ಸಾಂದರ್ಭಿಕ ಚಿತ್ರ 
ರಾಜ್ಯ

ಗದಗ: ಬಸ್ ಕಂಡಕ್ಟರ್ ನಿಂದ ಪತ್ನಿಯ ಕೊಲೆ; ತಂದೆಗೆ ಮರಣ ದಂಡನೆ ನೀಡಿ, ಇಲ್ಲದಿದ್ದರೇ ನಾವೇ ಕೊಲ್ಲುತ್ತೇವೆ- ಮಕ್ಕಳ ಆಕ್ರೋಶ

ರಮೇಶ್ ಮತ್ತು ಸ್ವಾತಿ ಆಗಾಗ್ಗೆ ಜಗಳವಾಡುತ್ತಿದ್ದರು. ದಂಪತಿಯ ಮಕ್ಕಳು ಸಾಮಾನ್ಯವಾಗಿ ವಿವಾದಗಳಿಂದ ದೂರವಿದ್ದರು ಎಂದು ಕುಟುಂಬ ಸದಸ್ಯರು ಹೇಳುತ್ತಾರೆ.

ಗದಗ: ಗದಗ ಬಳಿಯ ಬಿಂಕದಕಟ್ಟಿ ಗ್ರಾಮದಲ್ಲಿ ಬುಧವಾರ ತನ್ನ ಪತ್ನಿಯನ್ನು ಕೊಂದ ಬಸ್ ಕಂಡಕ್ಟರ್‌ನ ಮೂವರು ಮಕ್ಕಳು, ಪೊಲೀಸರು ಆತನಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ತಮ್ಮ ತಂದೆಯನ್ನು ತಾವೇ ಕೊಲ್ಲುವುದಾಗಿ ಎಚ್ಚರಿಸಿದ್ದಾರೆ.

ಗದಗ NWKRTC ವಿಭಾಗದ ಕಂಡಕ್ಟರ್ ರಮೇಶ್ ನರಗುಂದ ಆರೋಪಿ. ತನ್ನ ಪತ್ನಿ ಸ್ವಾತಿಯ ಮೇಲೆ ಅನುಮಾನ ಪಟ್ಟು ಏಕಾಏಕಿ ಬೀಸುವ ಕಲ್ಲು ಎತ್ತಿಹಾಕಿ, ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.

ರಮೇಶ್ ಮತ್ತು ಸ್ವಾತಿ ಆಗಾಗ್ಗೆ ಜಗಳವಾಡುತ್ತಿದ್ದರು. ದಂಪತಿಯ ಮಕ್ಕಳು ಸಾಮಾನ್ಯವಾಗಿ ವಿವಾದಗಳಿಂದ ದೂರವಿದ್ದರು ಎಂದು ಕುಟುಂಬ ಸದಸ್ಯರು ಹೇಳುತ್ತಾರೆ. ಹುಬ್ಬಳ್ಳಿಯಲ್ಲಿ ಹಿರಿಯ ಮಗಳು, ಗದಗದಲ್ಲಿ ಇಬ್ಬರು ಕಿರಿಯ ಪುತ್ರರು ವ್ಯಾಸಂಗ ಮಾಡುತ್ತಿದ್ದರು, ಈ ಹತ್ಯೆಯಿಂದ ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ನನ್ನ ತಂದೆ ಯಾವಾಗಲೂ ನಮ್ಮ ಅಗತ್ಯಗಳನ್ನು ಪೂರೈಸುತ್ತಿದ್ದರು, ನಮ್ಮನ್ನು ನೋಡಿಕೊಂಡರು, ಆದರೆ ಅವರು ನನ್ನ ತಾಯಿಯ ಜೊತೆ ಕ್ರೂರಿಯಾಗಿ ವರ್ತಿಸುತ್ತಿದ್ದರು ಎಂದು ಕಿರಿಯ ಮಗ ಮಂಜುನಾಥ್ ಹೇಳಿದರು.

ನಮ್ಮ ತಂದೆ ತಾಯಿಯನ್ನು ಕೊಲ್ಲುತ್ತಾನೆಂದು ನಾವು ಎಂದಿಗೂ ಭಾವಿಸಿರಲಿಲ್ಲ. ಈಗ ನಾವು ಅನಾಥರಾಗಿದ್ದೇವೆ. ಪೊಲೀಸರು ನಮ್ಮ ತಂದೆಗೆ ಮರಣದಂಡನೆ ವಿಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಅವರು ಹಾಗೆ ಮಾಡದಿದ್ದರೆ, ನಾವೇ ಶಿಕ್ಷೆ ವಿಧಿಸುತ್ತೇವೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಯಾವುದೇ ಔಪಚಾರಿಕ ಆರೋಪಪಟ್ಟಿ ಪ್ರಕಟವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!