ಚನ್ನರಾಯಪಟ್ಟಣ: ಹಾಸನದ ಚನ್ನರಾಯಪಟ್ಟಣದಲ್ಲಿ ಜನರಲ್ಲಿ ಆತಂಕ ಸೃಷ್ಟಿಸಿದ ಕಾಡು ಕೋಣೆ ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದೆ. ಕಾಡಿನಿಂದ ನಾಡಿಗೆ ಬಂದಿದ್ದ ಕಾಡುಕೋಣವನ್ನು ಕಡೆಗೆ ಸೆರೆ ಹಿಡಿಯಲಾಗಿದೆ.
ಪಟ್ಟಣದಲ್ಲೆಲ್ಲಾ ಓಡಾಡಿ ಆತಂಕ ಸೃಷ್ಟಿಸಿದ್ದ ಕಾಡುಕೋಣ ದಾಳಿಯಿಂದ ಮಹಿಳೆಯೊಬ್ಬರು ಗಾಯಗೊಂಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸದಿಂದ ಕಾಡು ಕೋಣವನ್ನು ಸೆರೆ ಹಿಡಿದಿದ್ದಾರೆ.
ಒಮ್ಮೆ ಸೆರೆ ಹಿಡಿದು ಲಾರಿಗೆ ಹಾಕಿ ಸ್ಥಳಾಂತರ ಮಾಡುವ ವೇಳೆ ಎಸ್ಕೇಪ್ ಆಗಿದ್ದ ಕಾಡೆಮ್ಮೆಯನ್ನು ಮತ್ತೆ ಬೆನ್ನಟ್ಟಿ ಸೆರೆ ಹಿಡಿದು ಅರಣ್ಯ ಇಲಾಖೆ ಸ್ಥಳಾಂತರ ಮಾಡಿದೆ.
ಎರಡನೆ ಬಾರಿ ಅರಿವಳಿಕೆ ಮದ್ದು ನೀಡಿದ ಬಳಿಕ ಸ್ವಲ್ಪ ದೂರ ಓಡಿದ ಬಳಿಕ ಕಾಡುಕೋಣ ಕುಸಿದು ಬಿದ್ದಿದೆ. ಕೂಡಲೇ ವೈದ್ಯರು ರಿವರ್ಸಲ್ ಇಂಜೆಕ್ಷನ್ ನೀಡಿದ್ದಾರೆ. ಬಳಿಕ ಕ್ರೇನ್ ಮೂಲಕ ಬೃಹತ್ ಲಾರಿಗೆ ಕಾಡುಕೋಣ ತುಂಬಿ ಸ್ಥಳಾಂತರ ಮಾಡಿದ್ದಾರೆ.