ಸಚಿವ ಎನ್ಎಸ್ ಬೋಸರಾಜು 
ರಾಜ್ಯ

ಕೆರೆಗಳ ಬಫರ್ ವಲಯ ತಿದ್ದುಪಡಿ ಮಸೂದೆ: ಶೀಘ್ರದಲ್ಲೇ ರಾಜ್ಯಪಾಲರಿಗೆ ವಿವರಣೆ- ಸಚಿವ ಬೋಸರಾಜು

ತಿದ್ದುಪಡಿಯು ವೈಜ್ಞಾನಿಕ ಅಧ್ಯಯನವನ್ನು ಆಧರಿಸಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮತ್ತು ಸಂಬಂಧಿತ ಇಲಾಖೆಗಳ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯ ನಿರ್ಧಾರದ ನಂತರ ತಿದ್ದುಪಡಿ ಮಸೂದೆಯನ್ನು ಸಿದ್ಧಪಡಿಸಲಾಗಿದೆ.

ಬೆಂಗಳೂರು: ಕೆರೆಗಳ ಬಫರ್‌ ವಲಯಕ್ಕೆ ಸಂಬಂಧಿಸಿದ ತಿದ್ದುಪಡಿ ಮಸೂದೆ ಕುರಿತಂತೆ ಕಾನೂನು ತಜ್ಞರ ಸಲಹೆಯೊಂದಿಗೆ ಶೀಘ್ರದಲ್ಲೇ ರಾಜ್ಯಪಾಲರಿಗೆ ವಿವರಣೆ ಸಲ್ಲಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ಅವರು ಬುಧವಾರ ಹೇಳಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಬುಧವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಮೂಲದ ಸಂಘಟನೆಯೊಂದು ಸಲ್ಲಿಸಿದ ದೂರಿನ ಮೇರೆಗೆ ರಾಜ್ಯಪಾಲರು ಸ್ಪಷ್ಟೀಕರಣ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ವಿವರಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ತಿದ್ದುಪಡಿಯು ವೈಜ್ಞಾನಿಕ ಅಧ್ಯಯನವನ್ನು ಆಧರಿಸಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮತ್ತು ಸಂಬಂಧಿತ ಇಲಾಖೆಗಳ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯ ನಿರ್ಧಾರದ ನಂತರ ತಿದ್ದುಪಡಿ ಮಸೂದೆಯನ್ನು ಸಿದ್ಧಪಡಿಸಲಾಗಿದೆ. ನಂತರ ಈ ಮಸೂದೆಯನ್ನು ರಾಜ್ಯ ವಿಧಾನಮಂಡಲದ ಎರಡೂ ಸದನಗಳು ಮಂಡಿಸಿ ಅನುಮೋದಿಸಿವೆ.

ದೂರಿನ ನಂತರ ರಾಜ್ಯಪಾಲರು ಕೋರಿದ ದಾಖಲೆಗಳು ಮತ್ತು ಸ್ಪಷ್ಟೀಕರಣಗಳನ್ನು ಪ್ರಸ್ತುತ ಅಂತಿಮಗೊಳಿಸಲಾಗುತ್ತಿದೆ. ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಮೂಲದ ಸಂಘಟನೆಯೊಂದು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆ 2025 ಅನ್ನು ತಿರಸ್ಕರಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿತ್ತು.

ಕೆರೆ ಬಫರ್ ವಲಯಗಳನ್ನು 30 ಮೀಟರ್‌ಗೆ ಇಳಿಸುವುದು ಸಾಂವಿಧಾನಿಕ ಮತ್ತು ಪರಿಸರ ಸುರಕ್ಷತೆಯ ಉಲ್ಲಂಘನೆಯಾಗಿದೆ ಎಂದು ಗುಂಪು ತಿಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಟ ಧರ್ಮೇಂದ್ರ, ಬಾಲಿವುಡ್ ನ 'ಹೀ-ಮ್ಯಾನ್' ಇನ್ನಿಲ್ಲ

ಆಪ್ತ ಸ್ನೇಹಿತ ಅಂಬರೀಶ್ ಪುಣ್ಯಸ್ಮರಣೆ ದಿನದಂದೇ Bollywood ನಟ ಧರ್ಮೇಂದ್ರ ನಿಧನ: ಸುಮಲತಾ ಸಂತಾಪ!

'ಭಯ್ಯಾ ಅನ್ನಬೇಡಿ, ಆ್ಯಟಿಟ್ಯೂಡ್ ನಿಮ್ಮ ಜೇಬಲ್ಲಿಡಿ': ಪ್ರಯಾಣಿಕರಿಗೆ ಬೆಂಗಳೂರು ಕ್ಯಾಬ್ ಚಾಲಕನ 6 ರೂಲ್ಸ್ ಗಳು, ಪೋಸ್ಟ್ ವೈರಲ್!

ನೂತನ CJI ಸೂರ್ಯಕಾಂತ್ ಗೆ ತಮ್ಮ ಸರ್ಕಾರಿ ಕಾರು ಬಿಟ್ಟುಕೊಟ್ಟ ಮಾಜಿ CJI ಗವಾಯಿ

ಟೆಸ್ಟ್‌ನಲ್ಲಿ ಮತ್ತೆ ಮುಗ್ಗರಿಸಿದ ಭಾರತ: ಯುವ ಬ್ಯಾಟರ್‌ಗಳ ಪೆವಿಲಿಯನ್ ಪರೇಡ್; 201 ರನ್‌ಗೆ ಆಲೌಟ್, ಆಫ್ರಿಕಾಕ್ಕೆ 288 ರನ್ ಮುನ್ನಡೆ!

SCROLL FOR NEXT