ಈಶಾನ್ಯ ಭಾರತದ ಮಹಿಳೆಗೆ ಕಿರುಕುಳ 
ರಾಜ್ಯ

'ನಮ್ಮ ಸ್ವಂತ ದೇಶದಲ್ಲೇ ರಕ್ಷಣೆ ಇಲ್ಲ': ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೇ Bengaluru Auto Driver ಕಿರುಕುಳ, ಈಶಾನ್ಯ ಭಾರತದ ಮಹಿಳೆ ಆರೋಪ

ಬೆಂಗಳೂರಿನ ಉಬರ್ ಆಟೋ ಚಾಲಕ ತನ್ನ ಆಟೋ ಹತ್ತಿದ ಈಶಾನ್ಯ ಭಾರತದ ಮಹಿಳೆಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಆಟೋ ಚಾಲಕರೊಬ್ಬರ ವಿರುದ್ಧ ಈಶಾನ್ಯ ಭಾರತದ ಮಹಿಳೆ ಗಂಭೀರ ಆರೋಪ ಮಾಡಿದ್ದು, ಕನ್ನಡ ಮಾತನಾಡಲು ಬಾರದಿದ್ದಕ್ಕೇ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹೌದು.. ಬೆಂಗಳೂರಿನ ಉಬರ್ ಆಟೋ ಚಾಲಕ ತನ್ನ ಆಟೋ ಹತ್ತಿದ ಈಶಾನ್ಯ ಭಾರತದ ಮಹಿಳೆಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಮಹಿಳೆ

ಆಟೋ ಚಾಲಕನೊಬ್ಬ ತನಗೆ ಅರ್ಥವಾಗದ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ. ಅಲ್ಲದೆ ಆಕೆಯನ್ನು ಹೊಡೆಯಲು ಪ್ರಯತ್ನಿಸುತ್ತಿರುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಬೆಂಗಳೂರು ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ.

ಮಹಿಳೆಯ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ಹೆಚ್ಚಿನ ವಿವರಗಳನ್ನು ನೀಡುವಂತೆ ಮಹಿಳೆಗೆ ಕೇಳಿದ್ದಾರೆ. ಘಟನೆಯ ಸ್ಥಳ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಕೋರಿದ್ದಾರೆ.

ಅಂತೆಯೇ ಉಬರ್ ಸಂಸ್ಥೆ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಕ್ಷಮೆಯಾಚಿಸಿದೆ. "ಈ ನಡವಳಿಕೆಯು ಅತ್ಯಂತ ಕಳವಳಕಾರಿಯಾಗಿದೆ ಮತ್ತು ಇದು ಸಂಭವಿಸಿದ್ದಕ್ಕೆ ನಮಗೆ ತುಂಬಾ ವಿಷಾದವಿದೆ" ಎಂದು ಅದು ಹೇಳಿದೆ.

ಇಷ್ಟಕ್ಕೂ ಆಗಿದ್ದೇನು?

ಇದೇ ಅಕ್ಟೋಬರ್ 2 ರಂದು ಈಶಾನ್ಯ ಭಾರತದ ಎನ್ ಬೀ ಎಂಬ ಮಹಿಳೆ ಉಬರ್ ಆಟೋ ಬುಕ್ ಮಾಡಿದ್ದು, ಈ ವೇಳೆ ರೈಡ್ ಸ್ವೀಕರಿಸಿದ ಆಟೋ ಚಾಲಕ ತಡವಾಗಿದ್ದಾನೆ. ಈ ವೇಳೆ ಮಹಿಳೆ ಎನ್ ಬೀ ರೈಡ್ ಕ್ಯಾನ್ಸಲ್ ಮಾಡಿದ್ದಾಳೆ. ಬಳಿಕ ಮತ್ತೊಂದು ರೈಡ್ ಆಟೋ ಬುಕ್ ಮಾಡಿಕೊಂಡು ಹೊರಟಿದ್ದಾಳೆ.

ಈ ವೇಳೆ ಆಕೆಯನ್ನು ತಡೆದ ಈ ಹಿಂದಿನ ರೈಡ್ ನ ಆಟೋ ಚಾಲಕ ಆಕೆಯೊಂದಿಗೆ ಜಗಳಕ್ಕಿಳಿದಿದ್ದಾನೆ. ರೈಡ್ ಯಾಕೆ ಕ್ಯಾನ್ಸಲ್ ಮಾಡಿದ್ದೀರಿ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ನೋಡ ನೋಡುತ್ತಲೇ ಹಲ್ಲೆಗೂ ಮುಂದಾಗಿದ್ದಾನೆ. ಇಷ್ಟು ಘಟನೆಯನ್ನು ಮಹಿಳೆ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ.

ವಾಕ್ಸಮರದ ವೇಳೆ ಆತ ಎನ್ ಬೀಯೊಂದಿಗೆ ಕನ್ನಡ ಮಾತಾಡು ಎಂದು ಗದರಿಸಿದ್ದಾನೆ, ಈ ವೇಳೆ ಆಕೆ ತನಗೆ ಕನ್ನಡ ಬರುವುದಿಲ್ಲ ಎಂದಾಗ ಆತ ಮತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ಈಶಾನ್ಯದಿಂದ ಬಂದವಳು ಎಂಬ ಕಾರಣಕ್ಕೆ ಅವನು ನನ್ನನ್ನು ಈ ರೀತಿ ನಿಂದಿಸುತ್ತಿದ್ದಾನೆ ಎಂದು ಅವಳು ವೀಡಿಯೊದಲ್ಲಿ ಹೇಳುತ್ತಿರುವುದು ಕೇಳಿಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಶಾಂತಿಗಿಂತ ರಾಜಕೀಯವೇ ಹೆಚ್ಚಾಯಿತು': ನೊಬೆಲ್ ಸಮಿತಿ ವಿರುದ್ಧ ಶ್ವೇತಭವನ ಕೆಂಡಾಮಂಡಲ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ಧರ್ಮಾಚರಣೆ ಹಕ್ಕಿಗೂ ನಿರ್ದಿಷ್ಟ ಸ್ಥಳಕ್ಕೂ ಸಂಬಂಧವಿಲ್ಲ: ಮಹಾಕಾಲ ದೇವಾಲಯಕ್ಕಾಗಿ ಮಸೀದಿ ಧ್ವಂಸ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾ

Maria Corina Machado: ನೋಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಕೊರಿನಾ ಮಚಾದೊ ಕುರಿತು ಆಸಕ್ತಿಕರ ಮಾಹಿತಿ ಇಲ್ಲಿದೆ!

SCROLL FOR NEXT