ಡಿಕೆ.ಶಿವಕುಮಾರ್  
ರಾಜ್ಯ

OCs, CCs ಇಲ್ಲದ ಕಟ್ಟಡಗಳಿಗೆ ವಿದ್ಯುತ್-ನೀರು ಸಂಪರ್ಕ: ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ; ಡಿಕೆ.ಶಿವಕುಮಾರ್

ಪೂರ್ಣಗೊಂಡ ಪ್ರಮಾಣಪತ್ರ (CC) ಮತ್ತು ವಾಸಯೋಗ್ಯ ಪ್ರಮಾಣಪತ್ರ (OC)ಗಳಿಲ್ಲದ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.

ಬೆಂಗಳೂರು: ಓಸಿ-ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ನೀರು ಸಂಪರ್ಕ ನೀಡುವ ಬಗ್ಗೆ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬುಧವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ಣಗೊಂಡ ಪ್ರಮಾಣಪತ್ರ (CC) ಮತ್ತು ವಾಸಯೋಗ್ಯ ಪ್ರಮಾಣಪತ್ರ (OC)ಗಳಿಲ್ಲದ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಇಂಧನ, ಕಾನೂನು, ಪೌರಾಡಳಿತ ಇಲಾಖೆಯ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿ, ಅಡ್ವೊಕೇಟ್ ಜನರಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂಬಂಧ ಚರ್ಚೆ ಮಾಡಿದ್ದಾರೆ. ಅನೇಕ ಅಭಿಪ್ರಾಯಗಳು ಬಂದಿವೆ ಎಂದು ಹೇಳಿದರು.

ಸಿಸಿ ಮತ್ತು ಒಸಿ ಇಲ್ಲದ ಕಟ್ಟಡಗಳಿಗೆ ಯುಟಿಲಿಟಿ ಸಂಪರ್ಕಗಳನ್ನು ನೀಡಲು ಹಲವು ಕಾನೂನು ಅಡೆತಡೆಗಳಿವೆ. ಹಿಂದಿನ ಸಂಪುಟ ಸಭೆಯಲ್ಲಿ, 30x40 ಸೈಟ್‌ಗಳಲ್ಲಿರುವ ಕಟ್ಟಡಗಳಿಗೆ ವಿನಾಯಿತಿ ನೀಡಿದ್ದೇವೆ. ಇದೀಗ ದೊಡ್ಡ ಸೈಟ್‌ಗಳಲ್ಲಿರುವ ಕಟ್ಟಡಗಳಿಗೂ ಈ ಪ್ರಯೋಜನವನ್ನು ವಿಸ್ತರಿಸುವಂತೆ ಹಲವು ಮನವಿಗಳು ಬಂದಿವೆ. ತನ್ನ ನಿರ್ದೇಶನಗಳನ್ನು ಉಲ್ಲಂಘಿಸಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಗಳನ್ನು ಒದಗಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಇತರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದೆ.

ಹೀಗಾಗಿ ಹೊಸ ಕಟ್ಟಡಗಳ ಮಾಲೀಕರು OC ಗಳು ಮತ್ತು CC ಗಳನ್ನು ಪಡೆಯದೆ ಸಲ್ಲಿಸುವ ವಿದ್ಯುತ್, ನೀರು ಸಂಪರ್ಕಗಳವಿನಂತಿಗಳನ್ನು ನಾವು ಅನುಮತಿಸುವುದಿಲ್ಲ. ಆದರೆ, ಕಾನೂನು ಚೌಕಟ್ಟಿನೊಳಗೆ ವಿದ್ಯುತ್ ಸಂಪರ್ಕಗಳನ್ನು ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಕಾನೂನು ತಂಡವು ಈ ವಿಷಯವನ್ನು ಪರಿಶೀಲಿಸುತ್ತದೆ. ಎಲ್ಲಾ ನಗರ ನಿಗಮಗಳು ಮತ್ತು ಪುರಸಭೆಗಳಿಗೆ ಅನ್ವಯವಾಗುವ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. .

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

20 ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್‌: ಫಾರ್ಮಾ ಕಂಪನಿಯ ಮಾಲೀಕ ಅರೆಸ್ಟ್

ಶಾಂತಿ ಸೂತ್ರಕ್ಕೆ ಹಮಾಸ್ ಒಪ್ಪಿಗೆ: ಒತ್ತೆಯಾಳುಗಳು ಸೋಮವಾರ ವಾಪಸ್ ಎಂದ ಟ್ರಂಪ್, ಕದನ ವಿರಾಮ ಘೋಷಣೆ ಬಳಿಕವೂ ಇಸ್ರೇಲ್‌ನಿಂದ ಮುಂದುವರೆದ ದಾಳಿ..!

Ranji Trophy: ಮೈದಾನದಲ್ಲೇ ಹೈಡ್ರಾಮಾ, ಸಹ ಆಟಗಾರನತ್ತ ಬ್ಯಾಟ್ ಬೀಸಿದ ಪೃಥ್ವಿ ಶಾ, Video

Israel-Gaza ಯುದ್ಧ ಕೊನೆಗೂ ಅಂತ್ಯ: ಶಾಂತಿ ಒಪ್ಪಂದದ ಮೊದಲ ಹಂತಕ್ಕೆ ಇಸ್ರೇಲ್–ಹಮಾಸ್ ಒಪ್ಪಿಗೆ, ಶೀಘ್ರದಲ್ಲೇ ಒತ್ತೆಯಾಳುಗಳ ಬಿಡುಗಡೆ

ಕುರುಬರಿಗೆ ಎಸ್‌ಟಿ ಮೀಸಲಾತಿ: ಸಚಿವ ಸಂಪುಟ ಸಭೆಯಲ್ಲಿ ಚರ್ಚೆ?

SCROLL FOR NEXT