ಪರ್ ಸಮೇತ ಚಾಲಕ ಎಸ್ಕೇಪ್ ಆಗಿದ್ದ.

ಬಳಿಕ ಅಪಘಾತಕ್ಕೆ ಕಾರಣನಾದ ಪೊಲೀಸರು ಟಿಪ್ಪರ್ ಹಾಗೂ ಚಾಲಕನಿಗಾಗಿ ಶೋಧಕಾರ್ಯಕ್ಕೆ ಮುಂದಾಗಿದ್ದರು. ಇದೀಗ ಕೊನೆಗೂ ಟಿಪ್ಪರ್ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಗೆ ಮೋದಿ ದೂರವಾಣಿ ಕರೆ: ಮಹತ್ವದ ಚರ್ಚೆ!

ಸಿಎಂ ಸಿದ್ದರಾಮಯ್ಯರ ವಿಮಾನ ಪ್ರಯಾಣ: 'ರಾಜ್ಯದ ಬೊಕ್ಕಸ'ದಿಂದ ಆದ ಖರ್ಚು ಎಷ್ಟು ಗೊತ್ತಾ?

KSCA ಗೆ ಹೊಸ ಸದಸ್ಯರ ಸೇರ್ಪಡೆ: ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ- ವೆಂಕಟೇಶ್ ಪ್ರಸಾದ್

ಪಶ್ಚಿಮ ಬಂಗಾಳ ಬಿಟ್ಟು ಇನ್ನುಳಿದ 6 ರಾಜ್ಯಗಳಿಗೆ SIR ಗಡುವು ವಿಸ್ತರಿಸಿದ ಚುನಾವಣಾ ಆಯೋಗ!

2ನೇ ಟಿ20: ಭಾರತಕ್ಕೆ 214 ಬೃಹತ್ ರನ್ ಗುರಿ ನೀಡಿದ ಆಫ್ರಿಕಾ

SCROLL FOR NEXT